Bengaluru 24°C
Ad

‘ಪ್ಲೀಸ್..​ ದರ್ಶನ್​​​ ಅಣ್ಣನನ್ನು ನೋಡಲು ಬಿಡಿ..’ ವಿಶೇಷಚೇತನ ಅಭಿಮಾನಿ ಕಣ್ಣೀರು

Darshan Fan

ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್​​​ ಅವರನ್ನು ನೋಡಲು ನಿತ್ಯ ನೂರಾರು ‘ಡಿ’ ಬಾಸ್​ ಅಭಿಮಾನಿಗಳು ಜೈಲಿನತ್ತ ಬರುತ್ತಿದ್ದಾರೆ.

ಅದರಂತೆ ಇಂದು ದರ್ಶನ್​​ ಅವರನ್ನು ನೋಡಲೇಬೇಕು ಎಂದು ಜೈಲಿನ ಬಳಿ ಬಂದಿರುವ ಜಾಲಹಳ್ಳಿಯ ನಿವಾಸಿ ವಿಶೇಷಚೇತನ ಅಭಿಮಾನಿ ಸೌಮ್ಯ ಎಂಬುವವರು, ನನ್ನ ಅಣ್ಣ ದರ್ಶನ್​ ಅವರನ್ನು ನೋಡಲೇಬೇಕು ಎಂದು ಹಠ ಹಿಡಿದಿದ್ದಾರೆ.

‘ಇನ್ನು ದರ್ಶನ್​​ ಅವರು ಕೊಲೆ ಮಾಡಿಲ್ಲ, ಅವರು ಆರೋಪಿಯಾಗಿದ್ದಾರೆ ಅಷ್ಟೇ. ದರ್ಶನ್​ ಅಣ್ಣ ಜೈಲು ಸೇರಿದ್ದಾಗಿನಿಂದಲೂ ಊಟ-ನಿದ್ದೆ ಬಿಟ್ಟಿದ್ದೇನೆ. ನನಗೇನಾದರೂ ಪರವಾಗಿಲ್ಲ. ನನ್ನ ಅಣ್ಣನಿಗೆ ನಾನು ನೋಡಬೇಕು. ಅಧಿಕಾರಿಗಳು ಅನುಮತಿ ನೀಡದಿದ್ದರೂ ನಾನೂ ಇಲ್ಲೇ ಕುಳಿತು ಕೊಳ್ಳುತ್ತೇನೆ’.

‘ದರ್ಶನ್​ ಅವರು ಯಾರಿಗೂ ಗೊತ್ತಾಗದೇ ಸಹಾಯ ಮಾಡುವ ಗುಣವಿದೆ. ನಮ್ಮ ಕುಟುಂಬ ನಿರ್ವಹಣೆಗೆ ಆಟೋ ಸಹ ಕೊಡಿಸಿದ್ದಾರೆ. ಈ ವಿಚಾರ ನಾವು ಈಗ ಹೇಳುತ್ತಿದ್ದೇವೆ ಅಸ್ಟೇ. ಪ್ಲೀಸ್​ ದರ್ಶನ್​​​ ಅಣ್ಣನನ್ನು ನೋಡಲು ಬಿಡಿ’ ಎಂದು ವಿಶೇಷಚೇತನ ಅಭಿಮಾನಿ ಕಣ್ಣೀರ ಹಾಕಿದ್ದಾರೆ.

Ad
Ad
Nk Channel Final 21 09 2023
Ad