ಬೆಂಗಳೂರು: ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ವಿದ್ಯುತ್ ದರ ಪರಿಷ್ಕರಣೆ ಪರಿಷ್ಕರಣೆ ಮಾಡಿದ್ದು, ಇಂದಿನಿಂದ ನೂತನ 100 ಯುನಿಟ್ ಗಿಂತ ಹೆಚ್ಚು ಬಳಕೆ ಮಾಡುವ ಗ್ರಾಹಕರಿಗೆ ಯುನಿಟ್ ಗೆ 1ರೂ 10 ಪೈಸೆ ಕಡಿತ ಮಾಡುವುದಾಗಿ ತಿಳಿಸಿದಿದೆ.
15 ವರ್ಷಗಳ ಬಳಿಕ ವಿದ್ಯುತ್ ದರ ಇಳಿಕೆ ಕಂಡಿದೆ. 2024-25ನೇ ಸಾಲಿಗೆ ಅನ್ವಯವಾಗುವಂತೆ ಕೆಇಆರ್ಸಿ ಆದೇಶ ಇಂದಿನಿಂದ ಜಾರಿಗೆ ಬಂದಿದೆ.
ಈ ಹಿಂದೆ ಪ್ರತಿ ಯುನಿಟ್ ಗೆ 0-100ರ ವರೆಗೆ 4.75 ಪೈಸೆ ಇತ್ತು. 100ರ ಮೇಲಿನ ಬಳಕೆಯ ಪ್ರತಿ ಯುನಿಟ್ ಗೆ 7 ರೂಪಾಯಿ ಇತ್ತು. ಇಂದಿನಿಂದ 100 ಯುನಿಟ್ ಮೇಲಿನ ಬಳಕೆ ದಾರರ ಪ್ರತಿ ಯುನಿಟ್ ಗೆ 5.90 ರೂಪಾಯಿ ಮಾತ್ರ ಪಾವತಿ ಮಾಡಬೇಕು.