ಬೆಂಗಳೂರು: ಮಳೆ ಬಂದಾಗ ಅಂಡರ್ಪಾಸ್ನಲ್ಲಿ ವಾಹನ ನಿಲ್ಲಿಸಿದರೆ ದಂಡ ವಿಧಿಸಲಾಗುವುದು ಎಂದು ಬೆಂಗಳೂರು ಸಂಚಾರಿ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ತಿಳಿಸಿದ್ದಾರೆ.
ಅಂಡರ್ಪಾಸ್ನಲ್ಲಿ ವಾಹನ ನಿಲ್ಲಿಸುದರಿಂದ ಟ್ರಾಫಿಕ್ಜಾಮ್ ಉಂಟಾಗುತ್ತಿತ್ತು.ಇಂತಹ ಸಂದರ್ಭದಲ್ಲಿ ಹೆವಿ ವೆಹಿಕಲ್ಸ್ ಪಾಸ್ ಆದಾಗ ಅಪಘಾತವಾಗುತ್ತದೆ. ಹೀಗಾಗಿ ಇನ್ಮುಂದೆ ಅಂಡರ್ಪಾಸ್ನಲ್ಲಿ ವಾಹನ ನಿಲ್ಲಿಸದಂತೆ ಸೂಚನೆ ನೀಡಲಾಗಿದೆ.
ಕೆಳಸೇತುವೆಯಲ್ಲಿ ಗಾಡಿ ನಿಲ್ಲಿಸಿ ಟ್ರಾಫಿಕ್ಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ಅವರು ಹೇಳಿದ್ದಾರೆ.