Bengaluru 27°C
Ad

ಪುಣೆ ಬಾಂಬ್ ಸ್ಫೋಟ ಪ್ರಕರಣ: ಭಟ್ಕಳದ ಅಬ್ದುಲ್ ಕಬೀರ್​ ಖಾದೀರ್​ಗೆ ನೋಟಿಸ್‌ ನೀಡಿದ ಎಟಿಎಸ್‌

2008ರ ಮಹಾರಾಷ್ಟ್ರದ  ಪುಣೆ ಬಾಂಬ್ ಸ್ಫೋಟ  ಪ್ರಕರಣದ ಆರೋಪಿ ಉಗ್ರ ಅಬ್ದುಲ್ ಕಬೀರ್​ ಖಾದೀರ್​ಗಾಗಿ ಮಹಾರಾಷ್ಟ್ರದ ಭಯೋತ್ಪಾದನಾ ವಿರೋಧಿ ದಳ  ಉತ್ತರ ಕನ್ನಡ  ಜಿಲ್ಲೆಯ ಭಟ್ಕಳ್​​​ದಲ್ಲಿ  ಜಾಲಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ತಹಶೀಲ್ದಾರ್​ ಕಚೇರಿ, ಪುರಸಭೆಗೆ ನೋಟಿಸ್​ ಅಂಟಿಸಿದೆ.

ಬೆಂಗಳೂರು: 2008ರ ಮಹಾರಾಷ್ಟ್ರದ  ಪುಣೆ ಬಾಂಬ್ ಸ್ಫೋಟ  ಪ್ರಕರಣದ ಆರೋಪಿ ಉಗ್ರ ಅಬ್ದುಲ್ ಕಬೀರ್​ ಖಾದೀರ್​ಗಾಗಿ ಮಹಾರಾಷ್ಟ್ರದ ಭಯೋತ್ಪಾದನಾ ವಿರೋಧಿ ದಳ  ಉತ್ತರ ಕನ್ನಡ  ಜಿಲ್ಲೆಯ ಭಟ್ಕಳ್​​​ದಲ್ಲಿ  ಜಾಲಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ತಹಶೀಲ್ದಾರ್​ ಕಚೇರಿ, ಪುರಸಭೆಗೆ ನೋಟಿಸ್​ ಅಂಟಿಸಿದೆ.

ಪುಣೆಯಲ್ಲಿ ನಡೆದ ಭಯೋತ್ಪಾದನೆ ಚಟುವಟಿಕೆಗಳಿಗೆ ಸಂಬಂಧಿಸಿ ತಲೆಮರೆಸಿಕೊಂಡಿರುವ ಭಟ್ಕಳ ನಿವಾಸಿ ಮನೆಗೆ ಮುಂಬೈ ಎಟಿಎಸ್‌ ತಂಡವರು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ನೋಟಿಸ್‌ ಅಂಟಿಸಿ ಹೋಗಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

2008ರಲ್ಲಿ ಪುಣೆಯಲ್ಲಿ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿರುವ ಅಬ್ದುಲ್ ಕಬೀರ್‌ ಖಾದೀರ್‌ ಸುಲ್ತಾನ್ ಅಲಿಯಾಸ್ ಮೌಲಾನಾ ಸುಲ್ತಾನ್ ಕಳೆದ ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದು, ಈತ ಆಗಾಗ ಭಟ್ಕಳಕ್ಕೆ ಬಂದು ಹೋಗುತ್ತಿದ್ದ ವಿಚಾರ ಎಟಿಎಸ್​ಗೆ ತಿಳಿದೆ.

ಮುಂಬೈ ಎಟಿಎಸ್ ತಂಡ ಈತನಿಗಾಗಿ ಜೂ.10ರಂದು ಭಟ್ಕಳಕ್ಕೆ ಆಗಮಿಸಿ ಮನೆ, ಭಟ್ಕಳ ತಹಸೀಲ್ದಾ‌ರ್ ಕಚೇರಿ ಹಾಗೂ ಪುರಸಭೆಯ ನೋಟಿಸ್‌ ಬೋರ್ಡಿಗೆ ಜೂ.21ರಂದು ಪುಣೆ ನ್ಯಾಯಾಲಯದಲ್ಲಿ ನಡೆಯಲಿರುವ ವಿಚಾರಣೆಗೆ ಹಾಜರಾಗುವಂತೆ ಸೂಚನೆ ಇರುವ ನೋಟಿಸ್ ಅಂಟಿಸಿ ತೆರಳಿದೆ.

 

Ad
Ad
Nk Channel Final 21 09 2023
Ad