News Karnataka Kannada
Sunday, May 12 2024
ಬೆಂಗಳೂರು ನಗರ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆ

1,946 people tested positive for coronavirus in the last 24 hours in the country.
Photo Credit :

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಏರಿಕೆಯಾಗುತ್ತಿರುವುದು ಪ್ರತಿದಿನ ಬರುತ್ತಿರುವ ಕೊರೊನಾ ಪ್ರಕರಣಗಳಿಂದ ಗೊತ್ತಾಗುತ್ತಿದೆ. ಸದ್ಯ ಕರ್ನಾಟಕದಲ್ಲಿ ಬುಧವಾರ 1,255 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.

ರಾಜ್ಯದಲ್ಲಿ ಯಾದಗಿರಿ, ಗದಗ ಮತ್ತು ಬೀದರ್ ನಲ್ಲಿ ಶೂನ್ಯ ಪ್ರಕರಣಗಳಿದ್ದು, ಉಳಿದಂತೆ ಎಲ್ಲ ಜಿಲ್ಲೆಗಳಲ್ಲಿಯೂ ಪ್ರಕರಣಗಳು ಕಾಣಿಸಿಕೊಂಡಿವೆ.

ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 40,44,819 ಕ್ಕೆ ಏರಿಕೆ ಕಂಡಿದ್ದು ಇದುವರೆಗೆ ಗುಣಮುಖರಾಗಿ 39,94,823 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಗುರುವಾರ 1,255 ಪ್ರಕರಣ ಪತ್ತೆಯಾಗಿದ್ದರೆ, 2,186 ಮಂದಿ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಕೊರೊನಾ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 9,775ನಷ್ಟಿದ್ದು, ಚಿಕಿತ್ಸೆ ಫಲಿಸದೇ ಗುರುವಾರ ಮೂವರು ಸಾವನ್ನಪ್ಪಿದ್ದಾರೆ. ಇನ್ನು ರಾಜ್ಯದಲ್ಲಿ ಆರಂಭದಿಂದ ಇಲ್ಲಿವರೆಗೆ 40,179 ಮಂದಿ ಮೃತಪಟ್ಟಿದ್ದಾರೆ.

ರಾಜ್ಯಾದ್ಯಂತ ಜಿಲ್ಲೆಗಳಲ್ಲಿ ಪತ್ತೆಯಾಗಿರುವ ಪ್ರಕರಣವನ್ನು ನೋಡಿದ್ದೇ ಆದರೆ ಬಾಗಲಕೋಟೆ 06, ಬಳ್ಳಾರಿ 20, ಬೆಳಗಾವಿ 11, ಬೆಂಗಳೂರು ಗ್ರಾಮಾಂತರ 18, ಬೆಂಗಳೂರು ನಗರ 747, ಚಾಮರಾಜನಗರ 07, ಚಿಕ್ಕಬಳ್ಳಾಪುರ 09, ಚಿಕ್ಕಮಗಳೂರು 16, ಚಿತ್ರದುರ್ಗ 01, ದಕ್ಷಿಣಕನ್ನಡ 13, ದಾವಣಗೆರೆ 09, ಧಾರವಾಡ 19, ಹಾಸನ 45, ಹಾವೇರಿ 07, ಕಲಬುರಗಿ 17, ಕೊಡಗು 13, ಕೋಲಾರ 29, ಕೊಪ್ಪಳ 02, ಮಂಡ್ಯ 19, ಮೈಸೂರು 114, ರಾಯಚೂರು 21, ರಾಮನಗರ 49, ಶಿವಮೊಗ್ಗ 24, ತುಮಕೂರು 10, ಉಡುಪಿ 09, ಉತ್ತರಕನ್ನಡ 14, ವಿಜಯಪುರ 06 ಪ್ರಕರಣ ಪತ್ತೆಯಾಗಿದೆ.

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಜನ ಸಾಮಾನ್ಯರು ಎಚ್ಚರಿಕೆಯಿಂದ ಇರುವುದು ಒಳ್ಳೆಯದಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು