News Karnataka Kannada
Wednesday, May 08 2024
ಬೆಂಗಳೂರು ನಗರ

ಬೆಂಗಳೂರು: 2047ರ ಹೊತ್ತಿಗೆ ಭಾರತ 30 ಟ್ರಿಲಿಯನ್‌ ಡಾಲರ್ ಆರ್ಥಿಕತೆ- ಗೋಯಲ್‌

India on path to become $30 trn economy, developed nation by 2047: Goyal
Photo Credit : Twitter

ಬೆಂಗಳೂರು: ದೇಶದ ತಂತ್ರಜ್ಞಾನದ ರಾಜಧಾನಿಯಾಗಿರುವ ಬೆಂಗಳೂರು ಸಹಭಾಗಿತ್ವ, ಸಹಕಾರ ಮತ್ತು ಸ್ಪರ್ಧೆಗಳಿಂದ ಜಾಗತಿಕ ಮಟ್ಟದಲ್ಲಿ ವಿರಾಜಮಾನವಾಗಿದೆ. ಭಾರತವು ಮುಂದಿನ 25 ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದ್ದು, 30 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್‌ ಗೋಯಲ್‌ ಹೇಳಿದ್ದಾರೆ.

ಬೆಂಗಳೂರು ತಂತ್ರಜ್ಞಾನ ಸಮಾವೇಶದಲ್ಲಿ ಶುಕ್ರವಾರ ಸಮಾರೋಪದಲ್ಲಿ ಮಾತನಾಡಿದ ಅವರು, “ಕೇಂದ್ರ ಸರಕಾರವು ದೊಡ್ಡ ಉದ್ಯಮಿಗಳಂತೆಯೇ ಸಣ್ಣಪುಟ್ಟ ವ್ಯಾಪಾರಿಗಳಿಗೂ ಸಮಾನ ಅವಕಾಶ ಕಲ್ಪಿಸುವ ಉದ್ದೇಶದಿಂದ ಓಪನ್‌ ಡೇಟಾ ಇ-ಕಾಮರ್ಸ್ ವ್ಯವಸ್ಥೆಗೆ ಚಾಲನೆ ನೀಡಿದ್ದು, ಇದೂ ಸಹ ಬೆಂಗಳೂರಿನಿಂದಲೇ ಆರಂಭವಾಗಬೇಕು” ಎಂದು ಆಶಿಸಿದರು.

ಬೆಂಗಳೂರಿನಲ್ಲಿ ವಾರದ ಹಿಂದಷ್ಟೆ ನಾಡಪ್ರಭು ಕೆಂಪೇಗೌಡರ ‘ಪ್ರಗತಿಯ ಪ್ರತಿಮೆ’ ಲೋಕಾರ್ಪಣೆಗೊಂಡಿದೆ. ಇದಕ್ಕೆ ತಕ್ಕಂತೆ ಬೆಂಗಳೂರು ನಾಗಾಲೋಟದಿಂದ ಮುನ್ನಡೆಯುತ್ತಿದೆ. ಎರಡು ದಶಕಗಳ ನಂತರ ಇದೇ ಮೊದಲ ಬಾರಿಗೆ ಭಾರತಕ್ಕೆ ಜಿ-20 ಗುಂಪಿನ ನೇತೃತ್ವ ಸಿಕ್ಕಿದೆ. ಡಿ.1ರಂದು ಪ್ರಧಾನಿ ನರೇಂದ್ರ ಮೋದಿ ಇದರಲ್ಲಿ ಜಾಗತಿಕ ಸಮುದಾಯವನ್ನು ಉದ್ದೇಶಿಸಿ ಮಾತನಾಡಲಿದ್ದು, ಇದು ಭಾರತದ ಶಕ್ತಿ ಪ್ರದರ್ಶನಕ್ಕೆ ಸುವರ್ಣಾವಕಾಶವಾಗಿದೆ ಎಂದು ಅವರು ಬಣ್ಣಿಸಿದರು.

ಕೋವಿಡ್‌ ಪಿಡುಗಿಗೆ ಸಿಲುಕಿ ಮುಂದುವರಿದ ದೇಶಗಳು ಕೂಡ ಹಣದುಬ್ಬರದಿಂದ ನಲುಗುತ್ತಿವೆ. ಆದರೆ ಭಾರತದಲ್ಲಿ ಕೇವಲ ಶೇಕಡ 6.8ರಷ್ಟು ಹಣದುಬ್ಬರ ಮಾತ್ರವೇ ಇದ್ದು, ಸಂಪೂರ್ಣ ನಿಯಂತ್ರಣದಲ್ಲಿದೆ. ಕಳೆದ ಎಂಟು ವರ್ಷಗಳಲ್ಲಿ ದೇಶದ ಆರ್ಥಿಕ ಸಂರಚನೆಯಲ್ಲಿ ಮಾಡಿರುವ ಮೂಲಭೂತ ಬದಲಾವಣೆಗಳೇ ಇದಕ್ಕೆ ಕಾರಣ ಎಂದು ಗೋಯಲ್‌ ಪ್ರತಿಪಾದಿಸಿದರು.

ಬೆಂಗಳೂರು ದೇಶದ ಆರ್ಥಿಕ ರಾಜಧಾನಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, “ಬೆಂಗಳೂರು ನಗರವು ಇನ್ನು 5-10 ವರ್ಷಗಳಲ್ಲಿ ದೇಶದ ಆರ್ಥಿಕ ರಾಜಧಾನಿಯಾಗಿ ಹೊರಹೊಮ್ಮಲಿದೆ. ಇಲ್ಲಿ ಪರಿಕಲ್ಪನೆ ಮತ್ತು ಅದರ ಸಾಕಾರಗಳ ನಡುವೆ ಯಾವುದೇ ಅಡೆತಡೆಗಳಿಲ್ಲ. ಬೆಂಗಳೂರು ಬಂಗಾರದ ಊರು. ಇಲ್ಲಿನ ಜನ ಬಂಗಾರದಂಥ ಪರಿಶುದ್ಧ ಹೃದಯವುಳ್ಳವರು” ಎಂದರು.

ತಂತ್ರಜ್ಞಾನ ಸಮಾವೇಶದಲ್ಲಿ ಚಿಂತನೆ ಮತ್ತು ತಂತ್ರಜ್ಞಾನ, ಕ್ರಿಯೆ ಮತ್ತು ಗುರಿ, ಯಶಸ್ಸು ಮತ್ತು ಸುಸ್ಥಿರತೆ, ಸಂಸ್ಕೃತಿ ಮತ್ತು ಕಾಸ್ಮೋಪಾಲಿಟನ್‌ಗಳು ಒಂದಕ್ಕೊಂದು ಸಂಧಿಸಿವೆ. ಇದಕ್ಕೆ ಇಲ್ಲಿರುವ ಪ್ರತಿಭೆಗಳು ಕಾರಣವಾಗಿದ್ದು, ಮುಂದೆಯೂ ನಂಬರ್ 1 ಸ್ಥಾನವನ್ನು ಕಾಪಾಡಿಕೊಂಡು ಹೋಗಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಐಟಿ-ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ನಿರ್ದೆಶಕಿ ಮೀನಾ ನಾಗರಾಜ್‌, ಸ್ಟಾರ್ಟಪ್‌ ವಿಷನ್‌ ಗ್ರೂಪ್‌ ಅಧ್ಯಕ್ಷ ಪ್ರಶಾಂತ್‌ ಪ್ರಕಾಶ್‌ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು