News Karnataka Kannada
Sunday, May 05 2024
ಬೆಂಗಳೂರು

ಬೆಂಗಳೂರು: ಜನತಾ ಯಾತ್ರೆಯ ಮೂಲಕ ಬೆಂಗಳೂರು ನಗರಕ್ಕೆ ನಮ್ಮ ಕೊಡುಗೆಗಳ ಬಗ್ಗೆ ಜನರಿಗೆ ಮಾಹಿತಿ

People are informed about our contributions to Bengaluru city through Janata Yatra
Photo Credit :

ಬೆಂಗಳೂರು: ಬೆಂಗಳೂರು ನಿರ್ಮಾತೃರಾದ ಕೆಂಪೇಗೌಡರು ನಗರದ ಉತ್ತಮ ಭವಿಷ್ಯಕ್ಕಾಗಿ ಕಟ್ಟಿದಂತಹ ಕೆರೆಗಳು ಹಾಗೂ ರಾಜಕಾಲುವೆಗಳನ್ನು ನುಂಗಿ ನೀರು ನಾಲ್ಕೈದು ಕೆಜಿ ಅಕ್ಕಿ ನೀಡಿ ಪೋಸು ಕೊಡುತ್ತಿದ್ದಾರೆ. ಜುಲೈ 1 ರಿಂದ ಪ್ರಾರಂಭವಾಗುವ ಜನತಾ ಯಾತ್ರೆಯಲ್ಲಿ ಬೆಂಗಳೂರು ನಗರಕ್ಕೆ ನಮ್ಮ ಕೊಡುಗೆಗಳು ಹಾಗೂ ನಗರದ ಜನರ ತೆರಿಗೆ ಹಣದ ಲೂಟಿ ಹೊಡೆದು ಎಸಗಿರುವ ಅಕ್ರಮಗಳನ್ನು ಜನರ ಮುಂದೆ ಇಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಹೇಳಿದರು.

ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಆರ್‌.ಟಿ ನಗರದ ಮೈದಾನದಲ್ಲಿ ಜ್ಯಾತ್ಯಾತೀತ ಜನತಾದಳ ಬೆಂಗಳೂರು ನಗರ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ವತಿಯಿಂದ ಡಾ. ಸಯ್ಯದ್‌ ಮೋಹಿದ್‌ ಅಲ್ತಾಫ್‌ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತೋತ್ಸವಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಾಡಪ್ರಭುಗಳು ಬಹಳ ದೂರದೃಷ್ಟಿ ಇಟ್ಟುಕೊಂಡು ಬೆಂಗಳೂರು ನಗರವನ್ನು ಕಟ್ಟಿದ್ದರು. ಕೆರೆಕಟ್ಟೆಗಳನ್ನು ಕಟ್ಟಿ ಇಡೀ ನಗರವನ್ನು ಜಲಶ್ಯಾಮಲಗೊಳಿಸಿದ್ದರು. ಆದರೆಇಂದು ಭೂಗಳ್ಳರು ಸಾವಿರಾರು ಕೆರೆಗಳನ್ನು ತಮ್ಮ ಸ್ವಾರ್ಥಕ್ಕೋಸ್ಕರ ನುಂಗಿ ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟಿಸಿಕೊಂಡು ಮೆರೆಯುತ್ತಿದ್ದಾರೆ. ಮಳೆ ಬಂದಂತಹ ಸಂಧರ್ಭದಲ್ಲಿ ಕೆರೆಗಳಲ್ಲಿ ನೀರು ತುಂಬದೆ ತಗ್ಗು ಪ್ರದೇಶದಲ್ಲಿ ವಾಸಿಸುತ್ತಿರುವ ಬಡವರ ಮನೆಗಳಿಗೆ ನೀರು ನುಗ್ಗುತ್ತದೆ. ಭೂ ಧಾಹಕ್ಕೆ ಬೆಂಬಲ ಕೊಟ್ಟಿರುವುದು ಸರಕಾರವನ್ನು ಆಳಿರುವ ರಾಜಕಾರಣಿಗಳು ಎನ್ನುವುದನ್ನ ನೋವಿನಿಂದ ಹೇಳುತ್ತೇನೆ. ಬೆಂಗಳೂರು ನಗರ ಅಭಿವೃದ್ದಿ ಹೆಸರಿನಲ್ಲಿ ರಾಜಕಾರಣಿಗಳು ಕೋಟ್ಯಾಂತರ ರೂಪಾಯಿಗಳನ್ನು ಲೂಟಿ ಮಾಡಿ ಚುನಾವಣೆ ಸಂಧರ್ಭದಲ್ಲಿ ಓಲೈಸುಲು ಮುಂದಾಗುತ್ತಾರೆ. ಇಂತಹ ರಾಜಕಾರಣಿಗಳಿಗೆ ಪ್ರೊತ್ಸಾಹ ನೀಡುವುದನ್ನ ನಿಲ್ಲಿಸದಿದ್ದಲ್ಲಿ ಸ್ವಾತಂತ್ರ್ಯ ಬಂದು ನೂರು ವರ್ಷಗಳಾದರೂ ಜೀವನ ಹೀಗೇ ಇರುತ್ತದೆ ಎಂದರು.

ಜುಲೈ ‌ 1 ರಿಂದ ಜನತಾ ಯಾತ್ರೆ:

ಜುಲೈ ‌ 1 ರಿಂದ ಬೆಂಗಳೂರು ನಗರದಲ್ಲಿ ಜನತಾ ಯಾತ್ರೆಯನ್ನು ಪ್ರಾರಂಭಿಸಲಿದ್ದೇವೆ. 15 ವಾಹನಗಳ ಮೂಲಕ ಪ್ರತಿಯೊಂದು ವಾರ್ಡ್‌ ಮತ್ತು ರಸ್ತೆಗಳಿಗೂ ತಲುಪಲಿದ್ದೇವೆ. ಬೆಂಗಳೂರು ನಗರಕ್ಕೆ ಜೆಡಿಎಸ್‌ ಪಕ್ಷ ನೀಡಿರುವ ಕೊಡುಗೆಯನ್ನು ಸಾರಲಿದ್ದೇವೆ. ಹಾಗೆಯೇಉತ್ತದಾಯಿತ್ವ ಇಲ್ಲದೇ ಜನರ ತೆರಿಗೆ ಹಣವನ್ನು ಲೂಟಿ ಮಾಡಿರುವ ಜನರ ನಡೆಸಿರುವ ಅನ್ಯಾಯ ಅಕ್ರಮಗಳ ಬಗ್ಗೆಯೂ ಜನರಿಗೆ ತಿಳುವಳಿಕೆ ನೀಡಲಿದ್ದೇವೆ ಎಂದರು.

ಒಂದು ಬಾರಿ ಸ್ವತಂತ್ರವಾಗಿ ಆಡಳಿತ ನಡೆಸಲು ನಮ್ಮ ಪಕ್ಷಕ್ಕೆ ಅನುವು ಮಾಡಿಕೊಡಿ. ಇದರಿಂದ ಸ್ವತಂತ್ರವಾಗಿ ಅಭಿವೃದ್ದಿಯ ಹಲವಾರು ನಿರ್ಧಾರಗಳನ್ನು ತಗೆದುಕೊಳ್ಳಲು ಹಾಗೂ ಅದನ್ನು ಅನುಷ್ಠಾನಗಳಿಸಲು ಸಾಧ್ಯ ಎಂದರು.

ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಮಾತನಾಡಿಹೆಬ್ಬಾಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಡಾ. ಸಯ್ಯದ್‌ ಮೋಹಿದ್‌ ಅಲ್ತಾಪ್‌ ಅವರನ್ನ ಘೋಷಣೆ ಮಾಡಿದರು. ಒಬ್ಬ ಉತ್ತಮ ವಿದ್ಯಾವಂತ ಅಭ್ಯರ್ಥಿಗೆ ಮತ ನೀಡುವಂತೆ ಜನರಲ್ಲಿ ಕೋರಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ್ಬೆಂಗಳೂರು ನಗರ ಜೆಡಿಎಸ್‌ ಅಧ್ಯಕ್ಷ ಪ್ರಕಾಶ್‌ ಹೆಬ್ಬಾಳದ ಅಧ್ಯಕ್ಷರಾದ ಎಸ್‌ ರುದ್ರಪ್ಪ‌ಬಿಬಿಎಂಪಿ ಅಭ್ಯರ್ಥಿಗಳಾದ ಹಕೀಂ ಬಾಬುವಾರ್ಡ್‌ ನಂ 22 ರ ಮಾಜಿ ಬಿಬಿಎಂಪಿ ಸದಸ್ಯರಾದ ರಾಜಶೇಖರ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಸಲ್ಲಿಸಿರುವವರಿಗೆ ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು