News Karnataka Kannada
Tuesday, April 30 2024
ಬೆಂಗಳೂರು ನಗರ

ಆಲೂರು: ಒಂದಷ್ಟು ಬಿಡಿ ಕವಿತೆಗಳನ್ನ ಬರೆದ ಕ್ಷಣವೇ ಯಾರೂ ಕವಿಗಳೆನಿಸಲು ಸಾಧ್ಯವಿಲ್ಲ

Aluru
Photo Credit : News Kannada

ಆಲೂರು : ಒಂದಷ್ಟು ಬಿಡಿ ಕವಿತೆಗಳನ್ನ ಬರೆದ ಕ್ಷಣವೇ ಯಾರೂ ಕವಿಗಳೇನಿಸಲು ಸಾಧ್ಯವಿಲ್ಲ. ಹಾಗಾಗಿ ಓದಬೇಕು ಜೊತೆಯಲ್ಲಿ ಬೇರೆಯವರು ಕವಿತೆಗಳನ್ನ ವಾಚನ ಮಾಡುವಾಗ ಕೇಳಿಸಿಕೊಳ್ಳಬೇಕೆಂದು ಸಾಹಿತಿ ಡಿ. ಸುಜಲಾದೇವಿ ಅಭಿಪ್ರಾಯಪಟ್ಟರು.

ಅವರು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.) ಬೆಂಗಳೂರು, ಹಾಸನ ಜಿಲ್ಲೆ ಆಲೂರು ತಾಲ್ಲೂಕು ಘಟಕ ಪಟ್ಟಣದ ಡಾ. ಬಿ. ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಹಿರಿಯ ಸಾಹಿತಿ ಎಂ. ಶಿವಣ್ಣ ಆಲೂರು ಅವರ ಸರ್ವಾಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಆಲೂರು ತಾಲ್ಲೂಕು ದ್ವಿತೀಯ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿ ಮುಖ್ಯವಾಗಿ ಕವಿಗಳಾದವರು ಶಬ್ದಗಳನ್ನ ದುಡಿಸಿಕೊಳ್ಳಬೇಕು ಕನ್ನಡ ಸಾಹಿತ್ಯದಲ್ಲಿ ಅಥವಾ ಕನ್ನಡ ಭಾಷೆಯಲ್ಲಿ ಸಾಕಷ್ಟು ಶಬ್ದ ಭಂಡಾರವೇ ಅಡಗಿದೆ ಅವುಗಳನ್ನ ದುಡಿಸಿಕೊಳ್ಳಬೇಕೆಂದಿದ್ದಲ್ಲಿ ಹಿಂದಿನವರು ಬರೆದ ಹಾಗೂ ಈಗಿನವರು ಬರೆಯುತ್ತಿರುವ ಸಾಹಿತ್ಯವನ್ನು ಓದುವ ಅಭಿರುಚಿಯನ್ನ ಬಳಸಿಕೊಳ್ಳಬೇಕು. ಕವಿತೆಗಳನ್ನು ಓದುವಾಗ ಉಚ್ಚಾರಣೆಗಳ ಕಡೆಗೆ ಗಮನವನ್ನು ಹರಿಸಬೇಕು ಎಂದರು.

ಕವಿತಾ ವಾಚನವನ್ನು ಮಾಡುವಾಗ ತಮ್ಮ ಹೆಸರು ಹಾಗೂ ಕವಿತೆಯ ಶೀರ್ಷಿಕೆಯನ್ನು ಅಷ್ಟೇ ಹೇಳಿ ಕವಿತೆಯನ್ನು ವಾಚಿಸಬೇಕು ಭಾಷಣ ಮಾಡುತ್ತ ನಿಲ್ಲಬಾರದು. ಕೊಟ್ಟ ಜವಾಬ್ದಾರಿಯನ್ನು ಅಷ್ಟೇ ನಿರ್ದಿಷ್ಟವಾಗಿ ನಿಭಾಯಿಸಬೇಕು. ಗದ್ಯ ಸಾಹಿತ್ಯಕ್ಕಿಂತಲೂ ಪದ್ಯ ಅತ್ಯಂತ ಪರಿಣಾಮಕಾರಿಯಾದದು. ಒಂದು ಇಡೀ ಕಾದಂಬರಿ ಅಥವಾ ದೊಡ್ಡ ಪುಸ್ತಕ ಹೇಳುವ ಸಮಗ್ರ ವಿಚಾರವನ್ನು ಕೇವಲ ೧೫ ರಿಂದ ೨೦ ಸಾಲುಗಳು ಉಳ್ಳ ಕವಿತೆ ಹೇಳಬಲ್ಲದು. ಜಾನಪದೀಯರ ಕಾಲದಿಂದ ಕೂಡ ಗದ್ಯಕ್ಕಿಂತಲೂ ಹೆಚ್ಚಾಗಿ ಪದ್ಯವೇ ರಚಿತವಾಗಿರುವುದು. ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯದ ಹೋರಾಟದ ಸಂದರ್ಭದಲ್ಲಿ ಕೂಡ ಜನರನ್ನ ಸಂಘಟನೆ ಮಾಡಲು ಅತ್ಯಂತ ಪರಿಣಾಮಕಾರಿಯಾಗಿ ಬಳಕೆಯಾದದ್ದು ಕವಿತೆಗಳು ಅಥವಾ ಪದ್ಯವೇ. ರಾಗ ತಾಳ ಭಾವಗಳನ್ನ ಒಳಗೊಂಡ ಪದ್ಯಗಳು ಅತ್ಯಂತ ಪರಿಣಾಮಕಾರಿಯಾಗಿ ಜನರನ್ನ ಮುಟ್ಟ ಬಲ್ಲವು ಎಂದರು.

ವೇದಿಕೆಯಲ್ಲಿ ಕವಿ ಎಚ್.ಎಸ್. ಬಸವರಾಜ್ ಆಶಯ ನುಡಿಗಳನ್ನಾಡುತ್ತಾ ಕನ್ನಡ ಸಾಹಿತ್ಯ ಪರಂಪರೆ ವಿಶ್ವ ಧರ್ಮವನ್ನು ಬೀರಬೇಕು, ಸರ್ವ ಜನಾಂಗದ ಶಾಂತಿಯ ತೋಟವಾಗಬೇಕು, ನಾನೆಂಬ ಅಹಂಕಾರವಳಿದು ಸರಳತೆ, ಸನ್ನಡತೆ ಮೂಡಬೇಕು. ನಿತ್ಯ ಕಲಿಯುವ ಹಂಬಲದೊಂದಿಗೆ ಕಾವ್ಯಕೃಷಿ ಮಾಡಬೇಕು. ಕಾವ್ಯ ತಳ ಸಮುದಾಯದ ತಲ್ಲಣಗಳಿಗೆ ಧ್ವನಿಯಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಕಲೇಶಪುರ ತಾಲ್ಲೂಕು ಅಧ್ಯಕ್ಷ ಅರುಣ್ ಗೌಡ, ಬೇಲೂರು ತಾಲ್ಲೂಕು ಅಧ್ಯಕ್ಷ ಸೋಂಪುರ ಪ್ರಕಾಶ್, ಅರಸೀಕೆರೆ ತಾಲ್ಲೂಕು ಗೌರವಾಧ್ಯಕ್ಷೆ ಮಮತರಾಣಿ, ಯುವ ಸಾಹಿತಿ ಮಾಯಣ್ಣ ಸ್ವಾಮಿ, ರಾಜ್ಯ ಕೋಶಾಧ್ಯಕ್ಷೆ ಡಾ. ಹಸೀನಾ ಎಚ್.ಕೆ. ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಮ್ಮೇಳನದಲ್ಲಿ ನಡೆದ ಕವಿಗೋಷ್ಠಿಯಲ್ಲಿ ಚಂದ್ರಕಲಾ ಆಲೂರು, ಧರ್ಮ ಕೆರಲೂರು, ಟಿ.ಕೆ. ನಾಗರಾಜ್, ಕೃಷ್ಣೇಗೌಡ ಮಣಿಪುರ, ಎಸ್. ಲಲಿತ, ಮಧು ಮಾಲತಿ ಬೇಲೂರು, ಅಶ್ವಿನಿ ಪಿ.ರಘು, ಮಾರುತಿ ಕೆ.ಬಿ.ದೊಡ್ಡಕೋಡಿಹಳ್ಳಿ, ಧರ್ಮಾಬಾಯಿ ಅರಸೀಕೆರೆ, ವಾಣಿ ಮಹೇಶ್, ಗಿರಿಜಾ ನಿರ್ವಾಣಿ, ಭಾರತಿ ಎಚ್.ಎನ್, ಪದ್ಮಾವತಿ ವೆಂಕಟೇಶ್, ಎಚ್.ಬಿ.ಚೂಡಾಮಣಿ, ಸರೋಜ ಟಿ.ಎಂ, ಸಂಧ್ಯಾ ಚಿನ್ನೇನಹಳ್ಳಿ, ಪಾರ್ವತಿ ಜಿನಗರವಳ್ಳಿ, ಬಿ.ಟಿ. ಚನ್ನಬಸವೇಶ್ವರ ವಿದ್ಯಾಶ್ರೀ ಹೊಳೆನರಸೀಪುರ, ಕವಿತಾ ಹೊಳೆನರಸೀಪುರ ಸೇರಿದಂತೆ ಹಲವರು ಕಾವ್ಯ ವಾಚಿಸಿದರು.

ಈ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್, ಸಮ್ಮೇಳನದ ಸರ್ವಾಧ್ಯಕ್ಷ ಎಂ. ಶಿವಣ್ಣ, ತಾಲ್ಲೂಕು ಗೌರವಾಧ್ಯಕ್ಷ ಫಾ. ಹೈ. ಗುಲಾಂ ಸತ್ತಾರ್, ಕೇಂದ್ರ ಸಮಿತಿಯ ಉಪಾಧ್ಯಕ್ಷ ನಾಗರಾಜ್ ದೊಡ್ಡಮನಿ, ಕೇಂದ್ರ ಸಮಿತಿಯ ಕೋಶಾಧ್ಯಕ್ಷ ಎಚ್. ಎಸ್. ಬಸವರಾಜ್, ಜಿಲ್ಲಾಧ್ಯಕ್ಷೆ ಗಂಗಮ್ಮ ನಂಜುಂಡಪ್ಪ, ಉಪಾಧ್ಯಕ್ಷೆ ಹೇಮರಾಗ, ಕ.ಸಾ.ಪ. ಮಾಜಿ ಅಧ್ಯಕ್ಷ ಎಸ್.ಎಸ್.ಶಿವಮೂರ್ತಿ, ಮಾಜಿ ಕಾರ್ಯದರ್ಶಿ ಎಂ. ಬಾಲಕೃಷ್ಣ, ತಾಲ್ಲೂಕು ಸಂಚಾಲಕ ಮಣಿಪುರ ಕೃಷ್ಣೇಗೌಡ, ತಾಲ್ಲೂಕು ಉಪಾಧ್ಯಕ್ಷ ಟಿ.ಕೆ.ನಾಗರಾಜ್, ತಾಲ್ಲೂಕು ಸಂಘಟನಾ ಕಾರ್ಯದರ್ಶಿ ಡಿ.ಸಿ. ಬಸವರಾಜ್, ತಾಲ್ಲೂಕು ಪತ್ರಿಕಾ ಕಾರ್ಯದರ್ಶಿ ಪ್ರತಾಪ್ ಎಚ್.ಆರ್, ಸಮಾಜ ಸೇವಕ ಪುಟ್ಟಣ್ಣ, ಕ.ಸಾ.ಪ. ಅಧ್ಯಕ್ಷ ಎ.ಎಸ್. ಗೋಪಾಲಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಜಿಲ್ಲಾ ಮಹಿಳಾ ಕಾರ್ಯದರ್ಶಿ ಅಶ್ವಿನಿ ಪಿ.ರಘು ನಿರೂಪಿಸಿದರು, ತಾಲ್ಲೂಕು ಸಂಘಟನಾ ಕಾರ್ಯದರ್ಶಿ ಡಿ.ಸಿ.ಬಸವರಾಜ್ ಸ್ವಾಗತಿಸಿದರು, ತಾಲ್ಲೂಕು ಪತ್ರಿಕಾ ಕಾರ್ಯದರ್ಶಿ ಪ್ರತಾಪ್ ಎಚ್.ಆರ್. ವಂದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು