News Karnataka Kannada
Sunday, May 05 2024
ರಾಮನಗರ

ವಿಶ್ವ ಪಾರಂಪರಿಕ ತಾಣವಾಗಿ ಬಾನಂದೂರು ಅಭಿವೃದ್ಧಿ: ಯೋಜನೆಗೆ ಡಿಸಿಎಂ ಭೂಮಿಪೂಜೆ

Balaganga 20072021
Photo Credit :

ರಾಮನಗರ: ಆದಿಚುಂಚಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾಗಿದ್ದ ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಹುಟ್ಟೂರು ಬಾನಂದೂರು ಗ್ರಾಮವನ್ನು ವಿಶ್ವದರ್ಜೆಯ ಪಾರಂಪರಿಕ ತಾಣವನ್ನಾಗಿ ಅಭಿವೃದ್ಧಿಪಡಿಸುವ ಯೋಜನೆಗೆ ಸೋಮವಾರ ಚಾಲನೆ ನೀಡಲಾಯಿತು.

ಬಾನಂದೂರು ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ, ಅರಣ್ಯ ಮತ್ತು ಕನ್ನಡ-ಸಂಸ್ಕೃತಿ ಖಾತೆ ಸಚಿವ ಅರವಿಂದ ಲಿಂಬಾವಳಿ ಯೋಜನೆಗೆ ಭೂಮಿಪೂಜೆ ನೆರೆವೇರಿಸಿದರು.

ಉಪ ಮುಖ್ಯಮಂತ್ರಿ ಮಾತನಾಡಿ, ಈ ಯೋಜನೆಯನ್ನು ಕಾರ್ಯಗತ ಮಾಡಲಿರುವ ಖಾಸಗಿ ಸಂಸ್ಥೆಯು 125 ಕೋಟಿ ರೂ. ವೆಚ್ಚದ ಸಮಗ್ರ ಯೋಜನಾ ವರದಿಯನ್ನು (ಡಿಪಿಆರ್) ತಯಾರಿಸಿದೆ.‌ ಸರಕಾರ 2019-20ನೇ ಸಾಲಿನ ಮುಂಗಡ ಪತ್ರದಲ್ಲಿ ಈ ಯೋಜನೆಯನ್ನು ಘೋಷಿಸಿ 25 ಕೋಟಿ ಅನುದಾನವನ್ನೂ ನೀಡಿದೆ. ಸರ್ಕಾರವೂ ಸೇರಿ ಎಲ್ಲರ ಸಹಕಾರದೊಂದಿಗೆ ಇಡೀ ಯೋಜನೆಯನ್ನು ಕಾರ್ಯಗತ ಮಾಡಲಾಗುವುದು ಎಂದರು.

ಆಸ್ಪತ್ರೆ, ಧಾರ್ಮಿಕ ಮತ್ತು ಸಾಂಸ್ಕೃತಿಕ ಅಧ್ಯಯನ ಕೇಂದ್ರ, ಗೋಶಾಲೆ, ವಸ್ತು ಸಂಗ್ರಹಾಲಯ, ಗ್ರಂಥಾಲಯ ನಿರ್ಮಾಣ ಸೇರಿ ಹತ್ತು ಹಲವು ಯೋಜನೆಯಲ್ಲಿ ಅಡಕವಾಗಿದ್ದು, ಅತ್ಯಂತ ವೇಗವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದರು ಡಿಸಿಎಂ.
ಸಚಿವರಾದ ಅರವಿಂದ ಲಿಂಬಾವಳಿ ಮಾತನಾಡಿ, ಜ್ಞಾನಕ್ಕೆ ಅತಿಹೆಚ್ಚು ಮಹತ್ವ ನೀಡುತ್ತಿದ್ದ ಶ್ರೀ ಬಾಲಗಂಗಾಧರ ನಾಥ ಮಹಾಸ್ವಾಮೀಜಿ ಅವರು, ಹಳ್ಳಿಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದ್ದರು. ಅವರ ಆಶಯಗಳು ನಮ್ಮನ್ನು ಮುನ್ನಡೆಸುತ್ತಿದ್ದು, ಸಶಕ್ತ ಸಮಾಜ ನಿರ್ಮಾಣಕ್ಕೆ ಶ್ರೀಗಳಲ್ಲಿದ್ದ ಪರಿಕಲ್ಪನೆಗಳೆಲ್ಲ ಇಲ್ಲಿ ಸಾಕಾರವಾಗಲಿವೆ ಎಂದರು.

ಡಾ.ನಿರ್ಮಲಾನಂದ ನಾಥ ಮಹಾಸ್ವಾಮೀಜಿ ಅವರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಈ ಯೋಜನೆ ಗುರುಗಳ ಅನುಗ್ರಹದೊಂದಿಗೆ ನಿರ್ವಿಘ್ನವಾಗಿ ಸಂಪನ್ನವಾಗಲಿ ಎಂದು ನುಡಿದರು.

ರಾಮನಗರದ ಆದಿಚುಂಚನಗಿರಿ ಶಾಖಾ ಮಠದ ಅನ್ನದಾನೇಶ್ವರ ಸ್ವಾಮೀಜಿ, ಶಾಸಕರಾದ ಮಂಜುನಾಥ್‌, ಸಿ.ಎಂ.ಲಿಂಗಪ್ಪ, ಎಸ್.‌ರವಿ, ಅ.ದೇವೇಗೌಡ, ಜಿಲ್ಲಾಧಿಕಾರಿ ರಾಕೇಶ್‌, ಜಿ.ಪಂ. ಸಿಇಒ ಇಕ್ರಂ ಉಪಸ್ಥಿತರಿದ್ದರು.

ಶ್ರೀಗಳ ಮಾತಾ ಪಿತೃಗಳ ಗದ್ದುಗೆಗೆ ಪೂಜೆ: ಕಾರ್ಯಕ್ರಮಕ್ಕೂ ಮೊದಲು ಉಪ ಮುಖ್ಯಮಂತ್ರಿ, ಶ್ರೀಗಳ ಜತೆಯಲ್ಲಿ ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಪೂರ್ವಾಶ್ರಮ ಜನ್ಮದಾತರಾದ ಬೋರಮ್ಮ ಮತ್ತು ಚಿಕ್ಕಲಿಂಗಪ್ಪ ಅವರ ಗದ್ದುಗೆಗೆ ಪೂಜೆ ನೆರೆವೇರಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು