ಬೆಂಗಳೂರು : ನಿಷೇಧಿತ ಈ ಸಿಗರೇಟ್ ಗಳನ್ನು ಮಾರಾಟ ಮಾಡುತಿದ್ದ ಕೇರಳ ಮೂಲದ ವ್ಯಕ್ತಿಯ ಮನೆಯ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಸುಮಾರು ಮೂರು ಕೋಟಿಗೂ ಅಧಿಕ ಮೌಲ್ಯದ ಈ ಸೀರೀಡ್ಗಳನ್ನು ವಶಕ್ಕೆ ಪಡೆದ ಘಟನೆ ಬೆಂಗಳೂರಿನ ಸುದ್ಧಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೇರಳ ಮೂಲದ ಶೋಹೇಬ್ ಎನ್ನುವ ವ್ಯಕ್ತಿಯನ್ನು ಸಿಸಿಬಿ ತಂಡ ಬಂಧಿಸಿದೆ.
ದುಬೈನಿಂದ ಬೆಂಗಳೂರಿಗೆ ಈ ಸಿಗರೇಟ್ ಗಳನ್ನು ತರಿಸಿಕೊಂಡು ಮಾರಾಟ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಅಲ್ಲದೆ ಆನ್ಲೈನ್ ಮೂಲಕ ಆರೋಪಿ ಶೋ ಹೆಬ್ ಈ ಸಿಗರೇಟ್ ಗಳನ್ನು ಮಾರಾಟ ಮಾಡುತ್ತಿದ್ದ. ಒಂದು ಸಿಗರೇಟ್ ಗೆ 5000 ರಿಂದ ರೂ.6000 ಮಾರುತ್ತಿದ್ದ ಎನ್ನಲಾಗಿದೆ. ಪ್ರಕರಣವು ಶುದ್ಧಕುಂಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.