ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸತತ ಎರಡನೇ ದಿನ ಜಿಗಿದಿದೆ. ಮೊನ್ನೆ ಅಮೆರಿಕದ ಫೆಡರಲ್ ರಿಸರ್ವ್ ಮೂರು ಬಾರಿ ಬಡ್ಡಿದರ ಕಡಿತಗೊಳಿಸುವ ಸುಳಿವು ನೀಡಿದ ಬೆನ್ನಲ್ಲೇ ಚಿನ್ನದ ಬೆಲೆ ಗ್ರಾಮ್ಗೆ 100 ರೂನಷ್ಟು ಏರಿದೆ. ಬೆಳ್ಳಿ ಬೆಲೆಯೂ ಗ್ರಾಮ್ಗೆ ಒಂದೂವರೆ ರೂನಷ್ಟು ದುಬಾರಿಯಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಕಂಡ ಅತಿದೊಡ್ಡ ಹೆಚ್ಚಳ ಇದು. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 61,800 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 67,420 ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,850 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 61,800 ರೂಪಾಯಿ ಆಗಿದೆ.
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 61,800 ರೂ
- ಚೆನ್ನೈ: 62,350 ರೂ
- ಮುಂಬೈ: 61,800 ರೂ
- ದೆಹಲಿ: 61,950 ರೂ
- ಕೋಲ್ಕತಾ: 61,800 ರೂ
- ಕೇರಳ: 61,800 ರೂ
- ಅಹ್ಮದಾಬಾದ್: 61,850 ರೂ
- ಜೈಪುರ್: 61,950 ರೂ
- ಲಕ್ನೋ: 61,950 ರೂ
- ಭುವನೇಶ್ವರ್: 61,800 ರೂ
ಇಂದು ಬೆಳ್ಳಿ ದರವೂ ಕೊಂಚ ಏರಿಕೆಯಾಗಿದೆ. ಒಂದು ಗ್ರಾಂ ಬೆಳ್ಳಿಗೆ 76.10 ರೂ. ಇದೆ. 8 ಗ್ರಾಂಗೆ 608.80 ರೂ ಇದ್ದರೆ, 10 ಗ್ರಾಂಗೆ 761 ರೂ. ಇದೆ. 100 ಗ್ರಾಂಗೆ 7,610 ರೂ. ಹಾಗೂ 1 ಕಿಲೋಗೆ 76,100 ರೂ. ಬೆಲೆ ನಿಗದಿ ಆಗಿದೆ.