News Karnataka Kannada
Sunday, April 28 2024
ರಾಮನಗರ

ರಾಮನಗರ: ರಾಮನಗರದಲ್ಲಿ  ಮಣ್ಣಿನಡಿ ಅಪರೂಪದ ಕಟ್ಟಡ ಪತ್ತೆ

Rare building found under mud in Ramanagara
Photo Credit : News Kannada

ರಾಮನಗರ: ಶ್ರೀರಂಗಪಟ್ಟಣದಲ್ಲಿರುವ ಟಿಪ್ಪು ಸುಲ್ತಾನ್ ಕಾಲದ ಬಂಧಿಖಾನೆ ಮತ್ತು ಮದ್ದಿನ ಮನೆ ಹೋಲುವ ಕಟ್ಟಡವೊಂದು ರಾಮನಗರದ  ರೈಲ್ವೆ ನಿಲ್ದಾಣದ ರಸ್ತೆ ಬದಿಯಲ್ಲಿರುವ ಯೂಕೋ ಬ್ಯಾಂಕ್ ಪಕ್ಕದಲ್ಲಿರುವ ಕುಮುಂದಾನ್ ಮೊಹಲ್ಲಾ ನಿವಾಸಿ ನವಾಜ್ ಷರೀಫ್  ಎಂಬುವರಿಗೆ ಸೇರಿದ  ಖಾಲಿ ನಿವೇಶನದಲ್ಲಿ ಪತ್ತೆಯಾಗಿದೆ.

ಹೊಸ ಕಟ್ಟಡ ನಿರ್ಮಾಣ ಮಾಡಲು ಫಿಲ್ಲರ್  ಹಾಕಲು ಜೆಸಿಬಿ ಸಹಾಯದಿಂದ ಭೂಮಿಯನ್ನು ಅಗೆಯುತ್ತಿದ್ದ ವೇಳೆ ನೆಲಮಟ್ಟದಲ್ಲಿ ಗಟ್ಟಿಯಾದ ಗೋಡೆ ಗೋಚರಿಸಿದೆ. ಈ ಗೋಡೆಯನ್ನು ಕೊರೆದು ನೋಡಿದಾಗ ಒಳ ಭಾಗದಲ್ಲಿ ನಾಲ್ಕು ಕಮಾನುಗಳಿದ್ದ  ಕಟ್ಟಡವೊಂದು ಕಾಣಿಸಿದೆ. ಈ ಕಟ್ಟಡದ ಮಧ್ಯ ಭಾಗದಲ್ಲಿ ಕಮಾನುಗಳಿದ್ದು, ನಾಲ್ಕು ಭಾಗವೂ ಗೋಡೆಯಿಂದ ಆವೃತವಾಗಿದೆ. ಇದು ಟಿಪ್ಪು ಕಾಲದ ಬಂಧಿಖಾನೆ ಮತ್ತು ಮದ್ದಿನ ಮನೆಯನ್ನು ಹೋಲುತ್ತಿರುವುದು ಕಂಡು ಬಂದಿದೆ.

ಈ ಜಾಗದಲ್ಲಿದ್ದ ಹೆಂಚಿನ ಮನೆಗಳನ್ನು ಕೆಡವಿ ಅಂಗಡಿ ಮಳಿಗೆ ನಿರ್ಮಿಸಲಾಗಿತ್ತು. ಈಗ ಅಂಗಡಿ ಮಳಿಗೆಯನ್ನೂ ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಾಣ ಕಾರ್ಯಕ್ಕೆ ನಿವೇಶನದ ಮಾಲೀಕರು ಮುಂದಾಗಿದ್ದರು. ನೆಲಮಟ್ಟದಲ್ಲಿ ಕಟ್ಟಡ ಕಾಣಿಸಿರುವುದು ನಿವೇಶನ ಮಾಲೀಕರಿಗೂ ಆಶ್ಚರ್ಯ ಉಂಟು ಮಾಡಿದೆ.

ನೆಲಮಟ್ಟದಲ್ಲಿ ಕಟ್ಟಡ ಪತ್ತೆಯಾದ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ  ಕಾಡ್ಗಿಚ್ಚಿ ಹರಡಿದ ಹಿನ್ನೆಲೆಯಲ್ಲಿ ನೂರಾರು ಜನರು ಆಗಮಿಸಿ ಸ್ಥಳ ವೀಕ್ಷಿಸಿದ್ದು. ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಅವರ ಆಳ್ವಿಕೆಯ ಕಾಲದಲ್ಲಿ ಮದ್ದು ಗುಂಡುಗಳನ್ನು ಬಿಸಿಲು ಮಳೆಯಿಂದ ಸಂರಕ್ಷಿಸಿಡಲು ಮದ್ದಿನ ಮನೆ (ಶಸ್ತ್ರಾಗಾರ) ವಿಶೇಷ ಕಟ್ಟಡಗಳನ್ನು ನಿರ್ಮಿಸುತ್ತಿದ್ದರು. ಮದ್ದು ಗುಂಡುಗಳು ಹೆಚ್ಚು ಅವಧಿವರೆಗೂ ಕೆಡದಂತೆ ನೋಡಿಕೊಳ್ಳುವ ವಿಶೇಷ ತಂತ್ರಗಾರಿಕೆಯನ್ನು ಮದ್ದಿನ ಮನೆಗೆ ಅಳವಡಿಸಲಾಗಿತ್ತು. ಇದೇ ಮಾದರಿಯಲ್ಲಿ ಬಂಧಿಖಾನೆಗಳನ್ನು  ನಿರ್ಮಾಣ ಮಾಡುತ್ತಿದ್ದರು.

ಶ್ರೀರಂಗಪಟ್ಟಣದಲ್ಲಿರುವ ಮದ್ದಿನ ಮನೆ ಚುರಕಿ ಗಾರೆಯಿಂದ (ಸುಣ್ಣ, ಸುಟ್ಟ ಇಟ್ಟಿಗೆ, ಮರವಜ್ರ ಮಿಶ್ರಣ) ಬಳಸಿ ನಿರ್ಮಿಸಿದ್ದಾಗಿದೆ. ರಾಮನಗರದಲ್ಲಿ ಗೋಚರಿಸಿರುವ ಗೋಡೆಯೂ ಒಂದು  ಮೀಟರ್ ದಪ್ಪ ಇದ್ದು, ಮೇಲ್ಭಾಗದಲ್ಲಿ ಬೆಳಕಿನ ಕಿಂಡಿ ಇಡಲಾಗಿದೆ. ಇದಕ್ಕೂ ಶ್ರೀರಂಗಪಟ್ಟಣದ ಕಟ್ಟಡಕ್ಕೂ ಸಾಮ್ಯತೆ ಕಾಣುತ್ತಿದೆ. ಟಿಪ್ಪು ಸುಲ್ತಾನ್ ರಾಮನಗರದ ಜಾಮಿಯಾ ಮಸೀದಿ ಸೇರಿದಂತೆ ಹಲವು ಸ್ಥಳಗಳಿಗೆ ಭೇಟಿ ನೀಡಿರುವುದು ಇತಿಹಾಸದಲ್ಲಿ ಉಲ್ಲೇಖವಾಗಿದೆ. ಅಲ್ಲದೆ, ಟಿಪ್ಪು ಕಾಲದ ಇನ್ನಷ್ಟು ಕಟ್ಟಡಗಳು ನೆಲದಲ್ಲಿ ಹುದುಗಿ ಹೋಗಿರುವ ಸಾಧ್ಯತೆಗಳಿವೆ. ಈಗ ಕಟ್ಟಡ ಪತ್ತೆಯಾದ ಕುಮುದಾನ್ ಮೊಹಲ್ಲಾದಲ್ಲಿಯೇ ಟಿಪ್ಪು ಕಾಲದ ಬಾವಿ, ಸುರಂಗವೂ ಪತ್ತೆಯಾಗಿತ್ತು ಎಂದು ಈ ಭಾಗದ ಹಿರಿಯರು ಹೇಳುತ್ತಿದ್ದಾರೆ.

ನಿವೇಶನದ ಮಾಲೀಕರಾದ ನವಾಜ್ ಅಹಮದ್ ಮಾತನಾಡಿ, ಈ ಜಾಗದಲ್ಲಿ ಹಳೇಯ ಕಟ್ಟಡವನ್ನು ತೆರವು ಮಾಡಿ ಹೊಸ ಅಂಗಡಿಗಳನ್ನು ನಿರ್ಮಾಣ ಮಾಡುತ್ತಿದ್ದೇವೆ. ಹಿರಿಯರು ಇಲ್ಲೊಂದು ನೀರಿನ ಟ್ಯಾಂಕ್ ಇತ್ತೆಂದು ಹೇಳಿದ್ದರು. ಆ ನಂತರ ಅದು ಮಣ್ಣಿನಿಂದ ಭರ್ತಿಯಾಗಿರಬೇಕೆಂದು ನಾವು ಭಾವಿಸಿದ್ದೆವು. ನಮ್ಮ ಬಳಿಯಿರುವ ದಾಖಲೆಗಳ ಪ್ರಕಾರ 1932ರಲ್ಲಿ ಇಲ್ಲೊಂದು ವಾಟರ್ ಟ್ಯಾಂಕ್ ಇತ್ತು ಎಂದು ಉಲ್ಲೇಖವಾಗಿದೆ. 1965-67ರಲ್ಲಿ ಅಬ್ದುಲ್ ಅಜೀಂ ಎಂಬುವರು ಹರಾಜಿನಲ್ಲಿ ಪುರಸಭೆಯಿಂದ ಖರೀದಿಸಿದ್ದರು. ಅವರು ಜಾಗವನ್ನು ಬೇರೊಬ್ಬರಿಗೆ ದಾನ ಮಾಡಿದ್ದರು. 2009ರಲ್ಲಿ ನಾವು ಈ ಜಾಗವನ್ನು ಖರೀದಿ ಮಾಡಿದ್ದಾಗಿ ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು