News Karnataka Kannada
Saturday, April 27 2024
ಬೆಂಗಳೂರು

ಬೆಂಗಳೂರು: ಕೆ ಎಸ್ ಆರ್ ಟಿ ಸಿ ನಿಗಮದ ವತಿಯಿಂದ 20 ಬೊಲೆರೋ ವಾಹನಗಳ ಸೇರ್ಪಡೆ

KSRTC to induct 20 Bolero vehicles in Bengaluru
Photo Credit : G Mohan

ಬೆಂಗಳೂರು: ಕೆ ಎಸ್ ಆರ್ ಟಿ ಸಿ ನಿಗಮದ ವತಿಯಿಂದ ನೂತನವಾಗಿ 20 ಬೊಲೆರೋ ವಾಹನಗಳನ್ನು ನಿಗಮಕ್ಕೆ ಸೇರ್ಪಡೆ ಗೊಳಿಸಲಾಯಿತು.

ನಿಗಮದ ಮಾನ್ಯ ಅಧ್ಯಕ್ಷರಾದ ಎಂ ಚಂದ್ರಪ್ಪ ರವರು ನೂತನ ವಾಹನಗಳಿಗೆ ಚಾಲನೆ ನೀಡಿ, ಮಾತನಾಡಿ, ಈ ವಾಹನಗಳನ್ನು ವಿಭಾಗಗಳಲ್ಲಿ ಅಪಘಾತ ನಡೆದ ಸ್ಥಳಕ್ಕೆ ತ್ವರಿತವಾಗಿ ತಲುಪಲು ಹಾಗೂ ಗಾಯಾಳುಗಳಿಗೆ ಸಮರ್ಪಕ ವೈದ್ಯಕೀಯ ಸೌಲಭ್ಯ ಸಕಾಲಕ್ಕೆ ಒದಗಿಸುವ ನಿಟ್ಟಿನಲ್ಲಿಸೇರ್ಪಡೆಗೊಳಿಸಲಾಗಿದೆ. ಮತ್ತು ವಿಭಾಗಗಳ ವ್ಯಾಪ್ತಿಯಲ್ಲಿನ ಹೆಚ್ಚು ಅಪಘಾತ ಆಗುವ ಸ್ಥಳಗಳ ಬಗ್ಗೆ ಚಾಲನಾ ಸಿಬ್ಬಂದಿಗಳಿಗೆ ಜಾಗೃತೆ ಹಾಗೂ ಮುನ್ಸೂಚನೆ ನೀಡಲು ಮತ್ತು ತನಿಖಾದಳಧ ಕಾರ್ಯಕ್ಕೆ ಈ ವಾಹನಗಳನ್ನು ಬಳಸಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ವಿ.ಅನ್ಬುಕುಮಾರ್ ಭಾಆಸೇ, ವ್ಯವಸ್ಥಾಪಕ ನಿರ್ದೇಶಕರು ಮಾತನಾಡಿ, ಸದರಿ ವಾಹನಗಳನ್ನು ಅಪಘಾತ ಪರಿಹಾರ ನಿಧಿಯಿಂದ  ಸೇರ್ಪಡೆಗೊಳಿಸಲಾಗುತ್ತಿದ್ದು,  ಸಾರ್ವಜನಿಕ ಪ್ರಯಾಣಿಕರು ಹಾಗೂ ಚಾಲನಾ ಸಿಬ್ಬಂದಿಗಳು ಅಪಘಾತಕ್ಕೆ ಒಳಗಾಗಬಾರದು, ಆದರೂ ಅಪಘಾತ ಆಕಸ್ಮಿಕವೇ, ಇಂತಹ ಸಂದರ್ಭಗಳಲ್ಲಿ, ತುರ್ತು ಪರಿಹಾರ ಒದಗಿಸುವುದು ನಮ್ಮ ಆದ್ಯ ಕರ್ತವ್ಯವಾಗಿರುತ್ತದೆ.

ನಿಗಮದ ವ್ಯಾಪ್ತಿಯ 16 ವಿಭಾಗಗಳಲ್ಲಿ ಈ ವಾಹನಗಳು 24*7 ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸುತ್ತಾ, ನಿಗಮದಲ್ಲಿ ಕಾರ್ಮಿಕ ಕಲ್ಯಾಣಕ್ಕಾಗಿ ಹೆಚ್ಚು ಒತ್ತನ್ನು ನೀಡುತ್ತಿರುವ ಬಗ್ಗೆ ಪುನರುಚ್ಚಿಸಿದರು.

ಈ ಕಾರ್ಯಕ್ರಮದಲ್ಲಿ ಡಾ. ನವೀನ್ ಭಟ್. ವೈ , ಭಾಆಸೇ, ನಿರ್ದೇಶಕರು (ಸಿಬ್ಬಂದಿ ಮತ್ತು ಜಾಗೃತೆ) ಹಾಗೂ ನಿಗಮದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
31125

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು