ಬೆಂಗಳೂರು: ನಗರದ ಜಿಆರ್ ಇಂಟರ್ನ್ಯಾಷನಲ್ ಶಾಲೆಯ ವಿದ್ಯಾರ್ಥಿ ಧ್ರುವ್ ಅಡ್ವಾಣಿ ನೀಟ್ ಯುಜಿಯಲ್ಲಿ ರಾಜ್ಯಕ್ಕೆ ಟಾಪರ್ ಆಗಿದ್ದಾರೆ. ಅವರು ದೇಶದ ಐದನೇ ಅಗ್ರ ಶ್ರೇಯಾಂಕಿತರಾಗಿದ್ದಾರೆ.
ಸಿಬಿಎಸ್ಇ 12ನೇ ತರಗತಿಯಲ್ಲಿ ಶೇ.99.4 ಅಂಕಗಳನ್ನು ಗಳಿಸಿದ್ದಾರೆ. ನವದೆಹಲಿಯ ಏಮ್ಸ್ ಗೆ ಸೇರುವುದು ಅವರ ಕನಸಾಗಿದೆ. ಇದೇ ವೇಳೆ ರಾಜ್ಯದಿಂದ ಪರೀಕ್ಷೆಗೆ ಹಾಜರಾದ 1.34 ಲಕ್ಷ ವಿದ್ಯಾರ್ಥಿಗಳ ಪೈಕಿ 75,248 ಮಂದಿ ಸೀಟು ಆಯ್ಕೆಗೆ ಅರ್ಹತೆ ಪಡೆದಿದ್ದಾರೆ.