News Karnataka Kannada
Friday, May 03 2024
ಬೆಂಗಳೂರು ನಗರ

ಬೆಂಗಳೂರು: ಗ್ರೀನ್ ಪೀಸ್ ಇಂಡಿಯಾ ಸಮೀಕ್ಷೆ, ಮಹಿಳೆಯರು ಮತ್ತು ಮಕ್ಕಳಿಗೆ ಉಚಿತ ಸಾರಿಗೆ ವ್ಯವಸ್ಥೆ

Greenpeace India survey, Bengalureans favour free transport for women and children
Photo Credit : By Author

ಬೆಂಗಳೂರು:  ನಗರದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ ಪ್ರಯಾಣಿಕರ ಅನುಭವಗಳು, ಭಾವನೆಗಳು ಮತ್ತು ಸವಾಲುಗಳನ್ನು ಸೆರೆಹಿಡಿಯಲು ಗ್ರೀನ್‌ಪೀಸ್ ಇಂಡಿಯಾ ಇತ್ತೀಚಿಗೆ ಸಮೀಕ್ಷೆಯೊಂದನ್ನು ನಡೆಸಿದ್ದು, ಆ ಸಮೀಕ್ಷೆಯ ವರದಿ ʻಬಸ್ಲಿಂಗ್ ಥ್ರೂ ಬೆಂಗಳೂರುʼ, ಅಕ್ಟೋಬರ್ 14, 2022 ರಂದು ಬೆಂಗಳೂರಿನಲ್ಲಿ ʻಬೆಂಗಳೂರಿನಲ್ಲಿ ಸಾರ್ವಜನಿಕ ಸಾರಿಗೆಯ ಪುನರುತ್ಥಾನʼ ಎಂಬ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು.

ವರದಿ ಬಿಡುಗಡೆಯ ಜೊತೆಗೆ, ‘ಬೆಂಗಳೂರಿನಲ್ಲಿ ಬಸ್ಸು ಮತ್ತು ಸಾರ್ವಜನಿಕ ಸಾರಿಗೆ’ ಕುರಿತಂತೆ ವಿವಿಧ ಆಯಾಮದ ಚರ್ಚೆಯನ್ನು ನಡೆಸಲಾಯಿತು. ಈ ಚರ್ಚೆಯಲ್ಲಿ ಬಿಎಂಟಿಸಿ ನಿರ್ದೇಶಕ (ಐಟಿ), ಸೂರ್ಯ ಸೇನ್, ಆಶಿಶ್ ವರ್ಮಾ, ವಿಜ್ಞಾನಿ, ಭಾರತೀಯ ವಿಜ್ಞಾನ ಸಂಸ್ಥೆ,ಶ್ರೀನಿವಾಸ ಅಲವಿಲ್ಲಿ, ಜನಾಗ್ರಹ, ಶಹೀನ್‌ ಶಾಸ, ಬೆಂಗಳೂರು ಬಸ್‌ ಪ್ರಯಾಣಿಕರ ವೇದಿಕೆ,  ಯಶೋಧಾ, ಮುನ್ನಡೆ ಮುಂತಾದ ವಿವಿಧ ವಲಯದ ಭಾಗೀದಾರರು ಪಾಲ್ಗೊಂಡಿದ್ದರು.

ಚರ್ಚೆಯಲ್ಲಿ ಮಾತನಾಡಿದ ಡಾ.ಆಶಿಶ್ ವರ್ಮಾ, “ನೀವು ಬಸ್ ಬಳಕೆದಾರರಾಗಿರಲಿ ಅಥವಾ ಬಸ್ ಬಳಸದೇ ಇರಲಿ, ಈ ಎಲ್ಲಾ ಪ್ರಯತ್ನಗಳು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸುವ ತಂತ್ರದ ಭಾಗವಾಗಿದೆ. ಎಲ್ಲವೂ ಒಂದಕ್ಕೊಂದು ಕೊಂಡಿಯಂತೆ ಸಂಪರ್ಕ ಹೊಂದಿದೆ. ಖಾಸಗೀ ಸಾರಿಗೆಗೆ ಒತ್ತು ನೀಡಿದ ಮೂಲಸೌಕರ್ಯದಿಂದಾಗಿ ಮಳೆನೀರು ಶ್ರೀಮಂತರು ಮತ್ತು ಬಡವರಬೇಧವಿಲ್ಲದೆ ಎಲ್ಲರ ಮನೆಗಳಲ್ಲಿ ತುಂಬಲು ಕಾರಣವಾಯಿತು. ಈ ಸರಪಳಿಯಲ್ಲಿ ಬಸ್ಸು ಒಳಗೊಳ್ಳುತ್ತದೆʼʼಎಂದರು.

ಈ ವರದಿಯು ಜನಸಾಮಾನ್ಯರ ಕೈಗೆಟುಕುವ, ಸುರಕ್ಷಿತ, ಅಂತರ್ಗತ/ಎಲ್ಲರನ್ನೂ ಒಳಗೊಳ್ಳುವ, ಆರಾಮದಾಯಕ ಮತ್ತು ವಿಶ್ವಾಸಾರ್ಹ ಬಸ್ ಆಧಾರಿತ ಸಾರ್ವಜನಿಕ ಸಾರಿಗೆಯನ್ನು ಸಾಧಿಸಲು ಅಗತ್ಯವಿರುವ ಅಂಶಗಳತ್ತ ಗಮನಹರಿಸುತ್ತದೆ. ಇದು ನಗರದ ಸುಸ್ಥಿರ ಭವಿಷ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಮಾಡುತ್ತಿರುವ ಪ್ರಯತ್ನವಾಗಿದೆ. ಬಸ್ ಬಳಕೆದಾರರ ದೈನಂದಿನ ಪ್ರಯಾಣದ ಅನುಭವಗಳು ಮತ್ತು ಅವರ ಪ್ರಯಾಣದ ಸಮಯದಲ್ಲಿ ಅವರು ಎದುರಿಸುವ ಸವಾಲುಗಳನ್ನು ಈ ಸಮೀಕ್ಷೆಯು ಸೆರೆಹಿಡಿಯುತ್ತದೆ. ಜನವರಿ ಮತ್ತು ಫೆಬ್ರವರಿ 2022 ರ ನಡುವೆ ನಡೆಸಿದ ಪ್ರಸ್ತುತ ಅಧ್ಯಯನವು ಶಿವಾಜಿ ನಗರ ಬಸ್ ನಿಲ್ದಾಣ, ಕೆಆರ್ ಪುರಂ ಬಸ್ ನಿಲ್ದಾಣ, ಕೆಂಪೇಗೌಡ ಬಸ್ ಟರ್ಮಿನಲ್, ಕೆಆರ್ ಮಾರ್ಕೆಟ್ ಬಸ್ ನಿಲ್ದಾಣ ಮತ್ತು ಬೆಂಗಳೂರಿನ ಚಿಕ್ಕಪೇಟೆ ಬಸ್ ನಿಲ್ದಾಣದಲ್ಲಿ ಒಟ್ಟು 558 ಬಸ್ ಬಳಕೆದಾರರನ್ನು ಸಂದರ್ಶಿಸಿದೆ.

ಬಹುಪಾಲು ಬಸ್ ಬಳಕೆದಾರರು (79 ಪ್ರತಿಶತ), ಸಾರ್ವಜನಿಕ ಸಾರಿಗೆಯ ಮೇಲೆ ಹೆಚ್ಚು ಅವಲಂಬಿತರಾಗಿರುವ ಮಹಿಳೆಯರು ಮತ್ತು ವಿದ್ಯಾರ್ಥಿಗಳಂತಹ ನಿರ್ದಿಷ್ಟ ಉದ್ದೇಶಿತ ಗುಂಪುಗಳಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯ ನೀಡುವುದನ್ನು ಶಿಫಾರಸ್ಸು ಮಾಡುತ್ತಾರೆ. ಕೋವಿಡ್-19 ರ ನಂತರದ ಅವಧಿಯಲ್ಲಿ ತಮ್ಮ ಪ್ರಯಾಣದ ಸಮಯ ಅಥವಾ ಕಾಯುವ ಸಮಯ ಹೆಚ್ಚಾಗಿದೆ ಎಂದು ಸಮೀಕ್ಷೆಯಲ್ಲಿ ಪ್ರತಿಕ್ರಿಯಿಸಿದವರಲ್ಲಿ ಮೂರನೇ ಎರಡರಷ್ಟು ಜನರು ಹೇಳಿದ್ದಾರೆ. ಮುಖ್ಯವಾಗಿ ಸಾರ್ವಜನಿಕ ಸಾರಿಗೆಯ ಮೇಲೆ ಹೆಚ್ಚು ಅವಲಂಬಿತವಾಗಿರುವ ಮಹಿಳಾ ಪ್ರಯಾಣಿಕರು (18 ಪ್ರತಿಶತ) ಸಾಂಕ್ರಾಮಿಕ ರೋಗದ ನಂತರ ಪ್ರಯಾಣದ ವೆಚ್ಚದಲ್ಲಿನ ಹೆಚ್ಚಳದ ಬಗ್ಗೆ ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

“ಕೋವಿಡ್ ನಂತರದ ದಿನಗಳಲ್ಲಿ ಬಿಎಂಟಿಸಿ ಪ್ರಯಾಣ ಪ್ರಯಾನಿಕರಿಗೆ ದುರ್ಬರ ಎನಿಸಿದೆ. ಪ್ರಸ್ತುತ ಕೊನೆಯ ಮೈಲಿ ಸಂಪರ್ಕವನ್ನು ಸುಧಾರಿಸುವ ತುರ್ತು ಅಗತ್ಯವಿದೆ. ನಮ್ಮ ಬಸ್ಸುಗಳು ಹೆಚ್ಚಾಗಿ ಬೆಂಗಳೂರಿನ ಕೇಂದ್ರಭಾಗದ ಮೇಲೆ ಮಾತ್ರ ಕೇಂದ್ರೀಕರಿಸುತ್ತಿವೆ ಮತ್ತು ನಾವು ಅದನ್ನು ಬದಲಾಯಿಸಬೇಕಾಗಿದೆ. ಪ್ರಯಾಣದ ಸಮಯವನ್ನು ಕಡಿಮೆ ಮಾಡಲು ನಾವು ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಮತ್ತು ಬಸ್ಸು ಸಂಚರಿಸಲು ಮೀಸಲಾದ ಲೇನ್‌ಗಳನ್ನು ಅಳವಡಿಸುವುದು ಬಹಳ ಮುಖ್ಯ.ʼʼ ಎನ್ನುತ್ತಾರೆ ಬೆಂಗಳೂರು ಬಸ್ ಪ್ರಯಾಣಿಕ ವೇದಿಕೆಯ ಶಾಹೀನ್ ಶಾಸ.

“ಬೆಂಗಳೂರಿನಲ್ಲಿ ಪ್ರಸ್ತುತ ಲಭ್ಯವಿರುವ ಸಾರ್ವಜನಿಕ ಬಸ್ ಸಾರಿಗೆ  ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮತ್ತು ಪರಿಸರವನ್ನು ಹದಗೆಡಿಸಿದೆ. ಗ್ರೀನ್‌ ಪೀಸ್‌ ಸಮೀಕ್ಷೆಯೂ ಸೇರಿದಂತೆ ಹಲವಾರು ಸಮೀಕ್ಷೆಗಳು ಜನರಿಗೆ ಅವರ ಕೆಲಸ, ಶಿಕ್ಷಣ, ಆರೋಗ್ಯ ಮತ್ತು ದೈನಂದಿನ ಅಗತ್ಯಗಳಿಗಾಗಿ ಹೆಚ್ಚು ಸುಲಭವಾಗಿ, ನಿಯಮಿತವಾಗಿ, ವಿಶ್ವಾಸಾರ್ಹ, ಸುರಕ್ಷಿತ ಮತ್ತು, ಮುಖ್ಯವಾಗಿ, ಕೈಗೆಟುಕುವ ಬಸ್ ಸೇವೆಗಳ ಅಗತ್ಯವಿದೆ ಎಂಬುದನ್ನು ದೃಢಪಡಿಸಿವೆ. ನಾವು ನಮ್ಮ ನಗರಗಳನ್ನು ವಿನ್ಯಾಸಗೊಳಿಸುವಲ್ಲಿ ಮತ್ತು ಸುಸ್ಥಿರ ಸಾರಿಗೆ ವ್ಯವಸ್ಥೆಗೆ ನಮ್ಮ ಸಂಪನ್ಮೂಲಗಳನ್ನು ಆದ್ಯತೆಯ ಮೇರೆಗೆ ಬಳಸಿಕೊಳ್ಳಬೇಕಾಗಿದೆ.ಬಸ್ ಲೇನ್‌ಗಳಂತಹ ಸೌಲಭ್ಯಗಳನ್ನು ಒಟ್ಟಾರೆಯಾಗಿ ನಗರಕ್ಕೆ ಧನಾತ್ಮಕ ಬೆಳವಣಿಗೆಯಾಗಿ ನಾವು ನೋಡಬೇಕಾಗಿದೆ, ಏಕೆಂದರೆ ಇದು ಕಡಿಮೆ ಸಂಚಾರ ದಟ್ಟಣೆ ಮತ್ತು ಮಾಲಿನ್ಯದೊಂದಿಗೆ ಎಲ್ಲಾ ಪ್ರಯಾಣಿಕರಿಗೆ ಪ್ರಯೋಜನವನ್ನು ನೀಡುತ್ತದೆ” ಎಂದು ಗ್ರೀನ್‌ಪೀಸ್ ಇಂಡಿಯಾದ ಹವಾಮಾನ ಮತ್ತು ಇಂಧನ ವಿಭಾಗದ ಪ್ರಚಾರಕ ಶರತ್ ಎಂ.ಎಸ್ ಹೇಳುತ್ತಾರೆ.

ಸಮೀಕ್ಷೆಯಲ್ಲಿ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಸ್ಸುಗಳನ್ನು (ಶೇ. 45) ಮತ್ತು ಪರಿಷ್ಕ್ರತ ಬಸ್ ವೇಳಾಪಟ್ಟಿಗಳನ್ನು ಕೋರಿದ್ದಾರೆ. ಬಸ್ಸುಗಳಲ್ಲಿ ಸುರಕ್ಷತೆ ಹಾಗು ಭದ್ರತೆಯನ್ನು ಸುಧಾರಿಸುವುದು ಮತ್ತು ಮಹಿಳೆಯರು,ಪುರುಷರು ಮತ್ತು ತೃತೀಯಲಿಂಗದವರಿಗೆ ಪ್ರತ್ಯೇಕ ಶೌಚಾಲಯಗಳು ಬಿಎಂಟಿಸಿ ಬಳಕೆದಾರರ ಇತರ ಪ್ರಮುಖ ಕಾಳಜಿಗಳಾಗಿವೆ. ಬಿಎಂಟಿಸಿ ಪ್ರಯಾಣಿಕರು ಅಸ್ತಿತ್ವದಲ್ಲಿರುವ ಬಸ್ ಲೇನ್‌ಗಳ ರಕ್ಷಣೆ ಮತ್ತು ಅಂತಹ ಹೆಚ್ಚಿನ ಲೇನ್‌ಗಳ ಅನುಷ್ಠಾನದ ಅಗತ್ಯವನ್ನು ಒತ್ತಿ ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಐಟಿ ಬಿಎಂಟಿಸಿ ನಿರ್ದೇಶಕ ಸೂರ್ಯ ಸೇನ್, ಬಿಎಂಟಿಸಿಗೆ ಇದು ದ್ವಂದ್ವ ಸವಾಲಾಗಿದೆ, ನಗರವನ್ನು ಸುಸ್ಥಿರಗೊಳಿಸುವುದರ ಜೊತೆಗೆ ಸಂಸ್ಥೆಯಾಗಿ ಬಿಎಂಟಿಸಿಯನ್ನು ನಾವು ಉಳಿಸಿಕೊಳ್ಳಬೇಕಾಗಿದೆ. BMTC ಯ ದೃಷ್ಟಿ  ಬಹಳ ಸರಳವಾಗಿದ್ದು ಸಾರ್ವಜನಿಕ ಬಸ್‌ಗಳನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡುವುದು ನಮ್ಮ ಆದ್ಯತೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12429
Bhavana S.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು