News Karnataka Kannada
Saturday, May 04 2024
ಬೆಂಗಳೂರು

ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ: ಗ್ರಾಮ್​ಗೆ 60 ರೂನಷ್ಟು ಕುಸಿತ

ವಾರಾಂತ್ಯದಲ್ಲಿ ತುಸು ತಗ್ಗಿದ್ದ ಚಿನ್ನ, ಬೆಳ್ಳಿ ಬೆಲೆ ಮತ್ತೆ ಹೆಚ್ಚುವ ಸಾಧ್ಯತೆ ಇದೆ. ಇಸ್ರೇಲ್, ಇರಾನ್ ಯುದ್ಧಭೀತಿ ಮಧ್ಯೆ ಚಿನ್ನ, ಬೆಳ್ಳಿ ಬೆಲೆಗಳಿಗೆ  ಇನ್ನಷ್ಟು ಬೇಡಿಕೆ ಹೆಚ್ಚುವ ನಿರೀಕ್ಷೆ ಇದೆ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇನ್ನಷ್ಟು ಏರುವ ಸಾಧ್ಯತೆ ಇದೆ.
Photo Credit : News Kannada

ಬೆಂಗಳೂರು: ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಇಂದು ಸ್ವಲ್ಪ ಮಟ್ಟಿಗಿನ ಕುಸಿತ ಕಂಡಿದೆ. ಚಿನ್ನದ ಬೆಲೆ ಗ್ರಾಮ್​ಗೆ ಬರೋಬ್ಬರಿ 60 ರೂನಷ್ಟು ಕಡಿಮೆಯಾಗಿದೆ.

ಬೆಳ್ಳಿ ಬೆಲೆ ಗ್ರಾಮ್​ಗೆ 15 ಪೈಸೆಯಷ್ಟು ಇಳಿಕೆ ಆಗಿದೆ. ಬೆಂಗಳೂರು ಹೊರತುಪಡಿಸಿ ಉಳಿದ ಕಡಿಮೆ ಬೆಳ್ಳಿ ಸ್ವಲ್ಪ ಅಗ್ಗವಾಗಿದೆ.  ವಿದೇಶಗಳಲ್ಲೂ ಬಹಳ ಕಡೆ ಚಿನ್ನದ ಬೆಲೆ ಇಳಿಕೆ ಮುಂದುವರಿದಿದೆ. ಅಮೆರಿಕದಂಥ ಕೆಲ ದೇಶಗಳಲ್ಲಿ ಯಥಾಸ್ಥಿತಿ ಇದೆ.

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 57,000 ರೂಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 62,180 ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,400 ರೂಪಾಯಿ ಇದೆ.

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ): ಬೆಂಗಳೂರು: 57,000 ರೂ, ಚೆನ್ನೈ: 57,500 ರೂ
ಮುಂಬೈ: 57,000 ರೂ, ದೆಹಲಿ: 57,150 ರೂ, ಕೋಲ್ಕತಾ: 57,000 ರೂ, ಕೇರಳ: 57,000 ರೂ, ಅಹ್ಮದಾಬಾದ್: 57,050 ರೂ, ಜೈಪುರ್: 57,150 ರೂ, ಲಕ್ನೋ: 57,150 ರೂ, ಭುವನೇಶ್ವರ್: 57,000 ರೂ ಇದೆ.

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ): ಮಲೇಷ್ಯಾ: 3,060 ರಿಂಗಿಟ್ (53,074 ರೂಪಾಯಿ ), ದುಬೈ: 2,232.50 ಡಿರಾಮ್ (50,473 ರೂಪಾಯಿ ), ಅಮೆರಿಕ: 620 ಡಾಲರ್ (51,485 ರೂಪಾಯಿ ), ಸಿಂಗಾಪುರ: 836 ಸಿಂಗಾಪುರ್ ಡಾಲರ್ (51,424 ರೂಪಾಯಿ ), ಕತಾರ್: 2,300 ಕತಾರಿ ರಿಯಾಲ್ (52,376 ರೂ), ಸೌದಿ ಅರೇಬಿಯಾ: 2,300 ಸೌದಿ ರಿಯಾಲ್ (50,922 ರೂಪಾಯಿ ), ಓಮನ್: 243 ಒಮಾನಿ ರಿಯಾಲ್ (52,411 ರೂಪಾಯಿ), ಕುವೇತ್: 192.50 ಕುವೇತಿ ದಿನಾರ್ (51,839 ರೂಪಾಯಿ ) ಇದೆ.

ಅಮೆರಿಕದಲ್ಲಿ ಬ್ಯಾಂಕ್ ಬಡ್ಡಿ ದರ ಏರಿಕೆ ಆಗಬಹುದು ಎಂಬ ಭೀತಿ ಈ ಚಿನ್ನದ ಬೆಲೆ ಇಳಿಕೆಗೆ ಎಡೆ ಮಾಡಿಕೊಟ್ಟಿದೆ. ತಜ್ಞರ ಅಂದಾಜಿನ ಪ್ರಕಾರ ಚಿನ್ನದ ಬೆಲೆ ಈಗ ಇಳಿಯುತ್ತಿದೆಯಾದರೂ ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯ ಹಾದಿ ಹಿಡಿಯುವ ನಿರೀಕ್ಷೆ ಇದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು