News Karnataka Kannada
Sunday, April 28 2024
ಬೆಂಗಳೂರು ನಗರ

ಬೆಂಗಳೂರು: ಖಾಸಗಿ ಕಾಲೇಜುಗಳಲ್ಲಿ ಎಂಬಿಎಸ್‌ಎಸ್ ಕೋರ್ಸ್ ಶುಲ್ಕ ಶೇ.10ರಷ್ಟು ಏರಿಕೆ

Medical College
Photo Credit : By Author

ಬೆಂಗಳೂರು: ವೈದ್ಯಕೀಯ ಸೀಟು ಹಂಚಿಕೆ ಪ್ರಕ್ರಿಯೆಗೂ ಮುನ್ನವೇ ರಾಜ್ಯ ಸರ್ಕಾರ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್ ಕೋರ್ಸ್ ಶುಲ್ಕವನ್ನು ಶೇ.10ರಷ್ಟು ಹೆಚ್ಚಿಸಿದೆ. ಈ ಸಂಬಂಧ ಸರಕಾರ ಹಾಗೂ ಖಾಸಗಿ ಕಾಲೇಜುಗಳ ಪ್ರತಿನಿಧಿಗಳ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಹೊಸ ಶುಲ್ಕ ರಚನೆಯ ಪ್ರಕಾರ, ಖಾಸಗಿ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾದ ಸೀಟುಗಳಿಗೆ ವಿದ್ಯಾರ್ಥಿಯು ವರ್ಷಕ್ಕೆ ರೂ.1,41,360 ಪಾವತಿಸಬೇಕಾಗುತ್ತದೆ. ಖಾಸಗಿ ಕಾಲೇಜುಗಳಲ್ಲಿನ ಸಿಒಎಂಇಡಿಕೆ ಕೋಟಾದ ಸೀಟುಗಳಿಗೆ ವರ್ಷಕ್ಕೆ ರೂ.9,81,956 ಶುಲ್ಕವಾಗಿರುತ್ತದೆ.

ಮೂಲಗಳ ಪ್ರಕಾರ, ಖಾಸಗಿ ಕಾಲೇಜುಗಳು 15% ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದವು. ಚರ್ಚೆಯ ನಂತರ 10% ಹೆಚ್ಚಳವನ್ನು ಅನುಮತಿಸಲಾಗಿದೆ. ಆದರೆ ಸರ್ಕಾರಿ ವೈದ್ಯಕೀಯ ಕಾಲೇಜು ಸೀಟುಗಳಿಗೆ ಶುಲ್ಕ ಪರಿಷ್ಕರಣೆ ಮಾಡಿಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12429
Bhavana S.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು