News Karnataka Kannada
Saturday, April 20 2024
Cricket
ಬೆಂಗಳೂರು

ಬೆಂಗಳೂರಿನ ರಸ್ತೆಬದಿಯಲ್ಲಿ ದೋಸೆ, ಫಿಲ್ಟರ್ ಕಾಫಿ ಸವಿದ ಬಾಲಿವುಡ್ ನಟ

Kartik Aaryan
Photo Credit : News Kannada

ಬೆಂಗಳೂರು: ಮಹಿಳಾ ಪ್ರೀಮಿಯರ್ ಲೀಗ್‌ನ(WPL) ಉದ್ಘಾಟನಾ ಸಮಾರಂಭದಲ್ಲಿ ನಟ ಕಾರ್ತಿಕ್​​ ಆರ್ಯನ್ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ತಮ್ಮ ಹಿಟ್ ಚಿತ್ರ ‘ಭೂಲ್ ಭುಲೈಯ್ಯಾ 2’ರ ‘ಹರೇ ರಾಮ್’ ಹಾಡು ಸೇರಿದಂತೆ ಅನೇಕ ಹಾಡುಗಳಿಗೆ ಪ್ರದರ್ಶನ ನೀಡಿದರು.

ಬಾಲಿವುಡ್​ ನಟರಾದ​​ ಶಾರುಖ್ ಖಾನ್, ಶಾಹಿದ್ ಕಪೂರ್, ವರುಣ್ ಧವನ್ ಮತ್ತು ಟೈಗರ್ ಶ್ರಾಫ್ ಸೇರಿದಂತೆ ಹಲವು ತಾರೆಯರು ಕೂಡ ಭಾಗಿಯಾಗಿ ನೃತ್ಯ ಪ್ರದರ್ಶನ ನೀಡಿದರು.

ನಂತರ ನಗರದಲ್ಲಿ ನಡೆದ ಕಾರ್ತಿಕ್‌ ಆರ್ಯನ್ ಬೆಂಗಳೂರು ರೌಂಡ್ಸ್ ಹೊಡೆದಿದ್ದು, ಫೋಟೋಗಳನ್ನು ತಮ್ಮ ಅಧಿಕೃತ ಸೋಷಿಯಲ್​ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಫೆಬ್ರವರಿ 24ರಂದು ‘ಸತ್ಯಪ್ರೇಮ್​ ಕಿ ಕಥಾ’ ಸಿನಿಮಾ ನಟರೂ ಆಗಿರುವ ಕಾರ್ತಿಕ್ ಆರ್ಯನ್ ಬೆಂಗಳೂರಿನ ‘ದಿ ರಾಮೇಶ್ವರಂ ಕೆಫೆ’ಗೆ ಭೇಟಿ ಕೊಟ್ಟರು. ಈ ಸಂದರ್ಭದಲ್ಲಿ ಕಾಫಿ ಕುಡಿದು ದೋಸೆ ಸವಿದಿದ್ದಾರೆ. ಅಲ್ಲದೇ ‘ಐದು ಫಿಲ್ಟರ್​ ಕಾಫಿ ಕೊಡಿ’ ಎಂದು ಕನ್ನಡ ಮಾತನಾಡುವ ಪ್ರಯತ್ನವನ್ನೂ ಮಾಡಿದರು. ಈ ಒಂದು ಪೋಸ್ಟ್‌ನಲ್ಲಿ 9 ಫೋಟೋ, ವಿಡಿಯೋಗಳಿದ್ದು ಎರಡು ಹೋಟೆಲ್​ಗಳಗೆ ಭೇಟಿ ಕೊಟ್ಟಂತಿದೆ. ಇತರೆ ಫೋಟೋಗಳಲ್ಲಿ ವೆಜ್​ ಥಾಲಿ ಸೇರಿದಂತೆ ಇತರೆ ಖಾದ್ಯಗಳ ರುಚಿಯುಂಡು ಸಂಭ್ರಮಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು