News Karnataka Kannada
Monday, May 06 2024
ಬೆಂಗಳೂರು ನಗರ

ನಟ ಪ್ರಕಾಶ್‌ ರಾಜ್‌ ಒಬ್ಬ ಹಂದಿ ಎಂದ ಯತ್ನಾಳ್‌

Actor Prakash Raj is a pig, says Yatnal
Photo Credit : Twitter

ಬೆಂಗಳೂರು: ನಟ ಪ್ರಕಾಶ್‌ ರಾಜ್‌ ಸನಾತನ ಧರ್ಮ ಕಾಗೆ ಎಂದು ಈ ಹಿಂದೆ ಹೇಳಿಕೆ ನೀಡಿದ್ದರು. ಈ ಬಗ್ಗೆ ವಿಜಯಪುರದಲ್ಲಿ ಕಿಡಿಕಾರಿದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ಪ್ರಕಾಶ್‌ ರಾಜ್ ಅನ್ನುವ ಹಂದಿ ನಮ್ಮ ರಾಜ್ಯದಲ್ಲಿದೆ ಎಂದು ಹೇಳುವ ಮೂಲಕ ಹಂದಿಗೆ ಹೋಲಿಕೆ ಮಾಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ವಿಷದ ಹಾವು ಎಂದ ಉದಯನಿಧಿ ಸ್ಟಾಲಿನ್ ಹೇಳಿಕೆ ನೀಡಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿ ಕರುಣಾನಿಧಿ ತಳಿಯೆ ವಿಷದ ಹಾವು. ಅದು ಕೆಟ್ಟ ತಳಿ ಇದೆ. ಈ ತಳಿ ದೇಶಕ್ಕೆ ನಿಷ್ಠೆ ಇಲ್ಲ, ಧರ್ಮಕ್ಕೆ ನಿಷ್ಠೆ ಇಲ್ಲ. ಒಂದು ಕಾಲದಲ್ಲಿ ಎಲ್‌ಟಿಟಿಇ ದೇಶ ವಿರೋಧಿ ಸಂಘಟನೆಗೆ ಸಪೋರ್ಟ್ ಮಾಡಿದವರು ಅವರು. ದೇಶವಿರೋಧಿ ಚಟುವಟಿಕೆಗೆ ಸಪೋರ್ಟ್ ಮಾಡಿದವರು. ಅವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಇದೇ ವೇಳೆ ಪ್ರಕಾಶ್ ರಾಜ್ ವಿರುದ್ಧವೂ ಯತ್ನಾಳ್ ವಾಗ್ದಾಳಿ ಮಾಡಿದ್ದಾರೆ. ಸನಾತನ ಧರ್ಮ ಕಾಗೆ ಎಂದ ಪ್ರಕಾಶ್ ರಾಜ್, ಹಂದಿ ಇದ್ದ ಹಾಗೆ. ಪ್ರಕಾಶ್ ರಾಜ್ ಅನ್ನುವ ಹಂದಿ ನಮ್ಮ ರಾಜ್ಯದಲ್ಲಿದೆ. ನಗರ ಮತ್ತು ಗ್ರಾಮೀಣ ಭಾಗದಲ್ಲಿ ಊರು ಸ್ವಚ್ಛ ಮಾಡಲು ಹಂದಿ ಇರುತ್ತದೆ. ಹಾಗೆ ನಮ್ಮಲ್ಲೂ ಪ್ರಕಾಶ ರಾಜ್ ಅನ್ನುವ ಹಂದಿ ಇದೆ ಎಂದ ಯತ್ನಾಳ್ ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು