News Karnataka Kannada
Wednesday, May 08 2024
ಬೆಂಗಳೂರು

ಸ್ಪಂದನಾ ಅಂತಿಮ ದರ್ಶನ ಪಡೆದ ಅಶ್ವಿನಿ ಪುನೀತ್​ ರಾಜ್​ಕುಮಾರ್

ashwini puneeth-
Photo Credit : News Kannada

ಬೆಂಗಳೂರು: ಡಾ. ರಾಜ್​ಕುಮಾರ್ ಕುಟುಂಬಕ್ಕೆ ಒಂದಾದಮೇಲೆ ಒಂದರಂತೆ ದುಃಖ ಎದುರಾಗುತ್ತಲೇ ಇದೆ. 2021ರ ಅಕ್ಟೋಬರ್ ತಿಂಗಳಲ್ಲಿ ಪುನೀತ್ ರಾಜ್​ಕುಮಾರ್ ಮೃತಪಟ್ಟರು. ಇದಾದ ಕೆಲವೇ ತಿಂಗಳಲ್ಲಿ ಅಶ್ವಿನಿ ಅವರ ತಂದೆ ರೇವನಾಥ್ ನಿಧನ ಹೊಂದಿದರು. ಇತ್ತೀಚೆಗೆ ರಾಜ್ ಕುಟುಂಬದ ಕುಡಿ ಸೂರಜ್ ಅಪಘಾತದಲ್ಲಿ ಕಾಲು ಕಳೆದುಕೊಂಡರು. ಈಗ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ನಿಧನ ಹೊಂದಿದ್ದಾರೆ. ಇದೀಗ ಸ್ಪಂದನಾ ಅಂತಿಮ ದರ್ಶನ ಪಡೆದ ಅಶ್ವಿನಿ ಪುನೀತ್​ ರಾಜ್​ಕುಮಾರ್ ಕಣ್ಣೀರು ಹಾಕಿದರು.

ಪಾರ್ವತಮ್ಮ ರಾಜ್​ಕುಮಾರ್​ ಅವರ ಸಹೋದರ ಚಿನ್ನೇ ಗೌಡ ಅವರ ಮಕ್ಕಳು ವಿಜಯ್​ ರಾಘವೇಂದ್ರ ಮತ್ತು ಶ್ರೀಮುರಳಿ. ಹೀಗಾಗಿ ರಾಜ್​ ಕುಟುಂಬದ ಜೊತೆಗೆ ಇವರಿಗೆ ನಂಟಿದೆ. ಸ್ಪಂದನಾ ಕೂಡ ರಾಜ್​ ಫ್ಯಾಮಿಲಿ ಜೊತೆ ಒಳ್ಳೆಯ ಬಾಂಧವ್ಯ ಹೊಂದಿದ್ದರು. ಆದರೆ, ಅವರು ಏಕಾಏಕಿ ಮೃತಪಟ್ಟಿದ್ದು ಅನೇಕರಿಗೆ ಶಾಕ್​ ತಂದಿದೆ. ಅಶ್ವಿನಿ ಅವರಿಗೂ ಈ ನೋವು ಸಾಕಷ್ಟು ಕಾಡಿದೆ.

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು