News Karnataka Kannada
Thursday, May 02 2024
ಬೆಂಗಳೂರು ನಗರ

ಬೆಂಗಳೂರಿನ 10 ಕಡೆಗಳಲ್ಲಿ ಸ್ಪೋಟಕ್ಕೆ ಸಂಚು ರೂಪಿಸಿದ್ದ ಉಗ್ರರು

Terrorists planned to carry out blasts at 10 locations in Bengaluru
Photo Credit : News Kannada

ಬೆಂಗಳೂರು: ಬೆಂಗಳೂರಿನಲ್ಲಿ ಬುಧವಾರ ಬೆಳಗ್ಗೆ ಸಿಸಿಬಿ ಪೊಲೀಸರು ಐವರು ಶಂಕಿತ ಉಗ್ರರನ್ನು ಬಂಧಿಸಿದ್ದು, ತಂಡದ ರೂಪದಲ್ಲಿ ಕಾರ್ಯಾಚರಣೆಗೆ ಸಜ್ಜಾಗಿದ್ದ ಉಗ್ರರು ಬೆಂಗಳೂರು ನಗರದ ಹತ್ತು ಸ್ಥಳಗಳಲ್ಲಿ ಬಾಂಬ್‌ ಬ್ಲಾಸ್ಟ್‌ ಗೆ ಯೋಜನೆ ರೂಪಿಸಿದ್ದರು ಎಂಬ ಅಂಶ ಬಯಲಾಗಿದೆ. ಈ ಬಗ್ಗೆ ಬೆಂಗಳೂರು ನಗರ ಪೊಲೀಸ್ ಕಮಿಷನರ್​ ದಯಾನಂದ್ ಸುದ್ದಿಗೋಷ್ಠಿ ನಡೆಸಿದ್ದು, ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಮಾಡಲಾಗಿದೆ. ಬೆಂಗಳೂರು ನಗರದಲ್ಲಿ ವಿದ್ವಂಸಕ ಕೃತ್ಯ ಎಸಗಲು ಪ್ಲಾನ್ ಮಾಡಿದ್ದವರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಏನೆಲ್ಲ ವಶಕ್ಕೆ: ಬಂಧಿತರಿಂದ ಏಳು ಪಿಸ್ತೂಲ್ 45 ಮದ್ದು ಗುಂಡುಗಳು, ಹನ್ನೆರಡು ಬೇಸಿಕ್ ಸೆಟ್ ಮೊಬೈಲ್ ಫೋನ್, ಡ್ರ್ಯ್ಯಾಗರ್, ವಾಕಿ ಟಾಕಿ ವಶಕ್ಕೆ ಪಡೆದುಕೊಳ್ಳಲಾಗಿದೆ.

2008ರಲ್ಲಿ ನಡೆದಿದ್ದ ಸೀರಿಯಲ್ ಸ್ಫೋಟ ಆರೋಪಿ ನಸೀರ್​ ಸಂಚು ರೂಪಿಸಿದ್ದ. ಟಿ.ನಸೀರ್​​​ ಹಾಗೂ ಜುನೈದ್ ಈ ಪ್ರಕರಣದ ಮಾಸ್ಟರ್ ಮೈಂಡ್​ಗಳಾಗಿದ್ದು, ಸದ್ಯ ಟಿ.ನಸೀರ್​ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದು, ಪ್ರಮುಖ ಲೀಡರ್ ಜುಲೈನ್ ತಲೆಮರೆಸಿಕೊಂಡಿದ್ದಾನೆ.

2008 ರ ಸೀರಿಯಲ್ ಬ್ಲಾಸ್ಟ್ ಕೇಸ್ ನ ಅರೋಪಿ ಟಿ ನಜೀರ್ ಎಲ್ ಇ ಟಿ ಸಂಘಟನೆಗೆ ಸೇರಿದ್ದವನು. ಈ ಶಂಕಿತರ ಉಗ್ರರು ಕೃತ್ಯವೆಸಗಲು ವಿದೇಶದಿಂದ ಹಣ ಬಂದಿದೆ. ಆರೋಪಿಗಳಿಗೆ ಆನ್​ಲೈನ್ ಹಾಗೂ ನಗದು ರೂಪದಲ್ಲಿ ಹಣ ಪೂರೈಕೆಯಾಗಿದೆ. ಈ ಬಗ್ಗೆ ಐವರು ಆರೋಪಿಗಳನ್ನು 15 ದಿನ ಪೊಲೀಸ್ ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು. ಜಮತ್ ಇ ಇಸ್ಲಾಮಿ ಸಂಘಟನೆಯ ಹ್ಯಾಂಡ್ಲರ್ಸ್ ಮೂಲಕ ತರಬೇತಿ ಪಡೆಯಲು ಶಂಕಿತರು ಸುಲ್ತಾನ್ ಪಾಳ್ಯದಲ್ಲಿ ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳುತ್ತಿದ್ದರು. ಸುಲ್ತಾನ್ ಪಾಳ್ಯದ ಮಸೀದಿಯೊಂದರ ಪಕ್ಕದಲ್ಲಿಯೇ ವಾಸವಿದ್ದು ವಿಧ್ವಂಸಕ ಕೃತ್ಯಕ್ಕೆ ನಡೆಸಬೇಕಾದ ಬಗ್ಗೆ ಪ್ಲಾನಿಂಗ್ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.

10 ಕಡೆ ಬಾಂಬ್‌ ಬ್ಲಾಸ್ಟ್‌ ಗೆ ಯೋಜನೆ: ಬಂಧಿತ ಶಂಕಿತರು ಉಗ್ರರೊಂದಿಗೆ ಸೇರಿ ಬೆಂಗಳೂರಿನ 10 ಪ್ರದೇಶಗಳಲ್ಲಿ ಸ್ಪೋಟಕ್ಕೆ ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು