News Karnataka Kannada
Sunday, April 28 2024
ಬೆಂಗಳೂರು

ಬೆಂಗಳೂರು: ನಾಗಮಂಗಲದಲ್ಲಿ ಪತ್ನಿ ಸುಧಾ ಮೂಲಕ ಶಿವರಾಮೆ ಗೌಡ ರಾಜಕೀಯ

Shivarame Gowda's wife Sudha in Nagamangala
Photo Credit : News Kannada

ಬೆಂಗಳೂರು: ದಳಪತಿಗಳ ಭದ್ರಕೋಟೆ ಮಂಡ್ಯ ದಲ್ಲಿ ಚುನಾವಣೆ ರಂಗು ದಿನದಿಂದ ದಿನಕ್ಕೆ ಏರುತ್ತಿದೆ. ಈ ನಿಟ್ಟಿನಲ್ಲಿ ಬಿಜೆಪಿಯೂ ಮಂಡ್ಯದಲ್ಲಿ ತಳವೂರಲು ಹಲವು ವರ್ಷಗಳಿಂದ ಹಲವು ವಿಧಾನದಲ್ಲಿ ಪ್ರಯತ್ನಿಸುತ್ತಿದೆ. ಈ ಹಿಂದೆ ಜೆಡಿಎಸ್‌ ನಲ್ಲಿದ್ದ ನಾರಾಯಣ ಗೌಡ ಅವರನ್ನು ಅಪರೇಶನ್‌ ಕಮಲ ಮೂಲಕ ಸೆಳೆದು ಆ ಭಾಗದಲ್ಲಿ ಪಕ್ಷ ಗಟ್ಟಿಗೊಳಿಸುವ ಯತ್ನ ನಡೆಸಿದೆ.

ಅದೇರೀತಿ ಇತ್ತೀಚೆಗೆ ಸಂಸದೆ ಸುಮಲತಾ ಬಿಜೆಪಿಗೆ ಬೆಂಬಲ ಘೋಷಣೆ ಮಾಡಿದ್ದಾರೆ. ಬಿಜೆಪಿ ಪಕ್ಷ ವಿಸ್ತರಣೆ ಉದ್ದೇಶದಿಂದಲೇ ಕಾಂಗ್ರೆಸ್‌ ಜೆಡಿಎಸ್‌ ಮುಖಂಡರಿಗೆ ಗಾಳ ಹಾಕುತ್ತಿರುವುದು ಸುಳ್ಳಲ್ಲ. ಮಂಡ್ಯದಲ್ಲಿ ಬಿಜೆಪಿಗೆ ಮೂಲಬೇರು ಗಟ್ಟಿಯಿಲ್ಲದ ಕಾರಣ ವಿವಿಧ ಪಕ್ಷಗಳಿಂದ ಅಧಿಕಾರ ಸಹಿತ ಕಾರಣಗಳಿಗೆ ವಲಸೆ ಬಂದವರೇ ಆಸರೆಯಾಗಿದ್ದಾರೆ. ಪ್ರಸ್ತುತ ಮಂಡ್ಯ ನಾಗಮಂಗಲದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಸುಧಾ ಶಿವರಾಮ್‌ ಹಿನ್ನಲೆಯೂ ಹೀಗೆ ಇದೆ. ಜೆಡಿಎಸ್‌ ನಿಂದ ಉಚ್ಚಾಟನೆಗೊಂಡು ಬಿಜೆಪಿ ಸೇರಿದ್ದ ಎಲ್‌. ಆರ್‌. ಶಿವರಾಮೆ ಗೌಡ ತಮ್ಮ ಪತ್ನಿಗೆ ನಾಗಮಂಗಲದಲ್ಲಿ ಟಿಕೇಟ್‌ ಕೊಡಿಸಿ ಚುನಾವಣೆ ರಣಕಣದಲ್ಲಿ ಮುನ್ನುಗ್ಗುತ್ತಿದ್ದಾರೆ.

ಮಂಡ್ಯ ಬಿಜೆಪಿ ಚುನಾವಣ ಕಲಿಗಳ್ಯಾರು: ಮಂಡ್ಯ ಜಿಲ್ಲೆಯ ಏಳು ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಘೋಷಿಸಿದೆ. ಮದ್ದೂರಿನಲ್ಲಿ ಎಸ್‌.ಪಿ ಸ್ವಾಮಿ, ಮಳವಳ್ಳಿ ಪ.ಜಾ ಮೀಸಲು ಕ್ಷೇತ್ರಕ್ಕೆ ಮುನಿರಾಜು, ಮಂಡ್ಯಕ್ಕೆ ಅಶೋಕ್ ಜಯರಾಮ್, ಶ್ರೀರಂಗಪಟ್ಟಣಕ್ಕೆ ಸಚ್ಚಿದಾನಂದ, ಕೆ.ಆರ್ ಪೇಟೆಗೆ ನಾರಾಯಣಗೌಡ, ಮೇಲುಕೋಟೆಗೆ ಡಾ.ಇಂದ್ರೇಶ್ ಕುಮಾರ್ ಮತ್ತು ನಾಗಮಂಗಲಕ್ಕೆ ಸುಧಾ ಶಿವರಾಮ್‌ರವರಿಗೆ ಟಿಕೆಟ್ ನೀಡಲಾಗಿದೆ.

ಪತ್ನಿ ಮೂಲಕ ಶಿವರಾಮೆ ಗೌಡ ರಾಜಕೀಯ: ನಾಗಮಂಗಲ ಬಿಜೆಪಿ ಟಿಕೆಟ್‌ಗಾಗಿ ಫೈಟರ್ ರವಿ ಮತ್ತು ಜೆಡಿಎಸ್‌ನಿಂದ ಉಚ್ಛಾಟನೆಗೊಂಡು ಇತ್ತೀಚೆಗೆ ಬಿಜೆಪಿ ಸೇರಿದ ಎಲ್.ಆರ್ ಶಿವರಾಮೆ ಗೌಡ ಪೈಪೋಟಿ ನಡೆಸಿದ್ದರು. ಆದರೆ ಅವರಿಬ್ಬರನ್ನೂ ಬಿಟ್ಟು ಅಚ್ಚರಿಯ ನಡೆಯಲ್ಲಿ ಶಿವರಾಮೇಗೌಡರ ಪತ್ನಿ ಸುಧಾ ಶಿವರಾಮೆ ಗೌಡಗೆ ಬಿಜೆಪಿ ಟಿಕೆಟ್ ಲಭಿಸಿದೆ. ತುರುವೇಕೆರೆ ಕ್ಷೇತ್ರದಿಂದ ಎರಡು ಭಾರಿ ಶಾಸಕರಾಗಿ ಆಯ್ಕೆಯಾಗಿದ್ದ ಕೆ.ಎಚ್ ರಾಮಕೃಷ್ಣಯ್ಯ ಪುತ್ರಿಯಾದ ಸುಧಾ ಶಿವರಾಮೆ ಗೌಡರು ಸದ್ಯ ನಾಗಮಂಗಲದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.

ಫೈಟರ್‌ ರವಿಗೆ ನಿರಾಸೆ: ರೌಡಿ ಶೀಟರ್‌ ರವಿ ಅವರು ನಾಗಮಂಗಲ ಟಿಕೇಟ್‌ ಆಕಾಂಕ್ಷಿಯಾಗಿದ್ದು ನಾಗಮಂಗಲ ಕ್ಷೇತ್ರದ ಟಿಕೇಟ್‌ ಪಡೆಯಲು ವರ್ಷದ ಹಿಂದಿನಿಂದಲೇ ಕಸರತ್ತು ನಡೆಸಿದ್ದರು. ಆದರೆ ಇದಕ್ಕೆ ತಡೆಯೊಡ್ಡಿದ್ದು, ಪ್ರಧಾನಿ ನಮಸ್ತೆ ಪೋಟೋಗಳು ವೈರಲ್‌ ಆಗಿದ್ದು, ಮತ್ತು ಕೈ ನಾಯಕರು ಬಿಜೆಪಿಯನ್ನು ಈ ವಿಚಾರದಲ್ಲಿ ಹಿಗ್ಗಾಮುಗ್ಗ ಜಾಡಿಸಿದ್ದು. ಮಂಡ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದ ವೇಳೆ ಫೈಟರ್‌ ರವಿ ಅವರಿಗೆ ಕೈ ಮುಗಿದಿದ್ದು, ವಿವಾದಕ್ಕೆ ಕಾರಣವಾಗಿತ್ತು. ಈ ವಿಚಾರವೇ ಫೈಟರ್‌ಗೆ ಬಿಜೆಪಿ ಟಿಕೇಟ್‌ ಪಡೆಯಲು ಬಹುದೊಡ್ಡ ಅಡ್ಡಿಯಾಯಿತು ಎಂಬ ಮಾತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು