News Karnataka Kannada
Monday, May 06 2024
ಬೆಂಗಳೂರು

ನಿರ್ಮಲಾ ಸೀತಾರಾಮನ್ ಪುತ್ರಿ ವಿವಾಹ: ಬ್ರಾಹ್ಮಣ ಸಂಪ್ರದಾಯಪ್ರಕಾರ ನೆರವೇರಿದ ಮದುವೆ

Nirmala Sitharaman's daughter's wedding: Wedding solemnised as per Brahmin traditions
Photo Credit : News Kannada

ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹಿಂದಿನಿಂದಲೂ ಉಡುಪಿ ಮಠದ ಭಕ್ತರು. ಅವರ ಇಚ್ಛೆಯ ಪ್ರಕಾರ ಪುತ್ರಿಯ ವಿವಾಹ ಅದ್ದೂರಿಯಾಗಿ ನೆರವೇರಿದೆ.

‘ಉಡುಪಿ ಸೀರೆ’ ಮೆರುಗು

ಕೇಂದ್ರ ಹಣಕಾಸು ಸಚಿವೆ ಪುತ್ರಿ ವಾಙ್ಮಯಿ ಅವರ ವಿವಾಹ ಪ್ರತೀಕ್ ಎಂಬುವವರ ಜತೆ ಬೆಂಗಳೂರಿನಲ್ಲಿ ನಡೆಯಿತು.ಉಡುಪಿಯ ಅದಮಾರು ಮಠದ ಬ್ರಾಹ್ಮಣ ಸಂಪ್ರದಾಯ ಪ್ರಕಾರ ವಾಙ್ಮಯಿ ಮತ್ತು ಪ್ರತೀಕ್ ಇವರ ವಿವಾಹ ಬೆಂಗಳೂರಿನ ಟ್ಯಾಮರಿಂಡ್ ಟ್ರೀ ನಲ್ಲಿ ನೆರವೇರಿದ್ದು,ಗಣ್ಯಾತಿಗಣ್ಯರು ಮದುವೆ ಸಂಭ್ರಮದಲ್ಲಿ ಪಾಲ್ಗೊಂಡರು.ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಅನುಗ್ರಹಿಸಿ ಕಳುಹಿಸಿದ ಉಡುಪಿ ಸೀರೆಯನ್ನು ನಿರ್ಮಲ ಸೀತಾರಾಮನ್ ಅವರಿಗೆ ನೀಡಲಾಯಿತು. ಅದಮಾರು ಮಠದ ವಿಶ್ವಪ್ರಿಯ ತೀರ್ಥ ಶ್ರೀಪಾದರು ಮತ್ತು ಈಶಪ್ರಿಯ ತೀರ್ಥ ಶ್ರೀಪಾದರು ವಧು- ವರರನ್ನು ಹರಸಿದರು. ಮಧುಪರ್ಕ, ಸೀರೆ, ಶಾಲು, ಗಂಧ ಪ್ರಸಾದವನ್ನು ಮಠದ ವ್ಯವಸ್ಥಾಪಕರಾದ ಗೋವಿಂದ ರಾಜರು ಮತ್ತು ಶಿಷ್ಯರು ಮಂತ್ರಘೋಷದ ಮೂಲಕ ನೀಡಿ ಹರಸಿದರು.

ಉಡುಪಿ ಸೀರೆ ವೈಶಿಷ್ಟ್ಯತೆ

ಅಂದ ಹಾಗೆ ಉಡುಪಿ ಸೀರೆಯ ಪ್ರಮುಖ ವೈಶಿಷ್ಟ್ಯತೆಯೆಂದರೆ ನೇಕಾರರ ವಿಶಿಷ್ಟ ಕಲೆ ಹಾಗೂ ವಿನ್ಯಾಸ ಇದರಲ್ಲಿ ಅಡಗಿದೆ. ಗುಣಮಟ್ಟದಲ್ಲೂ ಉಡುಪಿ ಸೀರೆಗಳು ಮುಂದಿವೆ.‘ಉಡುಪಿ ಸೀರೆ’ ಕರಾವಳಿಯ ಹೆಮ್ಮೆಯ ಸ್ಥಳೀಯ ಉತ್ಪನ್ನಗಳಲ್ಲಿ ಒಂದು.ಅಂಚು, ಸೆರಗು ಗಾಢ ಬಣ್ಣದ್ದಾಗಿದ್ದು, ಮೈ ತಿಳಿ ಬಣ್ಣ ಹೊಂದಿದೆ. ಹಾಸು ತಯಾರಿ ನಂತರ ಸೆರಗಿಗೆ ಟೈ ಆ್ಯಂಡ್‌ ಡೈ ಟೆಕ್ನಿಕ್‌ನಲ್ಲಿ ಪ್ರತ್ಯೇಕವಾಗಿ ಬಣ್ಣ ಹಾಕಿದರೆ, ಸೀರೆ ತಯಾರಾಗುತ್ತಿರುವಾಗ ಮಗ್ಗದಲ್ಲಿ ಗಂಜಿ ಹಾಕಲಾಗುತ್ತದೆ. ತಾಳೆಮರದಿಂದ ತಯಾರಾದ ಬ್ರಶ್‌ ಇದಕ್ಕೆ ಬಳಕೆ ಮಾಡಲಾಗುತ್ತದೆ. ಉತ್ಪಾದಿತ ಉಡುಪಿ ಸೀರೆಗಳಿಗೆ ಶಿವಮೊಗ್ಗ ಸಾಗರ ಹೆಗ್ಗೋಡು ಭೀಮನಕೋಣೆಯ ಚರಕ ಮಹಿಳಾ ವಿವಿಧೋದ್ದೇಶ ಕೈಮಗ್ಗ ಸಹಕಾರ ಸಂಘ ಖರೀದಿ ಜತೆಗೆ ಮಾರುಕಟ್ಟೆಯನ್ನೂ ಒದಗಿಸುತ್ತಿದೆ. ಉಡುಪಿ ಸೀರೆಯನ್ನು ರಾಸಾಯನಿಕದಿಂದ ನೈಸರ್ಗಿಕ ಬಣ್ಣಕ್ಕೆ ಚರಕ ಸಂಸ್ಥೆಯ ನೆರವಿನಿಂದ ಪರಿವರ್ತಿಸಲಾಗುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು