ಬೆಂಗಳೂರು: ಬಾಲ್ಕನಿಯಿಂದ ಬಿದ್ದು ಟೆಕ್ಕಿಯೊಬ್ಬ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕೆಆರ್ ಪುರ ಬಳಿಯ ಕೊಡಿಗೇಹಳ್ಳಿಯಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.
ಮೃತನನ್ನು ದಿಪಾಂಶು ಶರ್ಮಾ(27) ಎಂದು ಗುರುತಿಸಲಾಗಿದೆ. ದಿಪಾಂಶು ಶರ್ಮಾ ತನ್ನ ಸ್ನೇಹಿತರ ಜೊತೆಗೆ ಪಾರ್ಟಿ ಮಾಡುತ್ತಿದ್ದ. ಇದೇ ಸಂದರ್ಭಲ್ಲಿ ಸಿಗರೇಟ್ ಸೇದಲೆಂದು ಟೆಕ್ಕಿ – ಬಾಲ್ಕನಿಗೆ ತೆರಳಿದ್ದನು. ಈ ವೇಳೆ ಆಯತಪ್ಪಿ ಅಪಾರ್ಟ್ಮೆಂಟ್ನ 33ನೇ ಫ್ಲೋರ್ನಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ.
ಈ ಸಂಬಂಧ ಕೆಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.