News Karnataka Kannada
Sunday, April 28 2024
ಬೆಂಗಳೂರು

ಹೊಸ ವರ್ಷದ ಸಂಭ್ರಮಾಚರಣೆ: ಬೆಂಗಳೂರಿನಲ್ಲಿ ಸೃಷ್ಟಿಯಾಯ್ತು 8 ಟನ್ ಕಸ

ಅಖಿಲ ಭಾರತ ಸ್ವಚ್ಛ ಸರ್ವೇಕ್ಷಣಾ 2023 ವರದಿಯಲ್ಲಿ ಬೆಂಗಳೂರು 125 ನೇ ಸ್ಥಾನದಲ್ಲಿದೆ.  2022 ರ ಸ್ವಚ್ಛ ಸರ್ವೇಕ್ಷಣ ಶ್ರೇಯಾಂಕದಲ್ಲಿ, ಬೆಂಗಳೂರು ನಗರವು 43ನೇ ಸ್ಥಾನದಲ್ಲಿತ್ತು. 2021ರಲ್ಲಿ 28ನೇ ಮತ್ತು 2020ರಲ್ಲಿ 37ನೇ ಸ್ಥಾನದಲ್ಲಿತ್ತು.
Photo Credit : News Kannada

ಬೆಂಗಳೂರು: 2024ರ ಹೊಸ ವರ್ಷಾಚರಣೆ ಮುಗಿಯುತ್ತಿದಂತೆ ಬೆಂಗಳೂರಿನಲ್ಲಿ ಒಟ್ಟಾರೆಯಾಗಿ 8 ಟನ್ ಕಸ ಶೇಖರಣೆಯಾಗಿದೆ.

ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಲಿಮಿಟೆಡ್ ಸೋಮವಾರ ನಗರದ ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್ ನಿಂದ 8 ಟನ್ ತ್ಯಾಜ್ಯವನ್ನು ಸಂಗ್ರಹಿಸಿದೆ ಎಂದು ಹೇಳಿದೆ.

80ಕ್ಕೂ ಹೆಚ್ಚು ಪೌರಕಾರ್ಮಿಕರು ಹಾಗೂ ಮೂವರು ಮೇಲ್ವಿಚಾರಕರು ಸೋಮವಾರ ಬೆಳಗಿನ ಜಾವ 3.30ಕ್ಕೆ ಸ್ವಚ್ಛತಾ ಕಾರ್ಯ ಆರಂಭಿಸಿ ಬೆಳಗ್ಗೆ 8 ಗಂಟೆ ಸುಮಾರಿಗೆ ಕೆಲಸ ಮುಗಿಸಿದರು. ಬೆಳಗ್ಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ರಸ್ತೆಗಳಲ್ಲಿ ಟನ್‌ಗಟ್ಟಲೆ ತ್ಯಾಜ್ಯವನ್ನು ತೆರವುಗೊಳಿಸಲಾಯಿತು.

ತ್ಯಾಜ್ಯ ಸಂಗ್ರಹಿಸಲು ಸುಮಾರು 80 ಪೌರ ಕಾರ್ಮಿಕರು, ಮೂವರು ಮೇಲ್ವಿಚಾರಕರು, ಒಂದು ಕಾಂಪ್ಯಾಕ್ಟರ್ ಮತ್ತು 7 ಆಟೋ ಟಿಪ್ಪರ್‌ಗಳನ್ನು ನಿಯೋಜಿಸಲಾಗಿತ್ತು.

ಅಧಿಕಾರಿಗಳ ಪ್ರಕಾರ, ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ರೆಸಿಡೆನ್ಸಿ ರಸ್ತೆ, ರಿಚ್ಮಂಡ್ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ ಮತ್ತು ಕಸ್ತೂರ್ಬಾ ರಸ್ತೆ ಸೇರಿದಂತೆ ಇತರೆಡೆಗಳಿಂದ ಶಾಂತಿನಗರ ವಿಭಾಗದ ಘನತ್ಯಾಜ್ಯ ಇಲಾಖೆ ಅಪಾರ ಪ್ರಮಾಣದ ತ್ಯಾಜ್ಯ ಸಂಗ್ರಹಿಸಿದ್ದಾರೆ.

ರಸ್ತೆ ಮತ್ತು ಫುಟ್‌ಪಾತ್‌ಗಳಲ್ಲಿ ಪ್ಲಾಸ್ಟಿಕ್ ಕವರ್‌ಗಳು, ಪ್ಲಾಸ್ಟಿಕ್ ತ್ಯಾಜ್ಯಗಳು, ಚಪ್ಪಲಿಗಳು, ಗಾಜಿನ ಬಾಟಲಿಗಳು ಮತ್ತು ಇತರ ವಸ್ತುಗಳನ್ನು ಎಸೆಯಲಾಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು