ಕುಂದಾಪುರ: ಬೈಂದೂರು ವಿಧಾನಸಭೆ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಅವರು ಕ್ಷೇತ್ರದ ಅಭಿವೃದ್ಧಿಗೆ ಗಣನೀಯವಾಗಿ ಸೇವೆಯನ್ನು ನೀಡಿದ್ದಾರೆ ಹಾಗೂ ಅವರ ಪಕ್ಷ ನಿಷ್ಠೆ ಮತ್ತು ಸಮಾಜಕ್ಕೆ ನೀಡಿದ ಸೇವೆಯನ್ನು ಗುರುತಿಸಿ ಸೂಕ್ತವಾದ ಸ್ಥಾನಮಾನ ನೀಡುವಂತೆ ಕೊಲ್ಲೂರು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಗೃಹ ಸಚಿವ ಡಾ.ಪರಮೇಶ್ವರ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.
ಸಮಿತಿಯ ಪ್ರಮುಖರಾದ ರಮೇಶ್ ಗಾಣಿಗ, ಗ್ರೀಷ್ಮಾ ಭಿಡೆ, ಪ್ರಕಾಶ್ ಕೊಲ್ಲೂರು, ಜಯಪ್ರಕಾಶ್,ವಾಸು, ವಿನಾಯಕ,ಚಂದ್ರು ಹರೀಶ್ ಮತ್ತಿತರರು ಉಪಸ್ಥಿತರಿದ್ದರು.