ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಕಡಿಮೆಯಾಗುತ್ತಿವೆ. ಇನ್ನೂ 10 ದಿನಗಳಲ್ಲಿ ಸಂಪೂರ್ಣ ಕಡಿಮೆಯಾಗಲಿದೆ ಎಂದು ತಿಳಿಸಿದ್ದಾರೆ. ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ 3 ನೇ ಅಲೆ ಎಷ್ಟು ವೇಗವಾಗಿ ಹರಡುತ್ತೆಯೋ ಅಷ್ಟೇ ವೇಗವಾಗಿ ಕಡಿಮೆಯಾಗುತ್ತೆ ಎಂದು ಹೇಳಿದ್ದೆ.
ರಾಜ್ಯದಲ್ಲಿ ಕೊರೊನಾ 3 ನೇ ಅಲೆ ವೇಗವಾಗಿ ಹರಡಿತ್ತು. ದಿನಕಳೆದಂತೆ ಕೊರೊನಾ 3 ನೇ ಅಲೆ ಕಡಿಮೆಯಾಗಲಿದೆ. ಇನ್ನೂ 10 ದಿನಗಳಲ್ಲಿ ಕೊರೊನಾ ವೈರಸ್ 3 ನೇ ಅಲೆ ಸಂಪೂರ್ಣವಾಗಿ ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ.