News Karnataka Kannada
Sunday, May 19 2024
ಬೆಂಗಳೂರು ನಗರ

ಬೆಂಗಳೂರು: ರಿಚ್ಮಂಡ್ ರಸ್ತೆಯಲ್ಲಿ 85 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಪ್ರಾರಂಭ

Bengaluru: 85-bed multi-speciality hospital to be set up on Richmond Road
Photo Credit : News Kannada

ಬೆಂಗಳೂರು, 17 ಜನವರಿ 2023: ವಿಶ್ವ ದರ್ಜೆಯ ಆರೋಗ್ಯ ಸೇವೆಗಳನ್ನು ಒದಗಿಸುವ ಪ್ರಯತ್ನದ ಭಾಗವಾಗಿ, ಫೋರ್ಟಿಸ್ ಹೆಲ್ತ್‌ಕೇರ್ ಇಂದು ನಗರದ ರಿಚ್‌ಮಂಡ್‌ ರಸ್ತೆಯಲ್ಲಿ ಅತ್ಯಾಧುನಿಕ, ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯನ್ನು ಪ್ರಾರಂಭಿಸಿದೆ.

ಸೆಂಟ್ರಲ್ ಬೆಂಗಳೂರಿನಲ್ಲಿರುವ ಈ ಆಸ್ಪತ್ರೆಯನ್ನು ಕರ್ನಾಟಕ ವಿಧಾನಸಭೆಯ ಗೌರವಾನ್ವಿತ ಸದಸ್ಯರಾದ ನಲಪಾಡ್ ಅಹಮದ್ ಹ್ಯಾರಿಸ್ ಉದ್ಘಾಟಿಸಿದರು. ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗಳ ವಹಿವಾಟು ಮುಖ್ಯಸ್ಥರಾದ ಶ್ರೀ ಅಕ್ಷಯ್ ಓಲೇಟಿ ಮತ್ತು ರಿಚ್‌ಮಂಡ್‌ ರಸ್ತೆಯ ಫೋರ್ಟಿಸ್ ಆಸ್ಪತ್ರೆ ಸೌಲಭ್ಯಗಳ ನಿರ್ದೇಶಕರಾದ ರಘುರಾಮ್ ಎಂ.ಡಿ ಅವರ ಉಪಸ್ಥಿತರಿದ್ದರು.

50 ಪರಿಣಿತ ವೈದ್ಯರ ಬಲವಾದ ತಂಡದೊಂದಿಗೆ ಈ ಘಟಕವು ರಿಚ್‌ಮಂಡ್‌ ಟೌನ್ ಮತ್ತು ಸುತ್ತಮುತ್ತಲಿನ ನಿವಾಸಿಗಳು ಮತ್ತು ಜನರ ಆರೋಗ್ಯದ ಅಗತ್ಯತೆಗಳನ್ನು ಪೂರೈಸುತ್ತದೆ. ಆಂತರಿಕ ಔಷಧ, ಸಾಮಾನ್ಯ ಶಸ್ತ್ರಚಿಕಿತ್ಸೆ, ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ, ಬಂಜೆತನ ನಿವಾರಣೆ, ಪೀಡಿಯಾಟ್ರಿಕ್ಸ್, ಮೂಳೆಚಿಕಿತ್ಸೆ, ಮೂತ್ರಶಾಸ್ತ್ರ, ವೈದ್ಯಕೀಯ ಮತ್ತು ಸರ್ಜಿಕಲ್ ಆಂಕೊಲಾಜಿ ಮತ್ತು ನಾನ್ ಇನ್ವೇಸಿವ್ ಕಾರ್ಡಿಯಾಲಜಿ ಮತ್ತು ಇತರ ವೈದ್ಯಕೀಯ ಸೌಲಭ್ಯಗಳು ಇಲ್ಲಿ ಲಭ್ಯವಿವೆ. 24 ಗಂಟೆ ತುರ್ತು ಸೇವೆಗಳ ಜೊತೆಗೆ, ಆಸ್ಪತ್ರೆಯಲ್ಲಿ ಒಪಿಡಿ ಸೌಲಭ್ಯ, ರಕ್ತ ಸಂಗ್ರಹಣೆ, ರೋಗ ನಿರ್ಣಯ ಮತ್ತು ಪ್ರಯೋಗಾಲಯ, ವಿಕಿರಣಶಾಸ್ತ್ರ, ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ಐಸಿಯುಮತ್ತು ತೃತೀಯ ಹಂತದ 3 ಎನ್‌ಐಸಿಯು ಸೇವೆಗಳು ಇವೆ.

ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ವಿಧಾನಸಭೆಯ ಗೌರವಾನ್ವಿತ ಸದಸ್ಯ ನಲಪಾಡ್ ಅಹಮದ್ ಹ್ಯಾರಿಸ್, ರಿಚ್ಮಂಡ್ ರಸ್ತೆಯಲ್ಲಿ ಉನ್ನತ ದರ್ಜೆಯ ವೈದ್ಯಕೀಯ ಮೂಲಸೌಕರ್ಯ ಮತ್ತು ಹೆಸರಾಂತ ವೈದ್ಯರೊಂದಿಗೆ ಮಲ್ಟಿಸ್ಪೆಷಾಲಿಟಿ ಹೆಲ್ತ್‌ಕೇರ್ ಸೌಲಭ್ಯವನ್ನು ಪ್ರಾರಂಭಿಸುವ ಮೂಲಕ ಫೋರ್ಟಿಸ್ ಹೆಲ್ತ್‌ಕೇರ್ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದಕ್ಕಾಗಿ ನಾನು ಅಭಿನಂದಿಸುತ್ತೇನೆ. ಗುಣಮಟ್ಟದ ಆರೋಗ್ಯ ಸೇವೆ ಖಚಿತಪಡಿಸಿಕೊಳ್ಳಲು ಅತ್ಯಾಧುನಿಕ ಮೂಲಸೌಕರ್ಯ ಮತ್ತು ಸೌಕರ್ಯಗಳೊಂದಿಗೆ ವಿಶ್ವ ದರ್ಜೆಯ ವೈದ್ಯಕೀಯ ಸೇವೆಗಳನ್ನು ಒದಗಿಸಲು ಫೋರ್ಟಿಸ್ ಹೆಲ್ತ್‌ಕೇರ್‌ನ ಸತತವಾಗಿ ಪ್ರಯತ್ನಿಸುತ್ತಿದೆ. ಇದು ಆರೋಗ್ಯ ಸೇವಾ ಕ್ಷೇತ್ರದಲ್ಲಿನ ಡೈನಾಮಿಕ್ಸ್ ಅನ್ನು ಪರಿವರ್ತಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂದರು.

ಬೆಂಗಳೂರು ಫೋರ್ಟಿಸ್ ಆಸ್ಪತ್ರೆಗಳ ವಹಿವಾಟು ಮುಖ್ಯಸ್ಥರಾದ ಶ್ರೀ ಅಕ್ಷಯ್ ಓಲೇಟಿ ಮಾತನಾಡಿ, 30 ವರ್ಷಗಳ ಕ್ಲಿನಿಕಲ್ ಉತ್ಕೃಷ್ಟತೆ ಮತ್ತು ಪರಿಣತಿಯೊಂದಿಗೆ, ಫೋರ್ಟಿಸ್ ಹೆಲ್ತ್‌ಕೇರ್ ಅನೇಕ ಜೀವಗಳನ್ನು ತಲುಪಿದೆ ಮತ್ತು ಉಳಿಸಿದೆ. ಫೋರ್ಟಿಸ್ ಬೆಂಗಳೂರು ಆಸ್ಪತ್ರೆಗಯಲ್ಲಿನ ಆರೋಗ್ಯ ಸೇವೆಗಳ ಕುರಿತು ರೋಗಿಗಳು ಇಟ್ಟಿರುವ ನಿರಂತರ ನಂಬಿಕೆಯೇ ನಮಗೆ ಜಾಗತಿಕ ಗುಣಮಟ್ಟದ ಅಸಾಧಾರಣ ತರಬೇತಿ ಪಡೆದ ವೈದ್ಯರು ಮತ್ತು ಶಸ್ತ್ರಚಿಕಿತ್ಸಕರ ಬೆಂಬಲದೊಂದಿಗೆ ಮತ್ತೊಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಪ್ರಾರಂಭಿಸಲು ಅನುವು ಮಾಡಿಕೊಟ್ಟಿದೆ. ನಮ್ಮಲ್ಲಿರುವ ವೈದ್ಯರು, ಅರೆವೈದ್ಯಕೀಯ ಮತ್ತು ನರ್ಸಿಂಗ್ ಸಿಬ್ಬಂದಿ, ರೋಗಿಗಳಿಗೆ ತಡೆರಹಿತ ಸೌಕರ್ಯ ಮತ್ತು ಆರೈಕೆ ಒದಗಿಸುವ ಮೂಲಕ ರೋಗಿಗಳ ಕುಟುಂಬದಲ್ಲಿ ನಗು ಮೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಾರೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು