News Karnataka Kannada
Saturday, April 13 2024
Cricket
ತುಮಕೂರು

ಸಹಕಾರ ಸಚಿವರ ವಿರುದ್ದ ರೊಚ್ಚಿಗೆದ್ದ ಅರ್ಚಕರು, ಆಗಮಿಕರು: ಕ್ಷಮೆಯಾಚಿಸುವಂತೆ ಪ್ರತಿಭಟನೆ

Priests, agamiks protest in Tumakuru against co-operation minister, demand apology
Photo Credit : News Kannada

ತುಮಕೂರು: ಸಹಕಾರಿ ಸಚಿವಕೆ.ಏನ್. ರಾಜಣ್ಣನವರುದಾವಣಗೆರೆಯಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಬ್ರಾಹ್ಮಣರು 1 ರೂಪಾಯಿ ಕೊಟ್ಟು, ಹೂವು, ಊದುಬತ್ತಿ ತರುವುದಿಲ್ಲ ಎಂದು ತುಂಬು ಸಭೆಯಲ್ಲಿ ಹಾಸ್ಯಾಸ್ಪದವಾಗಿ ಮಾತನಾಡಿರುವುದು ಅರ್ಚಕ, ಆಗಮಿಕರಿಗೆ ನೋವುನ್ನುಂಟು ಮಾಡಿದ್ದು ಕೊಡಲೇ ಸಚಿವಕೆ.ಎನ್.ರಾಜಣ್ಣಅವರು ಅರ್ಚಕರು ಮತ್ತು ಆಗಮಿಕರಲ್ಲಿ ಕ್ಷಮೆಯಾಚಿಸಬೇಕೆಂದು ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ರಾಜ್ಯಧಾರ್ಮಿಕ ದತ್ತಿದೇವಾಲಯ ಅರ್ಚಕರು ಮತ್ತುಆಗಮಿಕರ ಸಂಘದ ವತಿಯಿಂದ ಸಚಿವ ರಾಜಣ್ಣ ಅವರು ಕ್ಷಮೆ ಕೋರುವಂತೆ ಪ್ರತಿಭಟನೆ ನಡೆಸಲಾಯಿತು.

ರಾಜ್ಯ ಧಾರ್ಮಿಕ ದತ್ತಿದೇವಾಲಯ ಅರ್ಚಕರ ಮತ್ತುಆಗಮಿಕರ ಸಂಘದ ರಾಜ್ಯಾಧ್ಯಕ್ಷ ಎಂ ಎಸ್ ವೆಂಕಟಚಾಲಯ್ಯ ಮಾತನಾಡಿ ಅರ್ಚಕರನ್ನು  ಅವಮಾನಿಸಿದ ಸಚಿವರಿಗೆ ಸಾಮಾನ್ಯ ಜ್ಞಾನವೂ ಇಲ್ಲ ಪುರಾತನ ಕಾಲದಿಂದಲೂ ಭಾರತದೇಶದಲ್ಲಿ ದೇವಾಲಯಗಳಲ್ಲಿ, ಸರ್ವಜನಾಂಗದವರು ಪೂಜಾ ಕೈಂಕರ್ಯ ಮಾಡುತ್ತಿದ್ದು, ಸಾರ್ವಜನಿಕರು ಕೊಡಲಿ, ಬಿಡಲಿ, ಪ್ರತಿನಿತ್ಯ ಪೂಜೆ ನಡೆಸಿಕೊಂಡು ಬರುತ್ತಿರುವ ನಮ್ಮಗಳಿಗೆ ಸಚಿವರು ಮಾಡಿದ ಅವಮಾನ. ನಮಗೆ ಘಾಸಿಯಾಗಿದ್ದು ಈ ಕೂಡಲೇ ಕ್ಷಮೆಯಾಚನೆ ಮಾಡಬೇಕೆಂದು ಒತ್ತಾಯಿಸಿದರು.

ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸುವಾಗ ರಾಗದ್ವೇಷ ಆಸೂಯೆ ಮಾಡದೇ ಎಲ್ಲರನ್ನೂ ಸಮಾನ ರೀತಿಯಲ್ಲಿ ನಿಷ್ಠೆಯಿಂದ ಪ್ರೀತಿಯಿಂದ ಸಚಿವನಾಗಿ ಕಾರ್ಯ ನಿರ್ವಹಿಸುತ್ತೇನೆಂದು ಬುದ್ಧ, ಬಸವ, ವಾಲ್ಮೀಕಿ, ಇವರುಗಳ ಮೇಲೆ ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸಿರುತ್ತೇನೆ ಎಂದು ಪ್ರಮಾಣ ವಚನ ಸ್ವೀಕರಿಸಿ ಈಗ ಗೌರವಯುತವಾಗಿರುವ  ನಮ್ಮಗೆ ನಿಂದನೇ ಮಾಡಿರುವು ದುಖಂಡನೀಯವಾಗಿದ್ದು ರಾಜ್ಯಪಾಲರು ಇವರನ್ನ ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದರು.

ಕಾಡಿನಲ್ಲಿಅನ್ಯರನ್ನು ಕೊಂದು ತಿನ್ನುತ್ತಿದ್ದ ಬೇಟೆಗಾರನಿಗೆ ಜ್ಞಾನೋದಯ ಮಾಡಿಸಿ ವಾಲ್ಮೀಕಿಯನ್ನಾಗಿಸಿದ್ದು ಬ್ರಾಹ್ಮಣರು. ಬುದ್ಧ, ಬಸವ ವಾಲ್ಮೀಕಿ ಅಂಬೇಡ್ಕರ್‌ ಅವರ ಹೆಸರಿನಲ್ಲಿಅಧಿಕಾರ ಹೊಂದಿರುವ ರಾಜಣ್ಣನವರ ವಿರುದ್ಧಅವರದೇ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದುಅವರು ಮೊಂಡುತನವನ್ನು ಬಿಟ್ಟು ಕೂಡಲೇ ಕ್ಷಮೆ ಯಾಚಿಸಬೇಕು ಇಲ್ಲವಾದರೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸುತ್ತೇವೆ ಎಂದರಲ್ಲದೇ ಕೂಡಲೇ ಇವರನ್ನು ಸಚಿವ ಸ್ಥಾನದಿಂದ ವಜಗೊಳಿಸಬೇಕು ಎಂದು ರಾಜ್ಯಪಾಲರು ಮತ್ತು ಸಭಾಧ್ಯಕ್ಷರಿಗೆ ಒತ್ತಾಯಿಸಿದರು.

ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕ ಮತ್ತುಆಗಮಿಕರ ಸಂಘದಉಪಾಧ್ಯಕ್ಷ ಜಾನಕಿರಾಮ್‌ಅವರು ಮಾತನಾಡಿ ಸಚಿವರಾದ ಕೆ ಎನ್‌ರಾಜಣ್ಣ ಅವರು ಕೂಡಲೇ ಅರ್ಚಕರು ಮತ್ತು ಬ್ರಾಹ್ಮಣರ ಪರವಾಗಿ ಕ್ಷಮೆಯಾಚಿಸಬೇಕು ರಾಜಣ್ಣನವರು ಯಾವದೇ ವಾಲಯಕ್ಕೆ ಹೂವು ಊದುಬತ್ತಿ ಕೊಡಿಸಿದ್ದಾರೆ ಅರ್ಚಕರುಗಳು ದೇವಾಲಯಕ್ಕೆ ಯಾರು ಬರದಿದ್ದರೂ ಕೂಡಾ ಸ್ವಂತ ಖರ್ಚಿನಿಂದ ಕೂಲಿ ದೇವಾಲಯ ನಿರ್ವಹಣೆ ಮಾಡುತ್ತಿರುತ್ತಾರೆ ಅಂತಹವರ ವಿರುದ್ಧ ಮನಸ್ಸಿಗೆ ಗಾಸಿಯಾಗುವಂತೆ ಮಾತನಾಡಿರುವುದು ಖಂಡನೀಯವೆಂದರು.

ಪ್ರತಿಭಟನೆ ಸಂದರ್ಭದಲ್ಲಿಅರ್ಚಕ ಆಗಮಿಕ ಸಂಘಟನೆಯ ಗೋಪಿನಾಥ್, ಗೌರಿಬಿದನೂರು ಪ್ರಕಾಶ್ , ಗುಂಡ್ಲುಪೇಟೆ ಸೋಮಶೇಖರ್, ಮದ್ದೂರು ಬಸವರಾಜು, ಹಲಗೂರು ಪ್ರಸಾದ್, ಸಾಸಲಕಟ್ಟೆ ಶ್ರೀನಿವಾಸ್, ಮಧುಗಿರಿಯರಘುನಂದನ್ , ನೆಲಮಂಗಲ ವಸಂತ್ ,ಅಣ್ಣಯ್ಯ ಸ್ವಾಮಿ ಸೇರಿದಂತೆ ನೂರಾರು ಅರ್ಚಕರು ಆಗಮಿಕರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು