ವಿಷ್ಣುವರ್ಧನ್ ರಮೇಶ್ ಅರವಿಂದ್, ಸೌಂದರ್ಯಾ, ಪ್ರೇಮಾ ನಟಿಸಿ ದೊಡ್ಡ ಹಿಟ್ ಆಗಿದ್ದ ಕನ್ನಡದ ಆಪ್ತಮಿತ್ರ ಸಿನಿಮಾ ತಮಿಳಿನಲ್ಲಿ ಚಂದ್ರಮುಖಿ ಹೆಸರಿನಲ್ಲಿ ರೀಮೇಕ್ ಆಗಿತ್ತು. ರಜನೀಕಾಂತ್ ನಟಿಸಿದ್ದ ಚಂದ್ರಮುಖಿ ಸಿನಿಮಾ ತಮಿಳಿನಲ್ಲಿಯೂ ಭಾರಿ ದೊಡ್ಡ ಹಿಟ್ ಆಗಿತ್ತು. ಅದಾದ ಬಳಕ ಕನ್ನಡದಲ್ಲಿ ಆಪ್ತಮಿತ್ರ 2 (ಆಪ್ತರಕ್ಷಕ) ಸಿನಿಮಾ ಬಿಡುಗಡೆ ಆಗಿ ಸಾಧಾರಣ ಯಶಸ್ಸು ಕಂಡಿತು. ಆದರೆ ತಮಿಳಿನಲ್ಲಿ ಈಗ ಚಂದ್ರಮುಖಿ 2 ಬರುತ್ತಿದೆ. ಇದು ಆಪ್ತಮಿತ್ರ 2 ಸಿನಿಮಾದ ರೀಮೇಕ್ ಆಗಿರಬಹುದಾ ಎಂಬ ಅನುಮಾನ ಹುಟ್ಟಿಕೊಂಡಿದೆ.
ಪಿ ವಾಸು ಅವರೇ ಈ ಸಿನಿಮಾವನ್ನೂ ನಿರ್ದೇಶನ ಮಾಡಿದ್ದಾರೆ. ಚಂದ್ರಮುಖಿ 2 ಸಿನಿಮಾದಲ್ಲಿ ರಜನೀಕಾಂತ್ ಬದಲಿಗೆ ನಾಯಕ ಸ್ಥಾನವನ್ನು ನೃತ್ಯಗಾರ, ನಟ, ನಿರ್ದೇಶಕ ರಾಘವ್ ಲಾರೆನ್ಸ್ ಹಾಗೂ ಬಾಲಿವುಡ್ನ ಸ್ಟಾರ್ ನಟಿ ಕಂಗನಾ ಇದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸೌತ್ ಸಿನಿ ದುನಿಯಾದ ಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಚಂದ್ರಮುಖಿ 2 ಸಿನಿಮಾವನ್ನು ಪ್ಯಾನ್ ಇಂಡಿಯಾ ಸಿನಿಮಾ ಅನ್ನಾಗಿ ಮಾಡಿ ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಚಿತ್ರ ಸೆಪ್ಟಂಬರ್ 19ರ ಗಣೇಶ್ ಚತುರ್ಥಿಗೆ ವಿಶ್ವಾದ್ಯಂತ ತೆರೆಕಾಣಲಿದೆ ಎಂದು ಫಿಲ್ಮಿ ಮೂಲಗಳು ತಿಳಿಸಿವೆ.