News Karnataka Kannada
Friday, May 03 2024
ಬೆಂಗಳೂರು ನಗರ

ಪ್ರಧಾನಿ ಆಪ್ತನೆಂದು ಹೇಳಿಕೊಂಡು ಫೋಸ್‌ ಕೊಟ್ಟು ಕೋಟಿ ಕೋಟಿ ರೂ. ವಂಚಿಸಿದ ವಂಚಕ ಅಂದರ್‌

ವಂಚಕರು ವಿವಿಧ ವೇಷ ಧರಿಸಿ ಜನರನ್ನು ಮೂರ್ಖರನ್ನಾಗಿಸಿ ಮೋಸ ಮಾಡುತ್ತಾರೆ. ಅಂತಹುದೇ ಒಂದು ಸುದ್ದಿ ಇಲ್ಲಿದೆ. ಸಿಎಂ, ಪಿಎಂ, ಮಿನಿಸ್ಟರ್ ಆಪ್ತನಂತೆ ನಟಿಸಿ ಹಲವರಿಗೆ ವಂಚಿಸಿದ್ದ ವ್ಯಕ್ತಿಯನ್ನು ನಗರ ಪೊಲೀಸರು ಬಂಧಿಸಿದ್ದಾರೆ.
Photo Credit : News Kannada

ಬೆಂಗಳೂರು: ವಂಚಕರು ವಿವಿಧ ವೇಷ ಧರಿಸಿ ಜನರನ್ನು ಮೂರ್ಖರನ್ನಾಗಿಸಿ ಮೋಸ ಮಾಡುತ್ತಾರೆ. ಅಂತಹುದೇ ಒಂದು ಸುದ್ದಿ ಇಲ್ಲಿದೆ. ಸಿಎಂ, ಪಿಎಂ, ಮಿನಿಸ್ಟರ್ ಆಪ್ತನಂತೆ ನಟಿಸಿ ಹಲವರಿಗೆ ವಂಚಿಸಿದ್ದ ವ್ಯಕ್ತಿಯನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಸಂತೋಷ್ ಬಂಧಿತ ಆರೋಪಿ. ಇಂಜಿನಿಯರಿಂಗ್ ಪದವೀಧರನಾಗಿದ್ದ ಸಂತೋಷ್, ಹೂಡಿಕೆದಾರರನ್ನ ಪರಿಚಯ ಮಾಡಿಕೊಂಡು ಕೋಟಿ ಕೋಟಿ ಹಣ ಹೂಡಿಕೆ ಮಾಡಿಸಿ ಕಂಪನಿಯ ಹಣವನ್ನ ತನ್ನ ಅಕೌಂಟ್ ಗೆ ವರ್ಗಾಯಿಸಿಕೊಂಡು ವಂಚನೆ ಮಾಡುತ್ತಿದ್ದ. ಕುಂತಲ್ಲೇ ಹಣ ಮಾಡುತ್ತಿದ್ದ ಖತರ್ನಾಕ್ ಕಳ್ಳನನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಸಂತೋಷ್ ತನಗೆ ದೊಡ್ಡ ದೊಡ್ಡವರ ಪರಿಚಯವಿದೆ ಎಂದು ನಂಬಿಸಿ ಹಲವು ಹೂಡಿಕೆದಾರರೊಂದಿಗೆ ಸ್ನೇಹ ಬೆಳೆಸಿದ್ದನು. ನನಗೆ ರಾಜ್ಯ ಹಾಗೂ ಕೇಂದ್ರ ಸಚಿವರು ಗೊತ್ತು ಎಂದು ಬಿಸಿನೆಸ್ ಮ್ಯಾನ್​ಗಳಿಗೆ ನಂಬಿಸುತ್ತಿದ್ದ. ಬಳಿಕ ಪಿಎಂ, ಸಿಎಂ ಕಛೇರಿಯಿಂದ ಉದ್ಯಮಿಗಳಿಗೆ ಫೇಕ್ ಕಾಲ್ ಮಾಡ್ತಿದ್ದ. ಈತನೇ ಕಾಲ್ ಮಾಡಿ ಪಿಎಂ ಕಛೇರಿಯಿಂದ ಮಾತನಾಡುತ್ತಿದ್ದೇವೆ ಎಂದು ನಂಬಿಸುತ್ತಿದ್ದ. ಇದನ್ನ ನಂಬಿ ಸಂತೋಷ್ ಹೇಳಿದಂತೆ ಉದ್ಯಮಿಗಳು ಕೇಳುತ್ತಿದ್ದರು.

ಆತನ ಜೊತೆಗೂಡಿ ಕೋಟಿ ಕೋಟಿ ಹಣ ಹೂಡಿಕೆ ಮಾಡುತ್ತಿದ್ದರು. ಹಣ ಹೂಡಿಕೆ ಮಾಡುತ್ತಿದ್ದಂತೆ ಕಂಪನಿಯ ಹಣವನ್ನ ತನ್ನ ಅಕೌಂಟ್ ಗೆ ವರ್ಗಾಯಿಸಿಕೊಂಡು ಆರೋಪಿ ಸಂತೋಷ್ ವಂಚನೆ ಮಾಡುತ್ತಿದ್ದ. ಇಷ್ಟೇ ಅಲ್ಲದೆ ಮಠ, ಪ್ರಸಿದ್ಧ ದೇವಸ್ಥಾಗಳಲ್ಲೂ ಇದೇ ರೀತಿ ಹೇಳಿಕೊಂಡು ವಂಚನೆ ಮಾಡಿದ್ದಾನೆ. ಸುಳ್ಳನ್ನೇ ಬಂಡವಾಳ ಮಾಡಿಕೊಂಡು ವೇದಿಕೆಗಳಲ್ಲಿ ಸನ್ಮಾನ ಮಾಡಿಸಿಕೊಂಡು ಕೋಟ್ಯಾಧಿಪತಿಯಾಗಿದ್ದ ಸಂತೋಷ್ ಸದ್ಯ ಅರೆಸ್ಟ್ ಆಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು