News Karnataka Kannada
Monday, April 29 2024
ಬೆಂಗಳೂರು

ಬೆಂಗಳೂರು: ಇಂಧನ ಇಲಾಖೆಯ ಆರ್ಥಿಕ ಸದೃಢತೆಗೆ ಕ್ರಮ -ಸಿಎಂ

Steps will be taken to strengthen the finances of the power department: CM
Photo Credit : By Author

ಬೆಂಗಳೂರು: ವಿದ್ಯುತ್ ಉತ್ಪಾದನೆ,  ಹಂಚಿಕೆ, ವಿತರಣೆಯಲ್ಲಿ ದಕ್ಷತೆ, ನಷ್ಟ ತಡೆಯಲು ಹಾಗೂ  ಇಂಧನ ಇಲಾಖೆಯ ಆರ್ಥಿಕ  ಸದೃಢತೆಗೆ  ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ  ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬೆವಿಕಂ ವ್ಯಾಪ್ತಿಯ  ಬೆಂಗಳೂರು ನಗರಮತ್ತು ಗ್ರಾಮಾಂತರ, ರಾಮನಗರ, ಚಿತ್ರದುರ್ಗ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಮತ್ತು  ದಾವಣಗೆರೆ ಜಿಲ್ಲೆ, ಕಚೇರಿ ಕಟ್ಟಡಗಳ  ಉದ್ಘಾಟನೆ ಮತ್ತು ಶಂಕುಸ್ಥಾಪನೆ ನರವೇರಿಸಿ ಅವರು ಮಾತನಾಡಿದರು.

ಇಂಧನ ಇಲಾಖೆಯಲ್ಲಿ ಸಬ್ಸಿಡಿ ಹಾಗೂ ಸಾರಿಗೆ ಇಲಾಖೆಗೆ ನಷ್ಟವಾಗಿದ್ದು, ಇವೆರಡೂ ಸಂಸ್ಥೆಗಳನ್ನು ಆರ್ಥಿಕವಾಗಿ ಸದೃಢಗೊಳಿಸಲು ಎರಡು  ಪ್ರತ್ಯೇಕ ಸಮಿತಿಗಳನ್ನು ರಚಿಸಿದ್ದು, ವರದಿಯಂತೆ  ಸುಧಾರಣಾ ಕ್ರಮಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದರು.

ಸುಮಾರು 16 ಸಾವಿರ  ಕೋಟಿ  ರೂ.ಗಳ  ವಿದ್ಯುತ್ಸ ಬ್ಸಿಡಿಯನ್ನು ನೀಡಿದ್ದರೂ  ಎಸ್ಕಾಂಗಳು  ಸಾಲದಲ್ಲಿದೆ.ಕಳೆದ  ಒಂದೂವರೆ ವರ್ಷದಲ್ಲಿ ಇಂಧನ ಕ್ಷೇತ್ರಕ್ಕೆ9 ಸಾವಿರ ರೂ.ಗಳನ್ನು ನೀಡಲಾಗಿದೆ.  ಎಸ್ಕಾಮ್ ಹಾಗೂ ಕರ್ನಾಟಕ ವಿದ್ಯುತ್ ನಿಗಮಕ್ಕೆ ವಿಶೇಷ ಅನುದಾನ ನೀಡಲಾಗಿದೆ. ಬೇಸಿಗೆಯಲ್ಲಿ  ವಿದ್ಯುಶ್ಚಕ್ತಿಯ ನಿರ್ವಹಣೆ ಹಾಗೂ ಸಿದ್ಧತೆ, ವಿದ್ಯುತ್ ಉತ್ಪಾದನೆ ಹಾಗೂ ಸಂಗ್ರಹಣೆ ಮಾಡುವುದು  ಹಾಗೂ ಹೆಚ್ಚುವರಿ ವಿದ್ಯುತ್ ನ್ನು ಮಾರಾಟ ಮಾಡಿ 2500 ಕೋಟಿ ಲಾಭಾಂಶವನ್ನು ಪಡೆಯಲಾಗಿದೆ. ರೈತ, ಉದ್ಯಮಿ, ಬೀದಿಬದಿ ವ್ಯಾಪಾರಿ ಸೇರಿದಂತೆ ವಿದ್ಯುಚ್ಛಕ್ತಿಯ ಎಲ್ಲ ವರ್ಗದ ಗ್ರಾಹಕರಿಗೆ ಸಮರ್ಪಕವಾದ ಸೇವೆಯನ್ನು ನೀಡಲಾಗುತ್ತಿದೆ. ಬೇಸಿಗೆಯ ಕಾಲದಲ್ಲಿ  ಹೆಚ್ಚಿನ ಸಂಖ್ಯೆಯ ಟ್ರಾನ್ಸ್ ಫಾರ್ಮರ್ ಗಳನ್ನು ಸಿದ್ಧಪಡಿಸಿಕೊಳ್ಳಲಾಗುತ್ತಿದೆ ಎಂದರು.

ಪವರ್‍ನಲ್ಲಿ ಪವರ್ ಪೆÇಲಿಟಿಕ್ಸ್ ನಡೆಯುತ್ತಿದೆ. ವಿದೇಶಿ ಕಲ್ಲಿದ್ದಲು ತರಿಸಿ ಅದನ್ನು ಸ್ಥಳೀಯ ಕಲ್ಲಿದ್ದಲು ಜೊತೆಗೆ ಬೆರೆಸಿ ಬಳಸಲು ಸಾಧ್ಯವಾಗದೆ ನಷ್ಟ ಅನುಭವಿಸಬೇಕಾಯಿತು. ಪೂರಕವಾದ ಇಂಧನ ನೀತಿಯಿರದ ಕಾರಣ, ವಿದ್ಯುತ್ಛಕ್ತಿ ಇಲಾಖೆಯ ಪವರ್ ಬಳಿಸಿ ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿ, ವಿದ್ಯುತ್ ಕ್ಷೇತ್ರದಲ್ಲಿ ನಷ್ಟ ಅನುಭವಿಸುವಂತಾಯಿತು. ಈ ರೀತಿಯ ನಷ್ಟವಾಗಬಾರದು. ವಿದ್ಯುತ್ ನಲ್ಲಿ ಆಗುತ್ತಿರುವ ನಷ್ಟವನ್ನು ಕಡಿತಗೊಳಿಸಬೇಕು. ಇಂಧನ ಕ್ಷೇತ್ರದಲ್ಲಿ ಆಗುತ್ತಿರುವ ನಷ್ಟವನ್ನು ವೈಜ್ಞಾನಿಕವಾಗಿ ಲೆಕ್ಕಹಾಕಬೇಕಿದೆ. ಈ ನಿಟ್ಟಿನಲ್ಲಿ ಸುಧಾರಣೆಗಳಾಗಬೇಕಿದೆ ಎಂದರು.

ಕುಟೀರ ಜ್ಯೋತಿ, ಭಾಗ್ಯ ಜ್ಯೋತಿ ಯೋಜನೆಯಡಿ ಬಡಜನರಿಗೆ 40 ಯೂನಿಟ್ ವಿದ್ಯುತ್ ಉಚಿತವಾಗಿ   ನೀಡಲಾಗುತ್ತಿದೆ. ಗೃಹೋಪಯೋಗದಲ್ಲಿ  ಸಾಧಾರಣವಾಗಿ ಗರಿಷ್ಟ 60-70 ಯೂನಿಟ್ ಖರ್ಚಾಗುತ್ತದೆ. ಆದರೆ, ಸುಮ್ಮನೆ 200 ಯುನಿಟ್ ಉಚಿತ ಕೊಡುತ್ತೇವೆ ಎಂದು ಹೇಳುವುದರಲ್ಲಿ ಏನು ಅರ್ಥ ಇದೆ.  ಆದ್ದರಿಂದ ಇಂಧನ ಕ್ಷೇತ್ರದಲ್ಲಿ ಪವರ್ ಪಾಲಿಟಿಕ್ಸ್ ಮಾಡಬಾರದು. ಇದು ಜನರಿಗೆ ಮೋಸ ಮಾಡುವ ತಂತ್ರ ಎಂದರು.

ಕೇಂದ್ರ ಸರ್ಕಾರ ರೈತರಿಗೆ ಸೋಲಾರ ಪಂಪ್ ಸೆಟ್ ಗಳಿಗೆ ಸಹಾಯ ನೀಡುತ್ತಿದೆ. ಈ ವರ್ಷ ಬಜೆಟ್   ನಲ್ಲಿ 3000 ಕೋಟಿ ರೂ.  ಸುಗಮ ವಿದ್ಯುತ್ ರವಾನೆಗೆ ಕೆಪಿಟಿಸಿಲ್ ಗೆ  ನೀಡುತ್ಗಿದ್ದೆವೆ. ಈ  ಇಲಾಖೆಯಿಂದ ಜನ್ನಷ್ಟು ಉತ್ತಮ  ಹಾಗೂ ದಕ್ಷತೆಯಿಂದ ಕೆಲಸ ಮಾಡಿ, ಕೆಪಿಟಿಸಿಎಲ್  ಉದ್ಯೋಗಿಗಳ ವೇತನ ಪರಿಷ್ಕರಣೆಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ಸೆಂಟರ್ ಆಫ್ ಎಕ್ಸಲೆನ್ಸ್ ಕೆಂದ್ರಗಳಮೂಲಕ ಉತ್ತಮ ಕೆಲಸಗಳು ಆಗಲಿ.ತಂತ್ರಜ್ಞಾನದ ಜೊತೆಗೆ ಮಾನವ ಸಂಪನ್ಮೂಲವನ್ನು ಬಳಸಿಕೊಳ್ಳಬೇಕಿದೆ ಎಂದರು.

ನವೀಕರಿಸಬಹುದಾದ ಇಂಧನ ಬಳಕೆಗೆ ಪಂಪ್ ಸ್ಟೋರೇಜ್ ಅಗತ್ಯ  ವಿದ್ಯುತ್ ಸ್ಟೋರೇಜ್ ಸಲುವಾಗಿ ಸೋಲಾರ್ ಬ್ಯಾಟರಿಗಳ ತಯಾರಿಕೆಗೆ  ಆದ್ಯತೆ  ನೀಡುತ್ತಿದ್ದೇವೆ. ಒಂದು ಕಡೆ ವಿದ್ಯುತ್ ಉತ್ಪಾದನೆ  ಹಾಗೂ ಅದರ ಸಮರ್ಪಕ ವಿತರಣೆ ಹಾಗೂ ಸದಾ ಮೇಲ್ದರ್ಜೇರಿಸುತ್ತಿರುವುದು. ಮತ್ತೊಂದೆಡೆ ಆಧುನಿಕತಂತ್ರಜ್ಞಾನದ ಬಳಕೆಯಿಂದ ಮಾತ್ರ ನಮ್ಮ ಭವಿಷ್ಯದ ಇಂಧನ ಉತ್ತಮವಾಗಲಿದೆ ಎಂದರು.

ಇಂಧನ ಸಚಿವ ಸುನೀಲ್ ಕುಮಾರ್,  ಶಾಸಕ ಹಾಗೂ ವಿಧಾನಸಭೆಯಲ್ಲಿ ಸರ್ಕಾರದ ಮುಖ್ಯ   ಸಚೇತಕ ಸತೀಶ್ ರೆಡ್ಡಿ, ಅಪರ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್, ಬೆಸ್ಕಾಂ ವ್ಯವಸ್ಥಾಪಕ  ನಿರ್ದೇಶಕ ಮಹಂತೇಶ್ ಬೀಳಗಿ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು