ತುಮಕೂರು: ಕುವೈತ್ ದೇಶದಲ್ಲಿ ಮನೆ, ಅಡುಗೆ ಕೆಲಸ, ಕುಟುಂಬ ವೈದ್ಯರು ಹಾಗೂ ಡ್ರೈವರ್ ಹುದ್ದೆಗಳಿಗೆ ಅಂತಾರಾಷ್ಡ್ರೀಯ ವಲಸೆ ಮಾಹಿತಿ ಕೇಂದ್ರ-ಕರ್ನಾಟಕದಿಂದ ನೇರ ನೇಮಕಾತಿ ನಡೆಯಲಿದೆ. ಆಸಕ್ತಿ ಇರುವ ಅಭ್ಯರ್ಥಿಗಳು ಜೂನ್ ೩೦ರೊಳಗಾಗಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಆಸಕ್ತ ಆಭ್ಯರ್ಥಿಗಳ ವಯೋಮಿತಿ 30 ರಿಂದ 42 ವರ್ಷಗಳೊಳಗೆ ಇರಬೇಕು. ಇಂಗ್ಲೀಷ್ ಮತ್ತು ಅರೆಬಿಕ್ ಭಾಷಾಜ್ಞಾನ ಕಡ್ಡಾಯವಾಗಿರುತ್ತದೆ. ಮನೆ, ಅಡುಗೆ ಕೆಲಸ ಮತ್ತು ಡ್ರೈವರ್ ಹುದ್ದೆಗಳಿಗೆ ವಿದ್ಯಾರ್ಹತೆ ಅವಶ್ಯಕತೆ ಇರುವುದಿಲ್ಲ. ಕೆಲಸದ ಅನುಭವವನ್ನು ಹೊಂದಿರಬೇಕು. ಕುಟುಂಬ ವೈದ್ಯ ಹುದ್ದೆಗೆ ಎಂ.ಬಿ.ಬಿ.ಎಸ್. ಮತ್ತು ಎಂ.ಡಿ ವಿದ್ಯಾರ್ಹತೆಯ ಜೊತೆಗೆ 7 ವರ್ಷಗಳ ಅನುಭವನ್ನು ಹೊಂದಿರಬೇಕು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಛೇರಿ, ಮೊದಲನೇ ಮಹಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಟ್ಟಡ, ಗುಬ್ಬಿ ವೀರಣ್ಣ ಕಲಾಮಂದಿರದ ಪಕ್ಕ, ತುಮಕೂರು, ಮೊಬೈಲ್ ಸಂಖ್ಯೆ: 9071021143, 9448308308395, 9964156232 ನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ಕೋರಿದ್ದಾರೆ.