News Karnataka Kannada
Saturday, May 11 2024
ಚಿಕ್ಕಬಳ್ಳಾಪುರ

ಆನ್‌ಲೈನ್‌ ಸಾಲ ಅರ್ಜಿ ಕ್ಲಿಕ್‌ ಮಾಡಿದ ವೈದ್ಯೆಗೆ ಘೋರ ಅನುಭವ: ದೂರಿನಲ್ಲಿದೆ ಬೆಚ್ಚಿಬೀಳಿಸುವ ಅಂಶ

ವ್ಯಕ್ತಿಯೊಬ್ಬ ತನ್ನ ತಾಯಿ, ಹೆಂಡತಿ ಮತ್ತು ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದ  ಸೀತಾಪುರದಲ್ಲಿ ನಡೆದಿದೆ.
Photo Credit : Pixabay

ಚಿಕ್ಕಬಳ್ಳಾಪುರ: ಮಹಿಳಾ ವೈದ್ಯೆಗೆ ಹಣ ನೀಡುವಂತೆ ಬ್ಲ್ಯಾಕ್‌ ಮೇಲ್‌ ಮಾಡಿದ್ದಲ್ಲದೆ ಆಕೆಯ ಅಶ್ಲೀಲ ಚಿತ್ರಗಳನ್ನು ಮಾರ್ಫ್ ಮಾಡಿ ಸಂಬಂಧಿಕರಿಗೆ ರವಾನಿಸಿದ ಘಟನೆ ನಡೆದಿದೆ.

ಮಹಿಳಾ ವೈದ್ಯೆ ಎಂಬಿಬಿಎಸ್ ಮುಗಿಸಿ ಪ್ರಾಕ್ಟೀಸ್‌ ನಡೆಸುತ್ತಿದ್ದರು. ಅವರು ಕೆಲ ಸಮಯದ ಹಿಂದೆ ಆನ್‌ಲೈನ್‌ ಸಾಲ ಅರ್ಜಿಯನ್ನು ಕ್ಲಿಕ್‌ ಮಾಡಿದ್ದರು. ಬಳಿಕ ಆಕೆಗೆ ಕರೆಗಳು ಬರತೊಡಗಿದ್ದು, ಆನ್‌ಲೈನ್‌ಲ್ಲಿ ಪಡೆದ 5 ಸಾವಿರ ರೂ. ಸಾಲವನ್ನು ಹಿಂದಿರುಗಿಸುವಂತೆ ಒತ್ತಡ ಹೇರಿದ್ದರು. ಆದರೆ ತಾನು ಸಾಲ ಪಡೆದಿಲ್ಲ ಎಂದು ನಿರ್ಲಕ್ಷ್ಯ ಮಾಡಿದ್ದರು. ನಂತರ ಕರೆ ಮಾಡಿದವರು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆಯೊಡ್ಡಿದಲ್ಲದೆ ಸಂಬಂಧಿಗಳಿಗೆ ಆಕೆಯ ಅಶ್ಲೀಲ ಫೋಟೋಗಳನ್ನು ಕಳುಹಿಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ತನ್ನ ಸಾಮಾಜಿಕ ಜಾಲತಾಣಗಳ ಅಕೌಂಟ್‌ಗಳಿಂದ ಫೋಟೋ ತೆಗೆಯಲಾಗಿದೆ ಎಂದು ದೂರು ನೀಡಿದ್ದಾರೆ. ಈ ಕೃತ್ಯದ ಹಿಂದೆ ಸಂಘಟಿತ ದರೋಡೆಕೋರರ ಕೈವಾಡವಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು