ಬೆಂಗಳೂರು: ಸಾಫ್ಟ್ವೇರ್ ಎಂಜಿನಿಯರೊಬ್ಬರ ಬೆತ್ತಲೆ ಫೋಟೋ ಲೀಕ್ ಮಾಡುವ ಬೆದರಿಕೆ ಹಾಕಿ ಸ್ನೇಹಿತನಿಂದಲೇ ಬರೋಬ್ಬರಿ 65 ಲಕ್ಷ ರೂ. ಹಣ ಪೀಕಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಬೆಂಗಳೂರು: ಸಾಫ್ಟ್ವೇರ್ ಎಂಜಿನಿಯರೊಬ್ಬರ ಬೆತ್ತಲೆ ಫೋಟೋ ಲೀಕ್ ಮಾಡುವ ಬೆದರಿಕೆ ಹಾಕಿ ಸ್ನೇಹಿತನಿಂದಲೇ ಬರೋಬ್ಬರಿ 65 ಲಕ್ಷ ರೂ. ಹಣ ಪೀಕಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಕಂಪನಿಯಲ್ಲಿ ಶಿವಮೊಗ್ಗ ಮೂಲದ ಯುವಕ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಕಳೆದ 18 ವರ್ಷಗಳಿಂದ ಟೆಕ್ಕಿಗೆ ಸ್ನೇಹಿತನಾಗಿದ್ದ ಆರೋಪಿ ಅಕ್ಷಯ್ಕುಮಾರ್, ಒಂದು ವರ್ಷದ ಹಿಂದೆ ಟೆಕ್ಕಿ ಬಳಿ ಬಂದು, ನಿನ್ನ ಖಾಸಗಿ ವಿಡಿಯೋ ಸಿಕ್ಕಿವೆ. ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕದೇ ಇರೋಕೆ 12 ಲಕ್ಷ ಹಣ ಕೇಳ್ತಿದ್ದಾನೆ ಅಂದಿದ್ದ. ಆ ಮಾತನ್ನು ನಂಬಿದ್ದ ಟೆಕ್ಕಿ 12 ಲಕ್ಷ ಹಣ ಕೊಟ್ಟಿದ್ದ. ಇದಾದ ನಂತರವೂ ಕಳೆದ ಒಂದು ವರ್ಷದಿಂದ ಇದೇ ಫೋಟೋ, ವಿಡಿಯೋ ವಿಚಾರ ಸಂಬಂಧ ಪದೇ ಪದೇ ಹಣ ಪಡೆದುಕೊಂಡು, ಒಟ್ಟು 65 ಲಕ್ಷ ರೂ. ಪೀಕಿದ್ದಾನೆ.
ಕೊನೆಗೆ ಅಕ್ಷಯ್ ಕುಮಾರ್ ಮೇಲೆ ಅನುಮಾನಗೊಂಡು ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ವಿಚಾರಣೆ ನಡೆಸಿದ ವೇಳೆ ಸ್ನೇಹಿತನಾದ ಅಕ್ಷಯ್ ಕುಮಾರ್ ಮತ್ತು ಭರತ್ ಅನ್ನುವವರೇ ಪ್ಲ್ಯಾನ್ ಮಾಡಿ ಮಾಡಿ ಈ ರೀತಿ ಹಣ ವಸೂಲಿ ಮಾಡಿದ್ದಾರೆ ಅನ್ನೋದು ಗೊತ್ತಾಗಿದೆ. ಸದ್ಯ ಇಬ್ಬರನ್ನ ವಿಧಾನಸೌಧ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.