News Karnataka Kannada
Sunday, April 28 2024
ಚಿತ್ರದುರ್ಗ

ಒಂದು ಕ್ರೇಟ್‌ ಟೊಮೇಟೊ ಬೆಲೆ ಕೇವಲ 30 ರೂ: ರೈತರ ಆಕ್ರೋಶ

One crate of tomato costs only Rs 30: Farmers
Photo Credit : News Kannada

ಚಿತ್ರದುರ್ಗ: ಈ ಹಿಂದೆ ಟೊಮೇಟೊ ದರ ಏರಿಕೆ ದೇಶದೆಲ್ಲೆಡೆ ಸುದ್ದಿಯಾಗಿತ್ತು. ಇದೀಗ ಚಿತ್ರದುರ್ಗ ಮತ್ತು ದಾವಣಗೆರೆಯಲ್ಲಿ ತಿಂಗಳ ಹಿಂದೆ ಕೆಜಿಗೆ 200 ರೂ. ಗೆ ತಲುಪಿದ ನಂತರ ಟೊಮೇಟೊ ಬೆಲೆ ತೀವ್ರ ಕುಸಿತ ಕಂಡಿದೆ. ರಾಜ್ಯದ ಸಗಟು ಮಾರುಕಟ್ಟೆಯಲ್ಲಿ ಕೆಜಿಗೆ 2 ರೂ. ಗೆ ಹಾಗೂ ಚಿಲ್ಲರೆ ಮಾರುಕಟ್ಟೆಯಲ್ಲಿ 8 ರಿಂದ 10 ರೂ. ಗೆ ಟೊಮೇಟೊ ಮಾರಾಟವಾಗುತ್ತಿದೆ.

ಚಳ್ಳಕೆರೆ ತಾಲೂಕಿನ ಚಿಕ್ಕಮ್ಮನಹಳ್ಳಿ ಟೊಮೆಟೊ ಮಾರುಕಟ್ಟೆಯಲ್ಲಿ ಮಂಗಳವಾರ ಮತ್ತು ಬುಧವಾರದಂದು ಕೆಜಿಗೆ 2 ರೂ. ಗೆ ಕುಸಿದಿದೆ. ಚಳ್ಳಕೆರೆಯ ತಳಕು ಹೋಬಳಿಯ ಅಜ್ಜನಹಳ್ಳಿ ಗ್ರಾಮದ ರಂಗಸ್ವಾಮಿ 1.50 ಲಕ್ಷ ರೂ. ಖರ್ಚು ಮಾಡಿ ಎರಡು ಎಕರೆಯಲ್ಲಿ ಟೊಮೇಟೊ ಬೆಳೆದು ಚಿಕ್ಕಮ್ಮನಹಳ್ಳಿ ಗ್ರಾಮದಲ್ಲಿ ಮಾರಾಟಕ್ಕೆ ಕೊಂಡೊಯ್ದಿದ್ದಾರೆ. ಆದರೆ, ವ್ಯಾಪಾರಿಗಳು ಕೇವಲ 30 ರೂ. ಗೆ ಕ್ರೇಟ್ ಅನ್ನು ಕೊಂಡುಕೊಳ್ಳಲು ಮುಂದಾದಾಗ ಬಲವಂತವಾಗಿ ರಸ್ತೆಗೆ ಸುರಿದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು