ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಳಿತವಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 1,837 ಮಂದಿಗೆ ಕೊರೊನಾ ಸೋಂಕು ದೃಢ ಪಟ್ಟಿದೆ. ಸೋಂಕಿನಿಂದ ಬಳಲುತ್ತಿದ್ದ ಮೂವರು ಮೃತಪಟ್ಟಿದ್ದಾರೆ.
ಕೊಪ್ಪಳ, ಬಳ್ಳಾರಿ, ಧಾರವಾಡ ಜಿಲ್ಲೆಯಲ್ಲಿ ತಲಾ ಒಂದರಂತೆ ಒಟ್ಟು 3 ಮಂದಿ ಮೃತಪಟ್ಟಿದ್ದಾರೆ. ಬೆಂಗಳೂರು ನಗರ 1108, ಮೈಸೂರು 141, ರಾಮನಗರ 70, ಧಾರವಾಡ 62, ಬಳ್ಳಾರಿ 47, ಬೆಳಗಾವಿ, ರಾಯಚೂರು 39, ಹಾಸನ 31, ಹಾವೇರಿ 25, ಚಾಮರಾಜನಗರ, ತುಮಕೂರು, ಬೆಂಗಳೂರು ಗ್ರಾಮಾಂತರ 24, ಶಿವಮೊಗ್ಗ 23, ಉತ್ತರ ಕನ್ನಡ 21, ದಕ್ಷಿಣ ಕನ್ನಡ 20, ಕೊಡಗು, ದಾವಣಗೆರೆ 17, ಚಿಕ್ಕಮಗಳೂರು, ಕಲಬುರಗಿ, ಕೋಲಾರ 16, ಬಾಗಲಕೋಟೆ 12, ಕೊಪ್ಪಳ, ಮಂಡ್ಯ 10, ಉಡುಪಿ ಮತ್ತು ಚಿಕ್ಕಬಳ್ಳಾಪುರ 8, ಯಾದಗಿರಿ 3, ಬೀದರ್, ಚಿತ್ರದುರ್ಗ, ವಿಜಯಪುರ ಜಿಲ್ಲೆಯಲ್ಲಿ ತಲಾ 2 ಪಾಸಿಟಿವ್ ವರದಿಯಾಗಿದೆ .