News Karnataka Kannada
Friday, May 03 2024
ಸಂಪಾದಕೀಯ

ಮಂಗಳೂರು: ಮಾದಕ ವಸ್ತು ವಿಷವರ್ತುಲದಲ್ಲಿ ಯುವಜನತೆ

2,200 ಕೋಟಿ ರೂಪಾಯಿ ಮೌಲ್ಯದ 1,100 ಕೆ.ಜಿ ತೂಕದ ಮಾದಕ ವಸ್ತುವಾದ ಮೆಫಡ್ರೋನ್ ಅನ್ನು ಮಹಾರಾಷ್ಟ್ರದ ಪುಣೆಯ ಕುರ್ಕುಂಭ್‌ನ ಗೋಡೌನ್​ವೊಂದರಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
Photo Credit : Pixabay

ಮಂಗಳೂರು: ಹಲವು ವರ್ಷಗಳ ಹಿಂದೆ ಕದ್ದು ಮುಚ್ಚಿನಡೆಯುತ್ತಿದ್ದ ಈ ಡ್ರಗ್ ದಂಧೆ ಇತ್ತೀಚಿನ ದಿನಗಳಲ್ಲಿ ಒಂದು ರೀತಿ ಹಿರಂಗ ವ್ಯವಹಾರವಾಗಿ ಮಾರ್ಪಟ್ಟಿ ರುವುದು ಕಾನೂನು ವ್ಯವಸ್ಥೆಯಲ್ಲಿನ ಲೋಪಕ್ಕೆ ಕೈಗನ್ನಡಿ ಹಿಡಿದಂತೆ ಆಗಿದೆ.

ಈ ಚಟಕ್ಕೆ ಬಲಿಯಾದ ವಿದ್ಯಾರ್ಥಿಗಳು, ಯುವಕರು ತಮ್ಮ ಜೀವನ ಹಾಳು ಮಾಡಿಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ ಮಾದಕ ವಸ್ತುಗಳ ಚಟಕ್ಕೆ ದಾಸನಾದರೆ, ಅದರಿಂದ ಅವರನ್ನು ಹೊರತರುವುದು ಅಷ್ಟು ಸುಲಭದ ಕೆಲಸವಲ್ಲ, ಅದರಲ್ಲೂ ವಿದ್ಯಾಭ್ಯಾಸದ ವೇಳೆ ಈ ರೀತಿಯ ಚಟಗಳಿಗೆ ಬಿದ್ದು ಕಾಸಿಗಾಗಿ ಅನೇಕ ರೀತಿಯ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವ ಪ್ರಕರಣಗಳಿಗೇನೂ ಕಡಿಮೆ ಇಲ್ಲ. ಇಂತಹ ಮಕ್ಕಳ ಪೋಷಕರ ಕತೆ ಹೇಳತೀರದು. ಕೌನ್ಸೆಲಿಂಗ್ ನಡೆಸಿದರೂ ಪರಿಹಾರ ದೊರೆಯದೇ ಅದೆಷ್ಟೋ ಪೋಷಕರು ಕೈಚೆಲ್ಲಿ ಕಣ್ಣೀರಿನಿಂದ ನಿತ್ಯ ಕೈತೊಳೆಯುತ್ತಿರುವ ಉದಾಹರಣೆಗಳು ಸಾಕಷ್ಟಿವೆ.

ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಒಡಿಶಾ ಸೇರಿದಂತೆ ಹಲವು ರಾಜ್ಯಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಪ್ರಮುಖ ನಗರಗಳಿಗೆ ಡ್ರನ್ ಪೂರೈಸುತ್ತಿರುವ ಮಾಫಿಯಾವನ್ನು ಬೇರು ಮಟ್ಟದಲ್ಲಿ ಕತ್ತಲ ಹಾಕದಿದ್ದರೆ ಭವಿಷ್ಯದ ದಿನಗಳು ಮತ್ತಷ್ಟು ಆತಂಕಕಾರಿಯಾಗಲಿವೆ, ಇದರ ವಿರುದ್ಧ ಕೇವಲ ಕರ್ನಾಟಕ ಒ೦ಟಿಯಾಗಿ ಹೋರಾಡಿದರೆ ಸಾಲದು, ಹಲವು ರಾಜ್ಯಗಳು ಜಂಟಿಯಾಗಿ ಹೋರಾಡಲು ಕೈಜೋಡಿಸಬೇಕಿದೆ.

ಜಾಗೃತಿ ಅವಶ್ಯ: ಎಲ್ಲಕ್ಕಿಂತ ಮುಖ್ಯವಾಗಿ ಶಾಲಾ-ಕಾಲೇಜುಗಳು, ಯುವಸಮುದಾಯದಲ್ಲಿ ಈ ಬಗ್ಗೆ ತಕ್ಷಣವೇ ಜಾಗೃತಿ ಮೂಡಿಸುವುದು ಅವಶ್ಯವಾಗಿದೆ. ಪೊಲೀಸ್‌ ಇಲಾಖೆ ಜತೆಗೆ ವಿವಿಧ ಸಂಘ ಸಂಸ್ಥೆಗಳು ಕೈಜೋಡಿಸಿದರೆ ಮಾತ್ರ ಜಾಗೃತಿ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ. ಕೇವಲ ಸಾಂಕೇತಿಕವಾಗಿ ವರ್ಷಕ್ಕೊಮ್ಮೆ ಜಾಗೃತಿ ಕಾರ್ಯಕ್ರಮ ನಡೆದರೆ ಸಾಲದು, ಇದೊಂದು ರೀತಿ ಅಭಿಯಾನ ಆಗಬೇಕಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು