News Karnataka Kannada
Saturday, May 18 2024
ರಾಮನಗರ

ರಾಮನಗರ: ರೋಟರಿ ಸಿಲ್ಕ್‌ಸಿಟಿ ಶಾಖೆಗೆ ಹಲವು ಪ್ರಶಸ್ತಿ

Ramanagara: Rotary Silk City branch receives many awards
Photo Credit : By Author

ರಾಮನಗರ: ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಸಾಧನೆಗೆ ರೋಟರಿ ಸಿಲ್ಕ್‌ಸಿಟಿ ಶಾಖೆಗೆ ಹಲವು ಪ್ರಶಸ್ತಿಗಳು ಲಭಿಸಿದೆ. ರೋಟರಿ ಜಿಲ್ಲಾ 3190 ವ್ಯಾಪ್ತಿಯಲ್ಲಿ ಉತ್ತಮ ಸೇವೆ ಸಲ್ಲಿಸಿರುವ ತೃಪ್ತಿಯಿದೆ ಎಂದು ಸಿಲ್ಕ್‌ಸಿಟಿ ಅಧ್ಯಕ್ಷ ಆರ್.ಶಿವರಾಜ್ ಹೇಳಿದರು.

ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷರಾಗಿ ಸೇವಾವಧಿ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಏಳು ವರ್ಷಗಳಲ್ಲಿ ಸೇವೆ ಸಲ್ಲಿಸಿದ ಎಲ್ಲಾ ಅಧ್ಯಕ್ಷರುಗಳ ಅವಧಿಗಳಲ್ಲಿ ಸಿಲ್ಕ್‌ಸಿಟಿ ಶಾಖೆಗೆ ಹತ್ತಾರು ಪ್ರಶಸ್ತಿಗಳು ಲಭ್ಯವಾಗಿದೆ. ಅಂತೆಯೇ 2022-23ನೇ ಸಾಲಿಗೆ ಸ್ಟಾರ್ ವಾಕರ್ ಘೋಷಣೆಯೊಂದಿಗೆ ಪ್ರಶಸ್ತಿಗಳು ಲಭ್ಯವಾಗಿವೆ ಎಂದು ಹರ್ಷ ವ್ಯಕ್ತಪಡಿಸಿದರು.

2022ರ ಆಗಸ್ಟ್ ತಿಂಗಳಲ್ಲಿ ನಗರದ ಸೀರಹಳ್ಳದಲ್ಲಿ ಪ್ರವಾಹ ಬಂದು ಅರ್ಕೇಶ್ವರ ಕಾಲೋನಿ ಮುಂತಾದ ಬಡಾವಣೆಗಳಲ್ಲಿ ವಾಸಿಸುವ ಮನೆಗಳಿಗೆ ನೀರು ನುಗ್ಗಿ ತೀವ್ರ ಹಾನಿ ಉಂಟಾಗಿತ್ತು. ಆ ಸಂದರ್ಭದಲ್ಲಿ ರೋಟರಿ ಜಿಲ್ಲಾ 3190ರ ಪೈಕಿ 29ರೋಟರಿ ಶಾಖೆಗಳು ಒಗ್ಗೂಡಿ ಸುಮಾರು 30 ಲಕ್ಷ ರೂ ಮೌಲ್ಯದ ಪರಿಹಾರ ಸಾಮಾಗ್ರಿಗಳನ್ನು ಸಂತ್ರಸ್ತರಿಗೆ ಒದಗಿಸಿದ್ದು ಸುಮಾರು 420 ಕುಟುಂಬಗಳನ್ನು ಸಿಲ್ಕ್‌ಸಿಟಿ ತಲುಪಿದೆ. ಇಂದು ಲಭಿಸಿರುವ ಪ್ರಶಸ್ತಿಗಳಿಗೆ ಈ ಸ್ಪಂದನೆಯೂ ಕಾರಣವಾಗಿದೆ ಎಂದರು.

ನಗರದ ಐಜೂರು ವೃತ್ತದಲ್ಲಿ ಕರುಣೆಯ ಗೂಡು ಎಂಬ ಯೋಜನೆ ಅನುಷ್ಠಾನವಾಗಿದೆ. ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಮತ್ತು ಆಟೋ ನಿಲ್ದಾಣದ ಬಳಿ ಇರುವ ಈ ವ್ಯವಸ್ಥೆಯಲ್ಲಿ ಸಾರ್ವಜನಿಕರು ತಾವು ಉಪಯೋಗಿಸಿದ ಬಟ್ಟೆಗಳನ್ನು ಇಲ್ಲಿ ಇಡುತ್ತಾರೆ. ಅಗತ್ಯ ಇರುವವರು ನೇರವಾಗಿ ಇಲ್ಲಿ ಬಂದು ತಮಗೆ ಇಷ್ಟವಾದ ಬಟ್ಟೆಯನ್ನು ಕೊಂಡೊಯ್ಯುತ್ತಾರೆ. ಕರುಣೆಯ ಗೂಡು ಸಾರ್ವಜನಿಕರ ಪ್ರಶಂಸೆಗೂ ಪಾತ್ರವಾಗಿದೆ ಎಂದ ಅವರು ಸದಸ್ಯತ್ವ, ಪಬ್ಲಿಕ್ ಇಮೇಜ್, ಕಾವಧೇನು ಮುಂತಾದ ವಿಭಾಗಗಳಲ್ಲಿ ತಮ್ಮ ಸಂಸ್ಥೆಗೆ ಪ್ರಥಮ ಸ್ಥಾನ ಲಭಿಸಿದೆ ಎಂದು ಮಾಹಿತಿ ನೀಡಿದರು.

ರೋಟರಿ ಸಿಲ್ಕ್‌ಸಿಟಿ ಮಾಜಿ ಅಧ್ಯಕ್ಷ ಎನ್.ರವಿಕುಮಾರ್ ಮಾತನಾಡಿ ಇಲ್ಲಿನ ಬಿಜಿಎಸ್ ಅಂಧರ ಶಾಲೆಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರೋಟರಿ ವತಿಯಿಂದ 14 ಗಣಕ ಯಂತ್ರಗಳನ್ನು ಕೊಡುಗೆ ನೀಡಲಾಗಿದೆ. ಈ ಗಣಕ ಯಂತ್ರಗಳು ಬ್ರೈಲ್ ಲಿಪಿಯನ್ನು ಓದಿ ಹೇಳುತ್ತದೆ. ಇದನ್ನು ಕೇಳಿಸಿಕೊಂಡ ಅಂಧ ಮಕ್ಕಳು ತಾವು ಬರೆದಿರುವುದರಲ್ಲಿ ತಪ್ಪುಗಳಿದ್ದರೆ ಸರಿಪಡಿಸಿಕೊಳ್ಳಲು ಸಹಾಯಕವಾಗಿದೆ. ಮುಂಬರುವ ದಿನಗಳಲ್ಲಿ ಅಂಧರು ಬಳಸಲು ಅತ್ಯಾಧುನಿಕ ವಾಕಿಂಗ್ ಸ್ಟಿಕ್‌ನ್ನು ಆಮದು ಮಾಡಿಕೊಂಡು ಬಿಜಿಎಸ್ ಶಾಲೆಯ ಅಂಧ ವಿದ್ಯಾರ್ಥಿಗಳಿಗೆ ವಿತರಿಸುವ ಉದ್ದೇಶವಿದೆ ಎಂದರು.

ವಿದ್ಯಾರ್ಥಿಗಳು ರಸ್ತೆಯಲ್ಲಿ ಈ ವಾಕಿಂಗ್ ಸ್ಟಿಕ್ ಬಳಸಿಕೊಂಡು ನಡೆದು ಹೋಗುವಾಗ ಎದುರಾಗುವ ಅಡೆತಡೆಗಳ ಬಗ್ಗೆ ಸಂದೇಶ ರವಾನಿಸಿ ಎಚ್ಚರಿಕೆ ನೀಡುತ್ತದೆ. ಇಂತಹ ಅಧುನಿಕ ವಾಕಿಂಗ್ ಸ್ಟಿಕ್‌ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು. ಅಂಧರಿಗೆ ಉಪಯುಕ್ತವಾಗುವ ಈ ಹೊಸ ಅವಿಷ್ಕಾರದ ವಾಕಿಂಗ್ ಸ್ಟಿಕ್ ವಿತರಣೆ ಮಾಡುತ್ತಿರುವ ಮೊದಲ ಸಂಸ್ಥೆ ಎಂಬ ಕೀರ್ತಿ ರೋಟರಿ ಸಿಲ್ಕ್ ಸಿಟಿಗೆ ಸಲ್ಲಲಿದೆ ಎಂದು ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು