News Karnataka Kannada
Friday, May 03 2024
ಬೆಂಗಳೂರು ನಗರ

ಜೆಡಿಎಸ್‌ ಮೂರನೇ ಪಟ್ಟಿ ಬಿಡುಗಡೆ: ಪಕ್ಷಸೇರಿದ ದಿನವೇ ಆಯನೂರಿಗೆ ಟಿಕೆಟ್‌

JD(S) releases third list: On the day of joining the party, a ticket for Ayanur, N. R .
Photo Credit : News Kannada

ಬೆಂಗಳೂರು: ಜೆಡಿಎಸ್‌ ವಿಧಾನಸಭೆ ಚುನಾವಣೆಗೆ ಸಂಬಂಧಿಸಿ ಮೂರನೇ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದೆ. ಸದ್ಯ ಬಿಡುಗಡೆಯಾಗಿರುವ ಪಟ್ಟಿಯಲ್ಲಿ 59 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಮಾಡಿದೆ. ​​ಬಿಜೆಪಿ ಮತ್ತು ಕಾಂಗ್ರೆಸ್​ನಿಂದ ಪಕ್ಷಾಂತರ ಮಾಡಿದ ಹಲವು ನಾಯಕರು ಪ್ರಾದೇಶಿಕ ಪಕ್ಷದಿಂದ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಳ್ಳಾರಿ ನಗರ, ಮಂಡ್ಯ, ವರುಣಾ, ರಾಜಾಜಿನಗರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಜೆಡಿಎಸ್ ತನ್ನ 12 ಅಭ್ಯರ್ಥಿಗಳನ್ನು ಬದಲಾವಣೆ ಮಾಡಿದೆ.

ಆಯನೂರು ಮಂಜುನಾಥ್​ಗೆ ಶಿವಮೊಗ್ಗ ಟಿಕೆಟ್: ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಇಂದು ಜೆಡಿಎಸ್ ಸೇರ್ಪಡೆ ಆಗಿರುವ ಶಿವಮೊಗ್ಗ ಬಿಜೆಪಿ ಎಂಎಲ್‌ಸಿ ಆಯನೂರು ಮಂಜುನಾಥ್​ ಅವರಿಗೆ ಶಿವಮೊಗ್ಗ ನಗರ ಕ್ಷೇತ್ರದಿಂದ ಟಿಕೆಟ್​ ನೀಡಿದ್ದಾರೆ. ಕಳೆದ ವಾರ ಜೆಡಿಎಸ್ ಸೇರ್ಪಡೆ ಆಗಿರುವ ಬಿ.ಎಸ್.ಯಡಿಯೂರಪ್ಪ ಅವರ ಮೊಮ್ಮಗ ಎನ್.ಆರ್.ಸಂತೋಷ್ ಅವರು ಅರಸೀಕೆರೆ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ಜೆಡಿಎಸ್‌ ಅಭ್ಯರ್ಥಿಗಳ ವಿವರ ಹೀಗಿದೆ
ನಿಪ್ಪಾಣಿ- ರಾಜು ಮಾರುತಿ ಪವಾರ್​
ಚಿಕ್ಕೋಡಿ ವಿಧಾನಸಭಾ ಕ್ಷೇತ್ರ-ಸದಾಶಿವ ವಾಳಕೆ
ಕಾಗವಾಡ ವಿಧಾನಸಭಾ ಕ್ಷೇತ್ರ- ಮಲ್ಲಪ್ಪ ಎಂ ಚುಂಗ
ಹುಕ್ಕೇರಿ ಕ್ಷೇತ್ರ- ಬಸವರಾಜಗೌಡ ಪಾಟೀಲ್​
ಅರಭಾವಿ ಕ್ಷೇತ್ರ- ಪ್ರಕಾಶ ಕಾಶ ಶೆಟ್ಟಿ
ಶಿವಮೊಗ್ಗ ನಗರ- ಆಯನೂರು ಮಂಜುನಾಥ್​
ಯಮಕನಮರಡಿ ಕ್ಷೇತ್ರ -ಮಾರುತಿ ಮಲ್ಲಪ್ಪ ಅಷ್ಟಗಿ
ಬೆಳಗಾವಿ ಉತ್ತರ ಕ್ಷೇತ್ರ- ಶಿವಾನಂದ ಮುಗಲಿಹಾಳ್​
ಬೆಳಗಾವಿ ದಕ್ಷಿಣ ಕ್ಷೇತ್ರ- ಶ್ರೀನಿವಾಸ್​ ತೋಳಲ್ಕರ್​
ಬೆಳಗಾವಿ ಗ್ರಾಮಾಂತರ ಕ್ಷೇತ್ರ- ಶಂಕರಗೌಡ ರುದ್ರಗೌಡ ಪಾಟೀಲ್
ರಾಮದುರ್ಗ ಕ್ಷೇತ್ರ- ಪ್ರಕಾಶ್​​ ಮುಧೋಳ
ಮುಧೋಳ ಕ್ಷೇತ್ರ-ಧರ್ಮರಾಜ್​ ವಿಠ್ಠಲ್ ದೊಡ್ಮನಿ
ತೇರದಾಳ ಕ್ಷೇತ್ರ-ಸುರೇಶ್ ಅರ್ಜುನ್ ಮಡಿವಾಳರ್​
ಜಮಖಂಡಿ ಕ್ಷೇತ್ರ-ಯಾಕೂಬ್ ಬಾಬಲಾಲ್​ ಕಪಡೇವಾಲ
ಬೀಳಗಿ ಕ್ಷೇತ್ರ-ರುಕ್ಕುದ್ದೀನ್ ಸೌದಗರ್​
ಬಾಗಲಕೋಟೆ ಕ್ಷೇತ್ರ-ದೇವರಾಜ ಪಾಟೀಲ್
ಹುನಗುಂದ ಕ್ಷೇತ್ರ-ಶಿವಪ್ಪ ಮಹದೇವಪ್ಪ ಬೋಲಿ
ವಿಜಯಪುರ ಕ್ಷೇತ್ರ-ಬಂಡೇನವಾಜ್​ ನಾಜರಿ
ಸುರಪುರ ಕ್ಷೇತ್ರ-ಶ್ರವಣಕುಮಾರ ನಾಯ್ಕ್​
ಕಲಬುರಗಿ ದಕ್ಷಿಣ ಕ್ಷೇತ್ರ-ಕೃಷ್ಣಾರೆಡ್ಡಿ
ಔರಾದ್ ಕ್ಷೇತ್ರ-ಜೈಸಿಂಗ್ ರಾಥೋಡ್​
ರಾಯಚೂರು ನಗರ ಕ್ಷೇತ್ರ-ಈ.ವಿನಯ್ ಕುಮಾರ್​
ಮಸ್ಕಿ ಕ್ಷೇತ್ರ-ರಾಘವೇಂದ್ರ ನಾಯಕ
ಕನಕಗಿರಿ ಕ್ಷೇತ್ರ-ರಾಜಗೋಪಾಲ
ಯಲಬುರ್ಗಾ ಕ್ಷೇತ್ರ-ಮಲ್ಲನಗೌಡ ಸಿದ್ದಪ್ಪ ಕೋಣನಗೌಡ
ಕೊಪ್ಪಳ ಕ್ಷೇತ್ರ-ಚಂದ್ರಶೇಖರ
ಶಿರಹಟ್ಟಿ ಕ್ಷೇತ್ರ-ಹನುಮಂತಪ್ಪ ನಾಯಕ
ಗದಗ ಕ್ಷೇತ್ರ-ಯಂಕನಗೌಡ ಗೋವಿಂದಗೌಡರ
ರೋಣ ಕ್ಷೇತ್ರ-ಮುಗದಮ್​ ಸಾಬ್ ಮುಧೋಳ
ಚಿತ್ರದುರ್ಗ ಕ್ಷೇತ್ರ-ರಘು ಆಚಾರ್​
ರಾಜರಾಜೇಶ್ವರಿನಗರ ಕ್ಷೇತ್ರ-ಡಾ.ನಾರಾಯಣಸ್ವಾಮಿ
ಮಲ್ಲೇಶ್ವರಂ ಕ್ಷೇತ್ರ-ಉತ್ಕರ್ಷ್
ಚಿಕ್ಕಪೇಟೆ ಕ್ಷೇತ್ರ-ಇಮ್ರಾನ್ ಪಾಷಾ
ಚಾಮರಾಜಪೇಟೆ ಕ್ಷೇತ್ರ-ಗೋವಿಂದರಾಜ್
ಪದ್ಮನಾಭನಗರ ಕ್ಷೇತ್ರ-ಬಿ.ಮಂಜುನಾಥ
ಬಿಟಿಎಂ ಲೇಔಟ್​ ಕ್ಷೇತ್ರ-ವೆಂಕಟೇಶ್​
ಜಯನಗರ ಕ್ಷೇತ್ರ-ಕಾಳೇಗೌಡ
ಬೊಮ್ಮನಹಳ್ಳಿ ಕ್ಷೇತ್ರ-ನಾರಾಯಣರಾಜು
ಅರಸೀಕೆರೆ ಕ್ಷೇತ್ರ-ಎನ್.ಆರ್.ಸಂತೋಷ್​
ಮೂಡಬಿದ್ರೆ ಕ್ಷೇತ್ರ-ಅಮರಶ್ರೀ
ಸುಳ್ಯ ಕ್ಷೇತ್ರ-ಹೆಚ್.ಎನ್.ವೆಂಕಟೇಶ್
ವಿರಾಜಪೇಟೆ ಕ್ಷೇತ್ರ-ಮನ್ಸೂರ್ ಅಲಿ
ಚಾಮರಾಜ ಕ್ಷೇತ್ರ-ಹೆಚ್.ಕೆ.ರಮೇಶ್
ನರಸಿಂಹರಾಜ ಕ್ಷೇತ್ರ-ಅಬ್ದುಲ್ ಖಾದರ್ ಶಾಹಿದ್​
ಚಾಮರಾಜನಗರ ಕ್ಷೇತ್ರ-ಮಲ್ಲಿಕಾರ್ಜುನ ಸ್ವಾಮಿ
ಕೂಡ್ಲಿಗಿ ಕ್ಷೇತ್ರ-ಕೋಡಿಹಳ್ಳಿ ಭೀಮಪ್ಪ
12 ಕ್ಷೇತ್ರಗಳಲ್ಲಿ ಜೆಡಿಎಸ್​ ಅಭ್ಯರ್ಥಿಗಳ ಬದಲಾವಣೆ
ಬಸನಬಾಗೇವಾಡಿ ಕ್ಷೇತ್ರ-ಸೋಮನಗೌಡ ಪಾಟೀಲ್
ಬಸವಕಲ್ಯಾಣ ಕ್ಷೇತ್ರ-ಸಂಜಯ್ ವಾಡೇಕರ್​
ಬೀದರ್ ಕ್ಷೇತ್ರ-ಸೂರ್ಯಕಾಂತ್ ನಾಗಮಾರಪಳ್ಳಿ
ಕುಷ್ಟಗಿ ಕ್ಷೇತ್ರ-ಶರಣಪ್ಪ ಕುಂಬಾರ
ಹಗರಿಬೊಮ್ಮನಹಳ್ಳಿ ಕ್ಷೇತ್ರ-ನೇಮಿರಾಜ ನಾಯ್ಕ್​
ಬಳ್ಳಾರಿ ನಗರ ಕ್ಷೇತ್ರ-ಅನಿಲ್ ಲಾಡ್​
ಚನ್ನಗಿರಿ ಕ್ಷೇತ್ರ-ತೇಜಸ್ವಿ ಪಟೇಲ್​
ಮೂಡಿಗೆರೆ ಕ್ಷೇತ್ರ-ಎಂ.ಪಿ.ಕುಮಾರಸ್ವಾಮಿ
ರಾಜಾಜಿನಗರ ಕ್ಷೇತ್ರ-ಡಾ.ಅಂಜನಪ್ಪ
ಬೆಂಗಳೂರು ದಕ್ಷಿಣ ಕ್ಷೇತ್ರ-ರಾಜಗೋಪಾಲರೆಡ್ಡಿ
ಮಂಡ್ಯ ಕ್ಷೇತ್ರ-ಬಿ.ಆರ್.ರಾಮಚಂದ್ರ
ವರುಣ ಕ್ಷೇತ್ರ-ಭಾರತಿ ಶಂಕರ್​.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು