News Karnataka Kannada
Sunday, May 05 2024
ಬೆಂಗಳೂರು

ಇಂದು ಚಂದ್ರಗ್ರಹಣ: ಪಿಲಿಕುಳದಲ್ಲಿ ಗ್ರಹಣ ವೀಕ್ಷಣೆ ಅವಕಾಶ

Lunar Eclipse Today: Eclipse To Be Viewed In Pilikula
Photo Credit : News Kannada

ಬೆಂಗಳೂರು: ಅ.28ರಂದು (ಇಂದು) ಈ ವರ್ಷದ ಕೊನೆಯ ಗ್ರಹಣವಾಗಿರುವ ಚಂದ್ರಗ್ರಹಣ ಸಂಭವಿಸಲಿದೆ. ಇಂದು ರಾತ್ರಿ 11.31ಕ್ಕೆ ಆರಂಭವಾಗಲಿರುವ ಈ ಭಾಗಶಃ ಚಂದ್ರಗ್ರಹಣ ಬೆಳಗ್ಗಿನ ಜಾವ 3.36 ಹಾಗೆ ಕೊನೆಯಾಗಲಿದೆ.

ರಾತ್ರಿ 11.31ರ ಹಾಗೆ ಗ್ರಹಣ ಆರಂಭವಾದರೂ ಅದರ ಸಂಪೂರ್ಣ ಛಾಯೆ ಮಧ್ಯರಾತ್ರಿ ಬಳಿಕವೇ ಅಂದರೆ ರಾತ್ರಿ 1.05ರ ಹಾಗೆ ಸಂಪೂರ್ಣವಾಗಿ ಆವರಿಸಿಕೊಳ್ಳಲಿದೆ. ಭಾನುವಾರ ರಾತ್ರಿ 2.24ರವರೆಗೂ ಇರಲಿದೆ. ಹೀಗಾಗಿ ಗ್ರಹಣದ ಈ ಅವಧಿ ಸುಮಾರು 1.19 ನಿಮಿಷದ್ದಾಗಿರಲಿದೆ. ಇಂದಿನ ಭಾಗಶಃ ಚಂದ್ರಗ್ರಹಣ ದೇಶಾದ್ಯಂತ ಗೋಚರಿಸಲಿದೆ.

ಪಿಲಿಕುಳದಲ್ಲಿ ಗ್ರಹಣ ವೀಕ್ಷಣೆ ಅವಕಾಶ: ಸೆ. 28 ಮತ್ತು 29ರ ನಡು ರಾತ್ರಿಯಲ್ಲಿ ಸುಮಾರು 1.05 ಗಂಟೆಯಿಂದ 2.20ರ ವರೆಗೆ ಭಾಗಶಃ ಪಾರ್ಶ್ವ ಚಂದ್ರಗ್ರಹಣ ಸಂಭವಿಸಲಿದ್ದು, ಮಂಗಳೂರು ಸೇರಿದಂತೆ ರಾಜ್ಯದೆಲ್ಲೆ ಡೆಯೂ ಗೋಚರಿಸಲಿದೆ. ಗ್ರಹಣಾಸಕ್ತರಿಗೆ ಇದನ್ನು ವೀಕ್ಷಿಸಲು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಸಂಜೆ 7.30ರಿಂದ ಅವಕಾಶ ಕಲ್ಪಿಸಲಾಗಿದೆ.

ದೂರದರ್ಶಕದ ಮೂಲಕ ಗುರು ಗ್ರಹ, ಶನಿ ಗ್ರಹ ಮತ್ತು ಚಂದ್ರನನ್ನು ಕಣ್ತುಂಬಿಕೊಳ್ಳಬಹುದು. ಇದೇ ಸಮಯದಲ್ಲಿ ಕಾಣಸಿಗುವ ನಕ್ಷತ್ರ ಗಳು ಮತ್ತು ನಕ್ಷತ್ರ ಪುಂಜಗಳನ್ನು ಗುರುತಿಸುವುದು ಮತ್ತು ಗ್ರಹಣಗಳ ಬಗ್ಗೆ ಮಾಹಿತಿಯನ್ನು ಕೇಂದ್ರದ ಸಿಬಂದಿ ನೀಡಲಿದ್ದಾರೆ. ಆಸಕ್ತರಿಗೆ ಮುಕ್ತ ಅವಕಾಶವಿದೆ ಎಂದು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕರು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು