Bengaluru 28°C
Ad

ಅಂಬಾನಿ ಪುತ್ರನ ಮದುವೆ ಆಮಂತ್ರಣ ಬಂದಿಲ್ಲ: ಸಿಎಂ ಕಚೇರಿಯಿಂದ ಸ್ಪಷ್ಟನೆ

Cm (3)

ಬೆಂಗಳೂರು: ಉದ್ಯಮಿ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿಯ ಮದುವೆ ಈಗಾಗಲೇ ನಿಗದಿ ಆಗಿದೆ. ಜುಲೈ 12 ರಂದು ರಾಧಿಕಾ ಮರ್ಚೆಂಟ್ ಅವರನ್ನು ಮದುವೆಯಾಗಲಿದ್ದಾರೆ.

ಸದ್ಯ ಗಣ್ಯಾತಿ ಗಣ್ಯರಿಗೆ ಖುದ್ದು ಮುಕೇಶ್ ಅಂಬಾನಿ ಕುಟುಂಬವೇ ಮದುವೆ ಆಮಂತ್ರಣವನ್ನು ನೀಡುತ್ತಿದ್ದಾರೆ. ಇದರ ಮಧ್ಯೆ ಸಿಎಂ ಸಿದ್ದರಾಮಯ್ಯಗೂ ಮದುವೆ ಆಹ್ವಾನಿಸಲಾಗಿದೆ ಎಂಬ ವಿಡಿಯೋ ಒಂದು ವೈರಲ್ ಆಗಿದೆ. ಆದರೆ ಅಧಿಕೃತವಾಗಿ ಯಾವುದೇ ಆಹ್ವಾನ ಪತ್ರ ತಲುಪಿಲ್ಲ ಎಂದು ಸಿಎಂ ಕಚೇರಿ ಸ್ಪಷ್ಟನೆ ನೀಡಿದೆ.

ಆಮಂತ್ರಣ ಪತ್ರಿಕೆ ಮೇಲೆ ಸಿಎಂ ಸಿದ್ದರಾಮಯ್ಯ ಹಾಗೂ ಪತ್ನಿ ಪಾರ್ವತಿ ಹೆಸರು ಉಲ್ಲೇಖಿಸಿರುವ ಆಹ್ವಾನ ಪತ್ರಿಕೆ ಒಂದು ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆದರೆ ಈವರೆಗೆ ಯಾವುದೇ ರೀತಿಯ ಆಮಂತ್ರಣ ಸಿಎಂಗೆ ಬಂದಿಲ್ಲ. ಅಧಿಕೃತವಾಗಿ ಯಾವುದೇ ಆಹ್ವಾನ ಪತ್ರ ತಲುಪಿಲ್ಲ ಎಂದು ಸಿಎಂ ಕಚೇರಿಯಿಂದ ಸ್ಪಷ್ಟಪಡಿಸಲಾಗಿದೆ.

Ad
Ad
Nk Channel Final 21 09 2023
Ad