ಬೆಂಗಳೂರು: ಶಿಕ್ಷಕಿಯೊಬ್ಬರು ಹೋಮ್ ವರ್ಕ್ ಮಾಡಿಲ್ಲ ಎಂದು ವಿದ್ಯಾರ್ಥಿ ಮೇಲೆ ರಾಡ್ನಿಂದ ಹಲ್ಲೆ ಮಾಡಿದ ಘಟನೆ ಬೆಂಗಳೂರಿನ ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ.
ಏಳನೇ ತರಗತಿ ವಿದ್ಯಾರ್ಥಿ ಅಸೈನ್ಮೆಂಟ್ ಕಂಪ್ಲೀಟ್ ಮಾಡಿಲ್ಲ ಎಂದು ರಕ್ತ ಬರುವಂತೆ ಹೊಡದಿದ್ದಾರೆ. ಕೈಗೆ ರಾಡ್ನಲ್ಲಿ ಹೊಡೆದ ಪರಿಣಾಮ ಗಂಭೀರ ಗಾಯವಾಗಿದ್ದು, ವಿದ್ಯಾರ್ಥಿ ಕೈಗೆ ಆರು ಹೊಲಿಗೆ ಹಾಕಲಾಗಿದೆ. ಈ ಘಟನೆ ಮೂರು ದಿನಗಳ ಹಿಂದೆ ನಡೆದಿದ್ದು, ಶಾಲಾ ಆಡಳಿತ ಮಂಡಳಿಯಿಂದ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ಆರೋಪ ಕೂಡ ಕೇಳಿಬಂದಿದೆ. ವಿದ್ಯಾರ್ಥಿ ಫರ್ದೀನ್ಗೆ ಹುಳಿಮಾವು ಸಾಯಿ ರಾಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
‘ಲಾರ್ಡ್ಸ್ ಶಾಲೆಯ ಶಿಕ್ಷಕಿಯಿಂದ ಹಲ್ಲೆ ವಿಚಾರ ದೂರು ಬಂದಿದ್ದು, ಘಟನೆ ಮೂರು ದಿನಗಳ ಹಿಂದೆ ನಡೆದಿದೆ. ನಮಗೆ ನಿನ್ನೆ ಈ ಬಗ್ಗೆ ಮಾಹಿತಿ ತಿಳಿದಿದೆ. ಈ ಹಿನ್ನಲೆ ಘಟನೆಯ ವಿಚಾರಣೆಗೆ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನ ಕಳುಹಿಸಿದ್ದೇವೆ. ಜೊತೆಗೆ ಶಾಲೆಗೆ ನೋಟಿಸ್ ಕೊಡುತ್ತಾ ಇದ್ದೀವಿ. ಕಂಪ್ಲೀಟ್ ವರದಿ ಪಡೆದು ಶಾಲೆಗೆ ನೋಟಿಸ್ ಕೊಟ್ಟು ಶಿಕ್ಷಕಿಯ ವಿಚಾರಣೆ ಮಾಡುತ್ತೇವೆ. ಶಾಲೆಯಿಂದ ಮಾಹಿತಿ ಬಂದ್ ಬಳಿಕ ಸೂಕ್ತ ಕ್ರಮ ಕೈಗೊಳ್ಳುತ್ತವೆ ಎಂದು ಬಿಎಇ ಶಶಿಕಲಾ ಹೇಳಿದ್ದಾರೆ.