News Karnataka Kannada
Thursday, May 02 2024
ಬೆಂಗಳೂರು

ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಯಥಾಸ್ಥಿತಿ: ವಿದೇಶಗಳಲ್ಲಿ ತುಸು ಹೆಚ್ಚಳ

ಈ ವಾರ ಕುಸಿತದ ಹಾದಿಯಲ್ಲಿದ್ದ ಚಿನ್ನದ ಬೆಲೆ ಇವತ್ತು ಹೆಚ್ಚಾಗಿದೆ. ಚಿನ್ನ ಗ್ರಾಮ್​ಗೆ 45 ರೂನಷ್ಟು ದುಬಾರಿಯಾಗಿದೆ. 
Photo Credit : News Kannada

ಬೆಂಗಳೂರು: ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಯಥಾಸ್ಥಿತಿಯಲ್ಲಿದೆ. ವಿದೇಶಗಳಲ್ಲಿ ಹಲವೆಡೆ ಚಿನ್ನದ ಬೆಲೆ ಹೆಚ್ಚಾಗಿದೆ. ದುಬೈನಲ್ಲಿ ತುಸು ಬೆಲೆ ಇಳಿಕೆಯಾಗಿದೆ.

ನಿನ್ನೆ ಭಾರತದಲ್ಲಿ ಚಿನ್ನದ ಬೆಲೆ ಗ್ರಾಮ್​ಗೆ 25 ರೂನಷ್ಟು ಹೆಚ್ಚಳಗೊಂಡಿತ್ತು. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 58,000 ರೂಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 63,230 ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,450 ರೂಪಾಯಿ ಇದೆ.

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ): ಬೆಂಗಳೂರು: 58,000 ರೂ, ಚೆನ್ನೈ: 58,400 ರೂ
ಮುಂಬೈ: 58,000 ರೂ, ದೆಹಲಿ: 58,150 ರೂ, ಕೋಲ್ಕತಾ: 58,000 ರೂ, ಕೇರಳ: 58,000 ರೂ, ಅಹ್ಮದಾಬಾದ್: 58,050 ರೂ, ಜೈಪುರ್: 58,150 ರೂ, ಲಕ್ನೋ: 58,150 ರೂ, ಭುವನೇಶ್ವರ್: 58,000 ರೂ ಇದೆ.

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ): ಮಲೇಷ್ಯಾ: 3,100 ರಿಂಗಿಟ್ (53,920 ರೂಪಾಯಿ), ದುಬೈ: 2,277.50 ಡಿರಾಮ್ (51,459 ರೂಪಾಯಿ ), ಅಮೆರಿಕ: 625 ಡಾಲರ್ (51,849 ರೂಪಾಯಿ ), ಸಿಂಗಾಪುರ: 851 ಸಿಂಗಾಪುರ್ ಡಾಲರ್ (52,537 ರೂಪಾಯಿ ), ಕತಾರ್: 2,345 ಕತಾರಿ ರಿಯಾಲ್ (53,366 ರೂಪಾಯಿ ), ಸೌದಿ ಅರೇಬಿಯಾ: 2,350 ಸೌದಿ ರಿಯಾಲ್ (52,003 ರೂಪಾಯಿ ), ಓಮನ್: 247 ಒಮಾನಿ ರಿಯಾಲ್ (53,238 ರೂಪಾಯಿ ), ಕುವೇತ್: 196 ಕುವೇತಿ ದಿನಾರ್ (52,794 ರೂಪಾಯಿ ) ಇದೆ.

ತಜ್ಞರ ಅಂದಾಜಿನ ಪ್ರಕಾರ ಚಿನ್ನದ ಬೆಲೆ ಈಗ ಇಳಿಯುತ್ತಿದೆಯಾದರೂ ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯ ಹಾದಿ ಹಿಡಿಯುವ ನಿರೀಕ್ಷೆ ಇದೆ. ಈ ವರ್ಷದ ಅಂತ್ಯಕ್ಕೆ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎನ್ನಲಾಗುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು