ಪಾಟ್ನಾ: ಗರ್ಭಿಣಿಯಾಗದ ಮಹಿಳೆಯನ್ನು ಗರ್ಭ ಧರಿಸುವಂತೆ ಮಾಡಿದ್ರೆ ₹13 ಲಕ್ಷ ನೀಡುವುದಾಗಿ ಆಫರ್ ನೀಡಿದ್ದ ಗ್ಯಾಂಗ್ ಮೇಲೆ ಎಸ್ಐಟಿ ದಾಳಿ ಮಾಡಿ 8 ಜನರನ್ನು ಬಿಹಾರದ ನವಾಡದಲ್ಲಿ ಅರೆಸ್ಟ್ ಮಾಡಿದೆ.
8 ಆರೋಪಿಗಳು ಆಲ್ ಇಂಡಿಯಾ ಪ್ರೆಗ್ನೆಂಟ್ ಜಾಬ್ ಸರ್ವೀಸ್ ಎಂಬ ಹೆಸರಿನ ಮೂಲಕ ದಂಧೆ ನಡೆಸುತ್ತಿದ್ದರು. ವಾಟ್ಸ್ ಆಪ್ ಹಾಗೂ ಇತರೆ ಸೋಷಿಯಲ್ ಮೀಡಿಯಾ ಮೂಲಕ ಪುರುಷರಿಗೆ ಆಫರ್ ಮಾಡುತ್ತಿದ್ದರು. ಇದಕ್ಕೆ ಒಪ್ಪಿಗೆ ಸೂಚಿಸುವ ವ್ಯಕ್ತಿಯು ₹799 ಕೊಟ್ಟು ರಿಜಿಸ್ಟ್ರೇಶನ್ ಮಾಡಿಕೊಳ್ಳಬೇಕಿತ್ತು ಎಂದು ಹೇಳಲಾಗಿದೆ.
ಇದಾದ ನಂತರ ಆರೋಪಿಗಳು ಕೆಲವು ಮಹಿಳೆಯರ ಫೋಟೋಗಳನ್ನ ಕಳುಹಿಸಿ ಆಯ್ಕೆ ಮಾಡುವಂತೆ ಸೂಚಿಸುತ್ತಾರೆ. ಆಯ್ಕೆ ಮಾಡಿದ ಪೋಟೋಗೆ ನಿಗದಿತ ಬೆಲೆ ನಮೂದು ಮಾಡಿದ್ದು ₹5 ರಿಂದ ₹ 20,000 ವರೆಗೆ ಬೆಲೆ ಇರುತ್ತದೆ ಎಂದು ಹೇಳಲಾಗಿದೆ. ಒಂದು ವೇಳೆ ಮಹಿಳೆ ಗರ್ಭಿಣಿಯಾದರೆ ₹13 ಲಕ್ಷ ನೀಡಲಾಗುವುದು. ಆಗದಿದ್ದರು ₹5 ಲಕ್ಷ ಸಾಂತ್ವನವಾಗಿ ನೀಡಲಾಗುವುದು ಎಂದು ಗ್ಯಾಂಗ್ ಸುಳ್ಳು ಭರವಸೆ ನೀಡುತ್ತಿತ್ತು. ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಿಹಾರದ ವಿಶೇಷ ತನಿಖಾ (ಎಸ್ಐಟಿ) ತಂಡ ರೇಡ್ ಮಾಡಿ ಗ್ಯಾಂಗ್ನಲ್ಲಿದ್ದ 8 ಜನರನ್ನು ಅರೆಸ್ಟ್ ಮಾಡಿದ್ದಾರೆ.