Bengaluru 25°C
Ad

ನಂದಿನಿ ಹಾಲಿನ ದರ ಹೆಚ್ಚಳ: ಬೇಕರಿ ಸಿಹಿ ತಿಂಡಿಗೂ ದುಬಾರಿ

ರಾಜ್ಯದಲ್ಲಿ ನಂದಿನಿ ಹಾಲಿನ ಅರ್ಧ ಲೀಟರ್ ಮತ್ತು ಒಂದು ಲೀಟರ್ ಪ್ಯಾಕೆಟ್​​ಗಳಲ್ಲಿ 50 ಎಂಎಲ್​​​ ಹೆಚ್ಚುವರಿ ಹಾಲು ಸೇರಿಸಿ ಎರಡು ರೂಪಾಯಿ ಹೆಚ್ಚಳ ಮಾಡಲಾಗಿದೆ. ಇದರಿಂದ ಹಾಲಿನಿಂದ ಮಾಡುವ ಉತ್ಪನ್ನಗಳಾದ ಸಿಹಿ ತಿಂಡಿಗಳು, ಐಸ್ ಕ್ರೀಂ ಹಾಗೂ ಮಿಲ್ಕ್ ಶೇಕ್ ದರ ಹೆಚ್ಚಳ‌ ಮಾಡಲು ಮಾಲೀಕರು ‌ಮುಂದಾಗಿದ್ದಾರೆ.

ಬೆಂಗಳೂರು: ರಾಜ್ಯದಲ್ಲಿ ನಂದಿನಿ ಹಾಲಿನ ಅರ್ಧ ಲೀಟರ್ ಮತ್ತು ಒಂದು ಲೀಟರ್ ಪ್ಯಾಕೆಟ್​​ಗಳಲ್ಲಿ 50 ಎಂಎಲ್​​​ ಹೆಚ್ಚುವರಿ ಹಾಲು ಸೇರಿಸಿ ಎರಡು ರೂಪಾಯಿ ಹೆಚ್ಚಳ ಮಾಡಲಾಗಿದೆ. ಇದರಿಂದ ಹಾಲಿನಿಂದ ಮಾಡುವ ಉತ್ಪನ್ನಗಳಾದ ಸಿಹಿ ತಿಂಡಿಗಳು, ಐಸ್ ಕ್ರೀಂ ಹಾಗೂ ಮಿಲ್ಕ್ ಶೇಕ್ ದರ ಹೆಚ್ಚಳ‌ ಮಾಡಲು ಮಾಲೀಕರು ‌ಮುಂದಾಗಿದ್ದಾರೆ.

ಪ್ರತಿ ಲೀಟರ್ ಐಸ್ ಕ್ರೀಂ ಬಾಕ್ಸ್ ಮೇಲೆ 10 ರಿಂದ 15 ರೂಪಾಯಿ ಹೆಚ್ಚಳವಾದರೆ, ಎಲ್ಲಾ ತರಹದ ಮಿಲ್ಕ್ ಶೇಕ್ ಗಳ ಮೇಲೆ 5 ರಿಂದ 10 ರೂಪಾಯಿ ಹೆಚ್ಚಳವಾಗಲಿದೆ. ಹೋಟೆಲ್ ಮತ್ತು ಜ್ಯೂಸ್ ಶಾಪ್​​ಗಳಲ್ಲಿ ಮಾರಾಟ ಮಾಡುವ ಮಿಲ್ಕ್ ಶೇಕ್ ಮತ್ತು ಐಸ್ ಕ್ರೀಂಗಳಿಗೆ ಹಾಲು ಇಲ್ಲದೆ ತಯಾರಿಸಲು ಆಗುವುದಿಲ್ಲ. ಇದರಿಂದ ದರ ಏರಿಕೆ ಅನಿವಾರ್ಯ.

ಪ್ರತಿದಿನ ನಮ್ಮ ಹೋಟೆಲ್​ನಲ್ಲಿ ಮಿಲ್ಕ್ ಶೇಕ್ ಗಾಗಿ 25 ಲೀಟರ್ ಹಾಲನ್ನು ತೆಗೆದುಕೊಳ್ಳುತ್ತೇವೆ. ಕಾಫಿ, ಚಹಾಗೆ 100 ಲೀಟರ್ ಹಾಲನ್ನು ತೆಗೆದುಕೊಳ್ಳುತ್ತೇವೆ. ಹಾಲಿನ ದರ ಹೆಚ್ಚಳ ಮಾಡಿರುವುದರಿಂದ ಆ ಹೊರೆಯನ್ನು ನಾವು ಹೊತ್ತುಕೊಳ್ಳುವುದಕ್ಕೆ ಆಗುವುದಿಲ್ಲ ಎಂದು ಹೋಟೆಲ್ ಮಾಲೀಕ ಸಂಘದ ಚಂದ್ರಶೇಖರ್ ಶೆಟ್ಟಿ ಹೇಳಿದ್ದಾರೆ. ಹಾಲಿನ ದರ ಹೆಚ್ಚಳದಿಂದ ಹಾಲಿನಿಂದ ಮಾಡುವ ತಿಂಡಿ ತಿನಿಸುಗಳ ದರ ಏರಿಕೆ ಆಗುವುದು ಖಚಿತವಾಗಿದೆ.

Ad
Ad
Nk Channel Final 21 09 2023
Ad