Bengaluru 23°C
Ad

ಬೆಂಗಳೂರಿನಲ್ಲಿ ಉಚಿತ ದಂತ ಚಿಕಿತ್ಸಾಲಯ ಆರಂಭಕ್ಕೆ ಚಿಂತನೆ ನಡೆಸಿದ ಸರ್ಕಾರ

ರಾಜಧಾನಿಯಲ್ಲಿ ಸರ್ಕಾರಿ ಡೆಂಟಲ್ ಕ್ಲಿನಿಕ್ ಶುರು ಮಾಡುವಂತೆ ಆರೋಗ್ಯ ಇಲಾಖೆ ಹಾಗೂ ಸರ್ಕಾರಕ್ಕೆ ಪತ್ರ ಬರೆದು ಜನರು ಮನವಿ ಮಾಡಿದ್ದಾರೆ.

ಬೆಂಗಳೂರು : ರಾಜಧಾನಿಯಲ್ಲಿ ಸರ್ಕಾರಿ ಡೆಂಟಲ್ ಕ್ಲಿನಿಕ್ ಶುರು ಮಾಡುವಂತೆ ಆರೋಗ್ಯ ಇಲಾಖೆ ಹಾಗೂ ಸರ್ಕಾರಕ್ಕೆ ಪತ್ರ ಬರೆದು ಜನರು ಮನವಿ ಮಾಡಿದ್ದಾರೆ.

ಸರ್ಕಾರಿ ಡೆಂಟಲ್ ಕ್ಲಿನಿಕ್ ಗಳ ಆರಂಭಕ್ಕೆ ಮನವಿ ಬೆನ್ನಲೆ ನಮ್ಮ ಕ್ಲಿನಿಕ್ ಗಳ ಮಾದರಿಯಲ್ಲೇ ಬೆಂಗಳೂರಿನ ಪ್ರತಿ ವಲಯದಲ್ಲಿ ಉಚಿತ ದಂತ ಚಿಕಿತ್ಸಾಲಯಗಳ ಆರಂಭಕ್ಕೆ ಆರೋಗ್ಯ ಇಲಾಖೆ ಮುಂದಾಗಿದೆ.

ಬೆಂಗಳೂರಿನ ಸರ್ಕಾರಿ ಡೆಂಟಲ್ ಕಾಲೇಜ್ ಗಳ ಸಹಯೋಗದೊಂದಿಗೆ ಡೆಂಟಲ್ ಕ್ಲಿನಿಕ್ ಆರಂಭಕ್ಕೆ ಚಿಂತನೆ ನಡೆದಿದೆ. ಬಡ ಹಾಗೂ ಮದ್ಯಮ ವರ್ಗದ ಜನರು ಬೆಂಗಳೂರಿನಲ್ಲಿ ಖಾಸಗಿ ದಂತ ಚಿಕಿತ್ಸಾಲಯಗಳಲ್ಲಿ ಚಿಕಿತ್ಸೆ ಪಡೆಯುವುದು ದುಬಾರಿಯಾಗಿದೆ.

ಸರ್ಕಾರಿ ದಂತ ಚಿಕಿತ್ಸಾಲಯಗಳ ಪ್ರಾರಂಭಿಸುವಂತೆ ಸಾಕಷ್ಟು ಜನರು ಸರ್ಕಾರಕ್ಕೆ ಮನವಿ ಕೂಡಾ ಮಾಡಿದ್ದಾರೆ. ಹೀಗಾಗಿ ಆರೋಗ್ಯ ಇಲಾಖೆ ಬೆಂಗಳೂರಿನ ಎಂಟು ವಲಯಗಳಲ್ಲಿ ಎಂಟು ದಂತ ಚಿಕಿತ್ಸಾಲಯಗಳ ಪ್ರಾರಂಭಕ್ಕೆ ಮುಂದಾಗಿದೆ.

ಸಾರ್ಕರ ಅನುಮತಿ ನೀಡಿದರೆ ಮುಂದಿನ ಮೂರು ತಿಂಗಳಲ್ಲಿ ಎಂಟು ವಲಯಗಳಲ್ಲಿ ಡೆಂಟಲ್ ಕ್ಲಿನಿಕ್ ಆರಂಭವಾಗಲಿದೆ. ಸರ್ಕಾರ ಪ್ರಾರಂಭದ ಹಂತದಲ್ಲಿ ನಮ್ಮ ಕ್ಲಿನಿಕ್ ಮಾದರಿಯಲ್ಲಿ ಡೆಂಟಲ್ ಕ್ಲಿನಿಕ್ ಶುರು ಮಾಡಲು ಪ್ಲಾನ್ ಮಾಡಿದ್ದು ಬಡ ರೋಗಿಗಳ ಆರೋಗ್ಯದ ದೃಷ್ಠಿಯಿಂದ ಒಳ್ಳೆಯ ಯೋಜನೆಯಾಗಿದೆ.

Ad
Ad
Nk Channel Final 21 09 2023
Ad