ಬೆಂಗಳೂರು: ಶಿವಾಜಿನಗರದ ಬಸ್ ನಿಲ್ದಾಣದ ಬಳಿ ಎಗ್ ರೈಸ್ ಮಾರಾಟ ಮಾಡುತ್ತಿದ್ದವನ ಸೇರಿ ತಿನ್ನಲು ಬಂದಿದ್ದ ವ್ಯಕ್ತಿಯ ಮೇಲೂ ನಾಲ್ಕು ಅಂತಸ್ತಿನ ಮೇಲಿದ್ದ ವಾಟರ್ ಟ್ಯಾಂಕ್ ಬಿದ್ದಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇನ್ನುಳಿದಂತೆ ಓರ್ವ ವ್ಯಕ್ತಿಗೆ ಗಂಭೀರ ಗಾಯವಾಗಿದ್ದು, ಮತ್ತೊಬ್ಬನಿಗೆ ಸಣ್ಣಪುಟ್ಟ ಗಾಯಗಳಿಂದ ಬಚಾವ್ ಆಗಿದ್ದಾರೆ. ಕೂಡಲೇ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನೀರು ತುಂಬಿದ್ದ ಸಿಂಟ್ಯಾಕ್ಸ್ನಿಂದ ನೀರು ಲೀಕ್ ಆಗಿ ಗೋಡೆ ವೀಕ್ ಆಗಿದೆ. ಈ ಹಿನ್ನಲೆ ಗೋಡೆ ಹಾಗೂ ಟ್ಯಾಂಕ್ ಎರಡೂ ಕುಸಿದು, ಕೆಳಗಡೆ ವ್ಯಾಪಾರ ಮಾಡುತ್ತಿದ್ದವನ ಜೊತೆಗೆ ಅಂಗಡಿಗೆ ಬಂದಿದ್ದ ಗಿರಾಕಿಯ ಮೇಲೂ ಬಿದ್ದ ಈ ದುರ್ಘಟನೆ ನಡೆದಿದೆ.
ಸ್ಥಳಕ್ಕೆ ಶಿವಾಜಿನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಮೇಲ್ನೋಟಕ್ಕೆ ಟ್ಯಾಂಕ್ನ ಗೋಡೆ ಅವೈಜ್ಞಾನಿಕವಾಗಿ ನಿರ್ಮಿಸಿರುವ ಮಾಹಿತಿ ಇದ್ದು, ಬಿಬಿಎಂಪಿ ಪರೀಶೀಲನೆ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದು ಬೆಂಗಳೂರು ಪೂರ್ವ ವಿಭಾಗ ಡಿಸಿಪಿ ಭೀಮಾಶಂಕರ್ ಗುಳೇದ್ ಹೇಳಿದ್ದಾರೆ.