ಬೆಂಗಳೂರು: ಜಾಲತಾಣದಲ್ಲಿ “KILL Dk brothers” ಎಂದು ಪೋಸ್ಟ್ ಹಾಕಿದ್ದ ರಂಜಿತ್.ಆರ್ ಎಂ ಎಂಬುವರ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿ ರಂಜಿತ್ ಆರ್ ಎಂ ಎಂಬಾತ ಸಾಮಾಜಿಕ ಜಾಲತಾಣದಲ್ಲಿ ತನ್ನನ್ನು ತಾನು ಸೈಬರ್ ಕ್ರೈಂ ಡಿಟೆಕ್ಟೀವ್ at ಬೆಂಗಳೂರು ಸಿಟಿ ಪೊಲೀಸ್ ಎಂದು ಡೀಟೇಲ್ಸ್ ಹಾಕಿಕೊಂಡಿದ್ದನು.
ಅಲ್ಲದೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ ಸುರೇಶ್ ವಿರುದ್ಧ ಫೇಸ್ ಬುಕ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದ. ಆರೋಪಿ ಮುಸ್ಲಿಂ ಸಮುದಾಯದ ವಿರುದ್ಧ ಹಲವು ಕಮೆಂಟ್ ಪೋಸ್ಟ್ ಮಾಡಿದ್ದ ಎಂಬ ವಿಚಾರ ತಿಳಿದುಬಂದಿದೆ.
ರಂಜಿತ್ ತಾನು ಪೊಲೀಸ್ ಇಲಾಖೆಯಲ್ಲಿ ಸೈಬರ್ ಡಿಟೆಕ್ಟಿವ್ ಆಗಿ ಕೆಲಸ ಮಾಡುತ್ತಿರುವುದಾಗಿ ಫೇಸ್ ಬುಕ್ ಪ್ರೊಫೈಲ್ನಲ್ಲಿ ಹೇಳಿಕೊಂಡಿದ್ದ ಅದರೆ ಬಂಧನ ಬಳಿಕ ಆತ ಖಾಸಗಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ತಿಳಿದುಬಂದಿತ್ತು.