ಬೆಂಗಳೂರು: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 68 ಸಾಧಕರು ಹಾಗೂ 10 ಸಂಸ್ಥೆಗಳಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಯನ್ನು ಸರ್ಕಾರ ಘೋಷಿಸಿದೆ. ಯಕ್ಷಗಾನದಲ್ಲಿ ಲೀಲಾವತಿ ಬೈಪಡಿತ್ತಾಯ, ಸಿನಿಮಾ ಕ್ಷೇತ್ರದ ಡಿಂಗ್ರಿ ನಾಗರಾಜ್, ಬ್ಯಾಂಕ್ ಜನಾರ್ದನ್, ಸಾಹಿತ್ಯ ಕ್ಷೇತ್ರದ ಸಿ.ನಾಗಣ್ಣ, ಸುಬ್ಬು ಹೊಲೆಯಾರ್, ಪತ್ರಿಕೋದ್ಯಮ ಕ್ಷೇತ್ರದ ದಿನೇಶ್ ಅಮೀನ್ ಮಟ್ಟು, ಮಾಯಾ ಶರ್ಮಾ, ಸೇರಿದಂತೆ 68 ಸಾಧಕರಿಗೆ ಪ್ರಶಸ್ತಿ ಘೋಷಿಸಲಾಗಿದೆ.
ಶಿವಮೊಗ್ಗದ ಕರ್ನಾಟಕ ಸಂಘ, ಬೆಂಗಳೂರಿನ ಮಿಥಿಕ್ ಸೊಸೈಟಿ, ದಾವಣಗೆರೆಯ ಮೌಲಾನ ಆಜಾದ್ ಶಿಕ್ಷಣ ಸಂಘ ಸೇರಿದಂತೆ ಹತ್ತು ಸಂಸ್ಥೆಗಳಿಗೆ ಪ್ರಶಸ್ತಿ ಘೋಷಿಸಲಾಗಿದೆ.